DharwadDistrictsKarnatakaLatestLeading NewsMain Post

ಮಠ-ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ: ಪ್ರಮೋದ್ ಮುತಾಲಿಕ್

ಧಾರವಾಡ: ಮಠ-ಮಂದಿರಗಳಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿ, ಹಿಂದೂ ಸಂಘಟನೆಗಳಿಗೆ ಕೊಡಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಮನವಿ ಮಾಡಿದರು.

ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಅವರು, ಮಠ ಮಂದಿರ ಬಿಟ್ಟು ಹಿಂದೂ ಸಂಘಟನೆಗಳಿಗೆ ಹಣ ಕೊಡಿ. ಹಿಂದೂ ಸಂಘಟನೆಗಳಿಗೆ ಬಲ ಕೊಡಿ. ಆಗ ನಿಮಗೆ ನಾವು ಹಿಂದೂ ರಾಷ್ಟ್ರ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಗೋ ಮಾತೆ, ಮಾತೆ ಎಂದು ಹೇಳುತ್ತಿದ್ದರು. ಅದಕ್ಕಾಗಿ ಗೋ ಹತ್ಯೆ ಕಾನೂನು ತಂದಿದ್ದಾರೆ. ಆದರೂ ಗೋಹತ್ಯೆ ನಡೆಯುತ್ತಿದೆ. ಆದರೆ ಒಂದೂ ಗೋಹತ್ಯೆ ಆಗದಂತೆ ಮಾಡುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಆದ್ದರಿಂದ ಹಿಂದೂ ಸಂಘಟನೆಗಳಿಗೆ ಸಮಾಜ ಬಲ ಕೊಡಬೇಕು ಎಂದು ತಿಳಿಸಿದರು.

ಅಂದು ಹಿಂದುತ್ವದ ಹೋರಾಟಗಳು ಯಶಸ್ವಿಯಾಗಿದ್ದವು. ಇಂದು ಅದು ಆಗುತ್ತಿಲ್ಲ. ಅವತ್ತು ಶುದ್ಧ, ಚಾರಿತ್ರ್ಯ, ತ್ಯಾಗ, ಬಲಿದಾನದ ನಾಯಕರಿದ್ದರು. ಅದರ ಪರಿಣಾಮದಿಂದ ದುಷ್ಟ ಶಕ್ತಿಗಳ ನಾಶವಾಯಿತು. ಹಿಂದವೀ ಸಮಾಜ ನಿರ್ಮಾಣ ಆಗಿತ್ತು. ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜರೇ ಉದಾಹರಣೆಯಾಗಿದ್ದಾರೆ. ಆದರೆ ಇವತ್ತಿನ ನಾಯಕರು ಯಾರು ಎಂದು ಪ್ರಶ್ನಿಸಿದ ಅವರು, ನೀಚ, ನಿರ್ಲಜ್ಜ, ಲೂಟಿಕೋರರಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

ಇಂದಿನ ನಾಯಕರು ಈ ದೇಶವನ್ನು ಬರ್ಬಾದ್ ಮಾಡುತ್ತಿದ್ದಾರೆ. ಈ ದೇಶವನ್ನು ಹಾಳು ಮಾಡುತ್ತಿದ್ದಾರೆ. ಅವರು ಇವರು ಅಲ್ಲ, ಎಲ್ಲರೂ ಅವರೇ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾವು ಯೋಚನೆ ಮಾಡಬೇಕಿದೆ. ಇವತ್ತು ನಾವು ಯಾವ ರೀತಿ ನಾಯಕರು ಬೇಕು ಅಂತಾ ವಿಚಾರ ಮಾಡಬೇಕಿದೆ. ಶಿವಾಜಿಯಂತಹ ನಾಯಕರು ಬೇಕೋ?, ಅಥವಾ ಲೂಟಿಕೋರರು ಬೇಕೋ? ಅಂತಾ ನಿಶ್ಚಯ ಮಾಡಬೇಕಿದೆ. ಎಲ್ಲರಲ್ಲೂ ಇವತ್ತು ವೇದನೆ ಇದೆ. ಎಲ್ಲೋ ತಪ್ಪುತ್ತಿದ್ದೇವೆ ಎನ್ನುವ ವೇದನೆ ಇದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿದ್ಯುತ್ ಶಾಕ್‍ನಿಂದ ದಂಪತಿ ಸಾವು- ಪತ್ನಿ ಉಳಿಸಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುರ್ಮರಣ

Live Tv

Leave a Reply

Your email address will not be published.

Back to top button