ಧಾರವಾಡ: ನೂತನ ಸಂಸತ್ ಭವನಕ್ಕೆ ದುಷ್ಕರ್ಮಿಗಳು ನುಗ್ಗಿ ಗಲಾಟೆ (Security Breach in LokSabha) ಮಾಡಿರುವ ಪ್ರಕರಣದ ಹಿಂದೆ ಕಾಂಗ್ರೆಸ್ ಕುತಂತ್ರ ಇರಬಹುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಳವಳ ವ್ಯಕ್ತಪಡಿಸಿದ್ದಾರೆ.
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ಈ ಘಟನೆ ಆಘಾತಕಾರಿ ಆಗಿದೆ, ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಆದ್ರೆ, ಇದು ಕಾನೂನು ಬಾಹಿರ ಚಟುವಟಿಕೆ. ಭಯೋತ್ಪಾದಕ ಕೃತ್ಯದ ರೀತಿಯಲ್ಲಿ ನಡೆದಿದೆ, ಇದರ ಹಿಂದೆ ಕಾಂಗ್ರೆಸ್ (Congress) ಕುತಂತ್ರ ಇರಬಹುದು ಎಂದು ಅನುಮಾನ ವ್ಯಕ್ತಪಡಿದ್ದಾರೆ.
Advertisement
ಬುದ್ಧಿಜೀವಿಗಳ ಮೂಲಕ ಕಾಂಗ್ರೆಸ್ ಹೀಗೆ ಮಾಡಿಸಿರಬಹುದು ಎಂದ ಅವರು, ಸಂಸದ ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅವರು ದೇಶಭಕ್ತ ಅವರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮುಸ್ಲಿಂ ಶಿಲ್ಪಿಗಳಿಂದ ರೂಪುಗೊಳ್ಳುತ್ತಿದೆ ರಾಮನ ವಿಗ್ರಹ
Advertisement
Advertisement
ಖಲಿಸ್ತಾನಿ ನಾಯಕ ಪನ್ನು ಈ ಹಿಂದೆಯೇ 22 ವರ್ಷಗಳ ಹಿಂದಿನ ದಾಳಿಯಂತೆ ದಾಳಿ ಮಾಡುತ್ತೇವೆ ಎಂದು ಹೇಳಿದ್ದ. ಆತನ ಹೇಳಿಕೆಯಂತೆ ಸಂಸತ್‌ನಲ್ಲಿ ನಡೆದ ಘಟನೆ ನೋಡಿದ್ರೆ ಲಿಂಕ್ ಆಗುತ್ತಿದೆ. ಇದು ದೇಶಕ್ಕೆ ಅಪಾಯಕಾರಿಯಾಗಿದ್ದು, ಪ್ರತ್ಯೇಕತಾವಾದಿಗಳ ಹಿನ್ನೆಲೆ ಬಗ್ಗೆಯೂ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
6 ಜನ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಸರಿಯಲ್ಲ, ಇದೊಂದು ಹಸಿ ಸುಳ್ಳು. ಹಾಗಾದ್ರೆ ಜನ ಮೋದಿಗೆ ಯಾಕೆ ಮತ ಹಾಕುತ್ತಾರೆ? ಆರೂ ಜನ ಆರೋಪಿಗಳು ಬೇರೆ ಬೇರೆ ರಾಜ್ಯದವರು, ಇವರೆಲ್ಲ ಹೇಗೆ ಸೇರಿದ್ರು ಎಂಬುದೇ ಆಘಾತಕಾರಿ. ಜೆಎನ್‌ಯು ನಲ್ಲಿ ದೇಶದ್ರೋಹಿ ಘೋಷಣೆ ಹಾಕಿದ್ದರು, ಅದೇ ಮಾದರಿಯೊಲ್ಲಿ ಇಲ್ಲಿಯೂ ಆಗಿದೆ. ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುವ ಪ್ರವೃತ್ತಿ ಇದರಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ ಅವ್ರು ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಲ್ಲವೂ ತನಿಖೆ ಆಗುತ್ತೆ: ಪ್ರಹ್ಲಾದ್ ಜೋಶಿ