ಧಾರವಾಡ: ಮಂಡ್ಯ (Mandya) ಮೂಲದ ಶ್ರೀಧರ್‌ಗೆ ಬಲವಂತದ ಖತ್ನಾ (ಮುಂಜಿ) ಮಾಡಿ ಮತಾಂತರ (Conversion) ಮಾಡಲಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Advertisement
ಧಾರವಾಡದಲ್ಲಿ ಘಟನೆ ಖಂಡಿಸಿ ಮಾತನಾಡಿದ ಅವರು, ಮತಾಂತರ ಘಟನೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಆತ ಹುಡುಗಿಯನ್ನು ಭೇಟಿಯಾಗಲು ಬಂದಿದ್ದನೋ ಏನೋ ಗೊತ್ತಿಲ್ಲ. ಆತನಿಗೆ ಬಲವಂತದ ಖತ್ನಾ ಮಾಡಲಾಗಿದೆ. ಆತನ ಕೈಯಲ್ಲಿ ಪಿಸ್ತೂಲು ನೀಡಿ ಫೋಟೋ ತೆಗೆದಿದ್ದಾರೆ. 35 ಸಾವಿರ ಹಣವನ್ನು ಖಾತೆಗೆ ಹಾಕಿದ್ದಾರೆ. ಆತನೇ ಇದೀಗ ದೂರು ನೀಡಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ಬಲವಂತವಾಗಿ ಮತಾಂತರಕ್ಕೆ ಯತ್ನ – 11 ಮಂದಿಯ ವಿರುದ್ಧ ಎಫ್‍ಐಆರ್
Advertisement
Advertisement
ಸರ್ಕಾರ (Government) ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮತಾಂತರ ಕಾಯ್ದೆ ಅಡಿ ಕೇಸ್ ದಾಖಲಾಗಬೇಕು. ಈ ಪ್ರಕರಣದ ಹಿಂದೆ 11 ಜನರಷ್ಟೇ ಇಲ್ಲ. ಮಸೀದಿ, ಮದರಸಾ ಕೆಲಸ ಮಾಡುತ್ತಿವೆ. ಸರಿಯಾಗಿ ತನಿಖೆ ಮಾಡಬೇಕು. ಅಂದಾಗ ಮಾತ್ರ ಇಂತಹ ಪ್ರಕರಣಗಳು ಹೊರಗೆ ಬರುತ್ತವೆ. ಈ ಬಗ್ಗೆ ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಪತ್ರ ಬರೆದು ಮಾಹಿತಿ ತಿಳಿಸುತ್ತೇನೆ. ಯಾವ ಯಾವ ಮಸೀದಿಗಳಲ್ಲಿ ಮತಾಂತರ ನಡೆಯುತ್ತಿವೆ ಅನ್ನೋ ಮಾಹಿತಿ ಕೊಡುತ್ತೇನೆ ಎಂದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ