ಬಾಗಲಕೋಟೆ: ಸಿದ್ದರಾಮಯ್ಯನವರೇ , ಆರ್‌ಎಸ್‍ಎಸ್ ಬಗ್ಗೆ ಬಯ್ಯುವಂತಹದ್ದಿಲ್ಲ. ಬೇಕಾದ್ರೆ ಬಿಜೆಪಿಗೆ ಬೈಯಿರಿ, ಟೀಕೆ ಮಾಡಿ ಆದರೆ ಆರ್‌ಎಸ್‍ಎಸ್ ಬಗ್ಗೆ ಟೀಕೆ ಬೇಡ. ಆರ್‌ಎಸ್‍ಎಸ್‍ನಂತಹ ದೇಶಭಕ್ತ ಸಂಘಟನೆಯನ್ನ ತೆಗಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‍ಎಸ್ ದೇಶದ ಒಗ್ಗಟ್ಟು ಮತ್ತು ಸುರಕ್ಷತೆ ದೃಷ್ಟಿಯಿಂದ ಯೋಚಿಸುತ್ತಿದೆ. ದೇಶಭಕ್ತಿ ಬೆಳೆಸಿ ಒಗ್ಗಟ್ಟಿನ ವಿಚಾರಧಾರೆ ಪಸರಿಸುತ್ತಿದ್ದೇವೆ. ಆರ್.ಎಸ್.ಎಸ್ ನಂತಹ ದೇಶಭಕ್ತ ಸಂಘಟನೆಯನ್ನ ತೆಗಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು
ಕೋರ್ಟ್ ಮಧ್ಯಂತರ ಆದೇಶದ ನಂತರ ಒಬ್ಬನೇ ಒಬ್ಬ ವಿದ್ಯಾರ್ಥಿ ಕೇಸರಿ ಶಾಲು ಧರಿಸಿ ಹೋಗಿಲ್ಲ. ಆದೇಶ ಪಾಲಿಸಿದ್ದೇವೆ, ಪಾಲಿಸುತ್ತೇವೆ. ಸಿದ್ದರಾಮಯ್ಯನವರೇ RSS ನಿರಂತರ 96 ವರ್ಷ ದಿಂದ ಕೆಲಸ ಮಾಡುತ್ತಿದ್ದೇವೆ. ಒಂದೇ ಒಂದು ಕಳಂಕ ಇಲ್ಲದೆ, ದೇಶಭಕ್ತಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದ ಮುತಾಲಿಕ್ ಹೇಳಿದರು.