ಹುಬ್ಬಳ್ಳಿ: ಟಿಪ್ಪು ಒಬ್ಬ ಮತಾಂಧ, ದೇಶ ದ್ರೋಹಿಯಾಗಿದ್ದು, ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ (Tipu Jayanti) ಆಚರಣೆ ವಿರೋಧಿಸಿ ಹೈಕೋರ್ಟ್‌ನಲ್ಲಿ (High Court) ಪಿಐಎಲ್ ಸಲ್ಲಿಸುತ್ತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದರು.
ಈದ್ಗಾ ಮೈದಾನದ (Eidgah Maidan) ಬಳಿ ಪೊಲೀಸರು ವಶಕ್ಕೆ ಪಡೆಯುವ ಮುನ್ನ ಮಾಧ್ಯಮಗಳಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದು ತಪ್ಪು. ಈ ವಿಚಾರದಲ್ಲಿ ಪಾಲಿಕೆ ದ್ವಂದ್ವ ನಿಲುವು ತಾಳಿರುವುದು ಸರಿಯಲ್ಲ. ರಾಜ್ಯ ಬಿಜೆಪಿ (BJP) ಸರ್ಕಾರವೇ ಟಿಪ್ಪು ಜಯಂತಿ ರದ್ದು ಮಾಡಿದೆ. ಬಿಜೆಪಿ ಆಡಳಿತ ಇರುವ ಮಹಾನಗರ ಪಾಲಿಕೆ ಅನುಮತಿ ಕೊಟ್ಟಿದೆ. ಬಿಜೆಪಿಯವರು ಟಿಪ್ಪು ಜಯಂತಿ ಹೆಸರಲ್ಲಿ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಮಾವ ಮುಲಾಯಂ ಸಿಂಗ್ ನಿಧನ ನಂತ್ರ ಮೈನ್‍ಪುರಿಯಿಂದ ಡಿಂಪಲ್ ಯಾದವ್ ಕಣಕ್ಕೆ
ಟಿಪ್ಪು ಜಯಂತಿ ಆಚರಣೆ ನಾವು ಸಹಿಸಲ್ಲ, ಬೇರೆ ಮಹಾಪುರುಷರ ಜೊತೆಗಿನ ಹೋಲಿಕೆ ಸರಿಯಲ್ಲ. ಟಿಪ್ಪು ಜಯಂತಿ ಆಚರಣೆ ಬಗ್ಗೆ ಕಾನೂನು ಹೋರಾಟದ ಮೂಲಕ ಉತ್ತರ ನೀಡುತ್ತೇವೆ. ಇನ್ನೂ ಇದೇ ಮೈದಾನದಲ್ಲಿ ನಾಳೆ ಕನಕ ಜಯಂತಿ (Kanakadasa Jayanthi) ಆಚರಣೆಗೆ ನಾವೇ ಮನವಿ ಕೇಳಿದ್ದೇವೆ, ನಾವೇ ಖುದ್ದು ಆಚರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ ಪೈಪೋಟಿ – ಆಪ್ ಅಸ್ತಿತ್ವಕ್ಕಾಗಿ ಹೋರಾಟ