BelgaumDistrictsKarnatakaLatestMain Post

ಮುಸ್ಲಿಂ ವೋಟ್ ಬ್ಯಾಂಕ್‍ಗಾಗಿ ದೇಶಭಕ್ತಿಗೆ ತೊಂದರೆ ಕೊಡಬೇಡಿ: ಮುತಾಲಿಕ್

ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ನೀವು ಮುಸ್ಲಿಂ ವೋಟ್ ತೆಗೆದುಕೊಳ್ಳುವ ಸಲುವಾಗಿ ರಾಷ್ಟ್ರೀಯ ದೇಶಭಕ್ತಿಗೆ ತೊಂದರೆ ಕೊಡಬೇಡಿ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವಾಗ ಯಾವಾಗ ಎಲೆಕ್ಷನ್ ಬರುತ್ತೆ ಆಗ ಆರ್‍ಎಸ್‍ಎಸ್‍ನ ಬೈಯುತ್ತಿರುತ್ತಾರೆ. ಮುಸ್ಲಿಂ ವೋಟ್ ಸಲುವಾಗಿ ನೀವು ಆರ್‍ಎಸ್‍ಎಸ್ ಅನ್ನು ಬೈಯತ್ತೀರಿ. ನೀವು ಮುಸ್ಲಿಂ ವೋಟ್ ಸಲುವಾಗಿ ದೇಶಭಕ್ತಿಗೆ ತೊಂದರೆ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೋಮಾಂಸ ತಿನ್ನುವವರ ಜೊತೆ ಬೇಡ, ಹಿಂದೂಗಳು ಹಿಂದೂ ಡ್ರೈವರ್ ಜೊತೆ ದೇವಾಲಯಕ್ಕೆ ಹೋಗಲಿ: ಭಾರತ್ ರಕ್ಷಣ್ ವೇದಿಕೆ

ನೀವು ಆರ್‍ಎಸ್‍ಎಸ್ ಅನ್ನು ಅಲ್ ಖೈದಾಗೆ ಹೋಲಿಸುತ್ತೀರಿ. ಅಲ್ ಖೈದಾ ಕೈಯಲ್ಲಿ ಬಾಂಬ್ ಹಿಡಿದುಕೊಂಡು ಇಡೀ ಜಗತ್ತಿನಲ್ಲಿ ಭಯೋತ್ಪಾದನೆ ಮಾಡುತ್ತಾ ತೀರುಗುವವರು ಅನ್ನೋದು ಗೊತ್ತಿದೆ. ಆರ್‍ಎಸ್‍ಎಸ್ ಎಂದಾದರೂ ಬಾಂಬ್, ಬಂದೂಕು ಹಿಡಿದಿರುವದನ್ನಾ ನೀವು ನೋಡಿದ್ದಿರಾ. ದೇಶದ್ರೋಹಿ ಕೃತ್ಯ ಮಾಡಿದ್ದರ ಬಗ್ಗೆ ಒಂದಾದರು ಉದಾಹರಣೆ ಇದೆಯಾ? ಆರ್‍ಎಸ್‍ಎಸ್‍ನ ಅಲ್ ಖೈದಾಗೆ ಹೋಲಿಸುವುದು ಅತ್ಯಂತ ಖಂಡನೀಯ ಎಂದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

ಸಿದ್ದರಾಮಯ್ಯ ನೀವು ಅಕ್ಷಮ್ಯ ಅಪರಾಧವನ್ನ ಮಾಡುತ್ತಿದ್ದಿರಿ. ನೀವು ಮುಸ್ಲಿಂ ವೋಟ್ ತೆಗೆದುಕೊಳ್ಳಿ ಬೇಡ ಅನ್ನುವುದಿಲ್ಲ. ಆದರೆ ರಾಷ್ಟ್ರೀಯ ದೇಶ ಭಕ್ತಿ ಹಿನ್ನೆಲೆಗೆ ತೊಂದರೆ ಕೊಡಬೇಡಿ ಎಂದು ವಾಗ್ದಾಳಿ ನಡೆಸಿದರು.

YouTube video

Leave a Reply

Your email address will not be published. Required fields are marked *

Back to top button