ಹಾವೇರಿ: ಈ ದೇಶದ ಮುಸ್ಲಿಮರು ರಾಮ ಮಂದಿರ (Ram Mandir) ಧ್ವಂಸ ಮಾಡುವ ಕನಸನ್ನು ಕಾಣಬೇಡಿ. ಹಿಂದೂ ಸಮಾಜ ಜಾಗೃತವಿದೆ, ಕಾನೂನಿದೆ, ಸಂವಿಧಾನವಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರವನ್ನು ಬ್ಲಾಸ್ಟ್ ಮಾಡಬೇಕು ಎಂಬ ಪಿಎಫ್‍ಐನವರ (PFI) ಸಂಚು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಎಟಿಎಸ್‍ನವರು ಬಂಧನ ಮಾಡಿದ ನಂತರ ಐವರು ಈ ಬಗ್ಗೆ ಬಾಯಿಬಿಟ್ಟಿದ್ದಾರೆ. ರಾಮ ಮಂದಿರವನ್ನು ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ ಐವರನ್ನು ಎಟಿಎಸ್‌ನವರು ಬಂಧಿಸಿದ್ದು ಮತ್ತು ಪಿಎಫ್‍ಐ ಸಂಘಟನೆ ಬ್ಯಾನ್ ಮಾಡಿದ್ದು ಸ್ವಾಗತಾರ್ಹ ಎಂದರು.
ಬಾಬರ್ ದೇವಸ್ಥಾನವನ್ನು ಒಡೆದು ಮಸೀದಿ ಕಟ್ಟಿದ್ದಾರೆ ಎನ್ನುವುದನ್ನು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದನ್ನು ಧಿಕ್ಕರಿಸಿ ಬಾಬ್ರಿ ಮಸೀದಿ (Babri Masjid) ಕಟ್ತೀವಿ ಅನ್ನೋದು ಡೇಂಜರಸ್ ಮಾನಸಿಕತೆ ಇದೆ. ಈ ದೇಶದ ಮಣ್ಣಿನ ಅನ್ನ ತಿಂದು ಭಾರತದ ಇಸ್ಲಾಮಿನ ಕನಸು ಕಾಣ್ತಿರೋದು ಸರಿಯಲ್ಲ. ನಿಮ್ಮ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್
ಈ ದೇಶದಲ್ಲಿ ನಿಮಗೆ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದೆ. ಮತ್ತೆ ಬಾಬ್ರಿ ಮಸೀದಿ ಕಟ್ತೀವಿ ಅನ್ನೋದು ಬಾಬರ್‌ನ ಮಾನಸಿಕತೆ. ಬಾಬರ್ ದುಷ್ಟ, ನೀಚ, ಮತಾಂಧ ಮತ್ತು ದೇಶದ್ರೋಹಿ ಇದ್ದ. ಆ ಮಾನಸಿಕತೆ ಪಿಎಫ್‍ಐನ ಮುಸ್ಲಿಂ ಗೂಂಡಾಗಳಲ್ಲಿ ಇದ್ದಿದ್ದು, ಹೊರಗೆ ಬಿದ್ದಿದೆ. ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಇದನ್ನು ತಡೆದಿದ್ದು ಸ್ವಾಗತಾರ್ಹ. ಮುಲ್ಲಾ, ಮೌಲ್ವಿಗಳು ಮತ್ತು ಮುಸ್ಲಿಂ ಮುಖಂಡರು ತಮ್ಮ ಸಮಾಜದ ಯುವಕರಿಗೆ ಈ ದೇಶಕ್ಕೆ, ಕಾನೂನಿಗೆ ಬದ್ಧರಾಗಿರಬೇಕು ಅನ್ನೋದನ್ನು ಹೇಳಿಕೊಡಬೇಕು ಎಂದು ಹೇಳಿದರು.
ಬರುವ ದೀಪಾವಳಿಯನ್ನು (Diwali) ಹಲಾಲ್ (Halal) ಮುಕ್ತ ದೀಪಾವಳಿಗೆ ಅಭಿಯಾನ ಶುರು ಮಾಡಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಎಲ್ಲ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಅಭಿಯಾನ ಮಾಡುತ್ತಿದ್ದೇವೆ. ಹಲಾಲ್ ಅನ್ನೋದು ಕುರಾನ್‍ನಲ್ಲಿ ಮಾಂಸದ ಆಹಾರದಲ್ಲಿ ಮಾತ್ರವಿತ್ತು. ಇವತ್ತು ಹಲಾಲ್ ಅನ್ನೋದು ಮಾಂಸದಲ್ಲಿ ಮಾತ್ರವಲ್ಲ, ಎಲ್ಲ ಪದಾರ್ಥಗಳಲ್ಲೂ ಹಲಾಲ್ ಸರ್ಟಿಫಿಕೇಟ್ ಇದೆ. ಇದ್ರಿಂದ ಲಕ್ಷಾಂತರ ಕೋಟಿ ಹಣ ಅಲ್ ಜಮಾಯತ್ ಅಲ್ ಉಲೇಮಾ ಟ್ರಸ್ಟ್ ಅನ್ನೋದಕ್ಕೆ ಜಮಾ ಆಗಿದೆ. ಈ ಹಣ ದುಷ್ಟರಿಗೆ, ಭಯೋತ್ಪಾದಕರಿಗೆ, ಮುಸ್ಲಿಂ ಗೂಂಡಾಗಳಿಗೆ ಹೋಗ್ತಿದೆ. ಇದನ್ನು ತಡೆಯಲು ಹಲಾಲ್ ಮುಕ್ತ ದೀಪಾವಳಿ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ, ಆದರೆ ಅವರಲ್ಲಿ ಶ್ರೀಮಂತರಿಲ್ಲವೇ?- ಬಿಜೆಪಿ ಶಾಸಕ
ಕಾಂತಾರ (Kantara) ಚಿತ್ರ ಇಡೀ ಕರ್ನಾಟಕ ಮಾತ್ರವಲ್ಲ, ದೇಶದಲ್ಲೇ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಕನ್ನಡದ ನೆಲ, ಸಂಸ್ಕೃತಿಯನ್ನು ಇಡೀ ದೇಶದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಹೆಮ್ಮೆಯ ವಿಷಯ. ಆದರೆ ಒಬ್ಬ ದುಷ್ಟ, ಒಬ್ಬ ನೀಚ, ಒಬ್ಬ ನಾಸ್ತಿಕವಾದಿ ನಟ ಚೇತನ್ ಕಲ್ಲು ಹಾಕುವ ಪ್ರಯತ್ನ ಮಾಡಿದ್ದು ಖಂಡನೀಯ. ನಮ್ಮ ಹಿಂದೂ ಸಮಾಜ ಒಡೆಯುವ ಪ್ರಕ್ರಿಯೆ ಮಾಡ್ತಿರೋದು ಸರಿಯಲ್ಲ ಎಂದು ಕಿಡಿಕಾರಿದರು.
ಕಾಂತಾರ ಬಗ್ಗೆ ಅತ್ಯಂತ ಹೆಮ್ಮೆ ಪಡಬೇಕಾದ ವಿಷಯವಾಗಿದೆ. ಕಾಂತಾರ ಚಿತ್ರದ ತಂಡಕ್ಕೆ ಅಭಿನಂದನೆ ಹೇಳುತ್ತೇನೆ. ಚೇತನ್ ಅವರೇ ನಿಮ್ಮ ಒಡಕು ಬಾಯಿ, ಹಿಂದೂ ವಿರೋಧಿ ಬಾಯಿ, ದೇಶದ್ರೋಹಿ ಬಾಯಿಯನ್ನು ಸ್ವಲ್ಪ ಮುಚ್ಚಬೇಕು. ನೀವು ಒಳ್ಳೆಯ ನಟರಾಗಿರಬೇಕೇ ವಿನಃ ಹಿಂದೂ ವಿರೋಧಿ, ದೇಶದ್ರೋಹಿ ಅಥವಾ ಸಮಾಜ ಕಂಟಕದ ಕೆಲಸವನ್ನು ನಿಮ್ಮಿಂದ ಆಪೇಕ್ಷಿಸಿರಲಿಲ್ಲ. ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಿ. ಆದಿವಾಸಿ, ಬುಡಕಟ್ಟು ಜನಾಂಗ ಎಂದು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಬೇಡಿ ಎಂದು ಆಗ್ರಹಿಸಿದರು.
ಹಿಂದೂ, ಹಿಂದುತ್ವ ಅನ್ನೋದು ಎಲ್ಲರನ್ನೂ ಜೋಡಿಸುತ್ತಿದೆ. ಇಲ್ಲಿ ಜಾತಿಯಿಲ್ಲ, ಬೇಧವಿಲ್ಲ. ಹಿಂದೂ ಶಬ್ದಕ್ಕೆ ಯಾಕೆ ನಿಮಗೆ ಹೊಟ್ಟೆ ಉರಿತಿದೆ. ನಿಮ್ಮ ಹೇಳಿಕೆ ಕನ್ನಡ ವಿರೋಧಿ. ಕನ್ನಡಕ್ಕೆ ದ್ರೋಹತನವನ್ನು ನೀವು ಮಾಡಬೇಡಿ. ನೀವು ಹುಟ್ಟಿದ್ದು ಅಮೆರಿಕದಲ್ಲಿ, ಬೆಳೆದಿದ್ದು ಅಮೆರಿಕ ಸಂಸ್ಕೃತಿಯಲ್ಲಿ. ಪಬ್, ಕ್ಲಬ್‍ಗಳಲ್ಲಿ ಬೆಳೆದಂಥವರು, ಈ ಮಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲ. ಒಡೆಯುವ ಕೆಲಸ, ದೇಶದ್ರೋಹಿ ಕೆಲಸ ನೀವು ಮಾಡಬೇಡಿ ಎಂದು ತಿಳಿಸಿದರು.