ಧಾರವಾಡ: ನಾಡಿನ ಜನತೆ ಈಗ ಯುಗಾದಿ ಹಬ್ಬದ (Ugadi Festival) ಸಂಭ್ರಮದಲ್ಲಿದ್ದಾರೆ. ಮುಂದೆ ಶ್ರೀರಾಮ ನವಮಿ ಕೂಡ ಬರಲಿದೆ. ಈ ಎರಡೂ ಹಬ್ಬಗಳು ಹಲಾಲ್ ಮುಕ್ತವಾಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದರು.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಹಲಾಲ್ ಎಂಬುದು ಇಸ್ಲಾಂಗೆ ಸಂಬಂಧಿಸಿದ್ದು. ಅದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಅವರು ಹಲಾಲ್ ಮಾಡಿಕೊಂಡರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅದನ್ನು ಹಿಂದೂಗಳ ಮೇಲೆ ಹೇರುವುದನ್ನು ನಾವು ಒಪ್ಪುವುದಿಲ್ಲ. ಇಸ್ಲಾಂನವರು ಹಲಾಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಕುಂಕುಮ, ಅರಿಶಿನ, ತೆಂಗಿನಕಾಯಿ, ತಾಳಿ ಇವೆಲ್ಲವನ್ನು ಹಲಾಲ್ ಮೂಲಕ ಮಾರಾಟ ಮಾಡುತ್ತಾರೆ. ಅಂತವರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ
- Advertisement -
- Advertisement -
ಹಿಂದೂಗಳು ಶುದ್ಧ ಮತ್ತು ಪವಿತ್ರವಾಗಿರುವ ವಸ್ತುಗಳನ್ನು ಖರೀದಿ ಮಾಡಿ ದೇವರಿಗೆ ಸಮರ್ಪಿಸಬೇಕು. ಗೋ ಹಂತಕರ, ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು. ಮುಸ್ಲಿಂ ವ್ಯಾಪಾರಿಗಳು ವಸ್ತುಗಳ ಮೇಲೆ ಉಗುಳಿ ಹೇಸಿಗೆ ಮಾಡುತ್ತಾರೆ. ಅಂತವರ ಬಳಿ ನಾವು ಯಾಕೆ ವ್ಯಾಪಾರ ಮಾಡಬೇಕು? ಅಂತದನ್ನು ತೆಗೆದುಕೊಂಡು ನೈವೇದ್ಯ ಮಾಡಿ, ಪೂಜೆ ಮಾಡುವುದು ಸರಿಯಲ್ಲ. ಇದು ಶಾಸ್ತ್ರದ ವಿರುದ್ಧವಾದದ್ದು. ನಮ್ಮ ದೇವರನ್ನು ನಂಬದೇ ಇರುವವರ ಜೊತೆ ನಾವು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್ ಬಾಂಬ್
- Advertisement -
ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಉಚ್ಚಾಟನೆಯ ಕುರಿತು ಪ್ರತಿಕ್ರಿಯಿಸಿ, ಉಚ್ಚಾಟನೆ ಪ್ರಕ್ರಿಯೆಯನ್ನು ಬಿಜೆಪಿ ವರಿಷ್ಠರು ಮರು ಪರಿಶೀಲಿಸಬೇಕು. ಇದು ಪಕ್ಷದ ಆಂತರಿಕ ವಿಚಾರ. ಇಡೀ ದೇಶದಲ್ಲಿ ಇರುವ ಬಿಜೆಪಿಯು ಹಿಂದುತ್ವದ ಪಕ್ಷ. ಆದರೆ, ಸದ್ಯ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ದುರದೃಷ್ಟಕರ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ತಾಪಮಾನ ಇಳಿಕೆ – 2 ದಿನದಲ್ಲಿ 7 ಡಿಗ್ರಿ ಇಳಿಕೆ
- Advertisement -
ಯತ್ನಾಳ್ ಅವರು ಹಿಂದುತ್ವದ ಗಟ್ಟಿ ಧ್ವನಿ. ಅವರ ಉಚ್ಚಾಟನೆಯಿಂದ ರಾಜ್ಯದಲ್ಲಿ ಎಲ್ಲೋ ಒಂದು ಕಡೆ ನೋವು, ವೇದನೆ ಇದೆ. ನಮ್ಮ ಸಂಘಟನೆ ಕೂಡ ಕೇಂದ್ರದ ಪದಾಧಿಕಾರಿಗಳಿಗೆ ಈ ಕುರಿತು ಆಗ್ರಹ ಮಾಡುತ್ತೇವೆ. ಹಿಂದುತ್ವದ ವಿಚಾರ ಬೆಳೆಸಲು ಅವಕಾಶ ಮಾಡಿ ಕೊಡಬೇಕು. ಈಗ ಹಿಂದುತ್ವವನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್
ಯತ್ನಾಳ್ ನಿಜವಾದ ಹಿಂದುತ್ವವಾದಿ. ಅವರು ಹೊಸ ಪಕ್ಷ ಮಾಡುವಾಗ ನಮಗೆ ಆಹ್ವಾನ ನೀಡಿದರೆ ಅದನ್ನು ನಮ್ಮ ಸಂಘಟನೆ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಅದಕ್ಕಿಂತ ಪೂರ್ವದಲ್ಲಿ ಯತ್ನಾಳ್ ಅವರ ಉಚ್ಚಾಟನೆಯನ್ನು ಬಿಜೆಪಿ ಮರು ಪರಿಶೀಲಿಸಬೇಕು. ಅವರನ್ನು ಪಕ್ಷದೊಳಗೆ ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿ ತಪ್ಪು ಒಪ್ಪು ಏನೆಂದು ವರಿಷ್ಠರೇ ನಿರ್ಧಾರ ಮಾಡಲಿ. ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎನ್ನುತ್ತಿದ್ದೇವೆ. ಹಿಂದುತ್ವದ ವಿಚಾರಧಾರೆ ಹಾಳಾಗದಂತೆ ನೋಡಿಕೊಳ್ಳಲು ಯತ್ನಾಳ್ ಅವರನ್ನು ಪಕ್ಷದ ಒಳಗಡೆ ಕರೆದುಕೊಂಡು ಬರಬೇಕು. ಈ ಸಂಬAಧ ಕೇಂದ್ರಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.