– ರಂಜಾನ್‌ಗೆ ರಿಲೀಫ್ ಕೊಟ್ರೆ ಶಿವರಾತ್ರಿಗೂ ಕೊಡ್ತೀರಾ? – ಸರ್ಕಾರಕ್ಕೆ ಪ್ರಶ್ನೆ
ಬೆಂಗಳೂರು: ಹಿಂದೂಗಳ ಸಂಪ್ರದಾಯದಲ್ಲಿ ನಿರಂತರ ಒಂದೊಂದು ಆಚರಣೆ ಇರುತ್ತೆ. ಹಿಂದೂ ನೌಕರರು ಎಲ್ಲಾ ಆಚರಣೆಗೆ ಅವಕಾಶ ಕೊಡಿ ಅಂತ ಮನವಿ ಮಾಡೋದಕ್ಕೆ ಶುರು ಮಾಡಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಖಾಲಿಯಾಗಿರುತ್ತೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ಈಗಾಗಲೇ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ 1 ಗಂಟೆ ಬಿಡುವು ನೀಡುವುದಾಗಿ ಹೇಳಿದ ಬೆನ್ನಲ್ಲೇ ರಾಜ್ಯದಲ್ಲೂ ಈ ಬೇಡಿಕೆ ಬಂದಿದೆ. ರಂಜಾನ್ (Ramzan) ವೇಳೆ ನೌಕರರಿಗೆ 1 ಗಂಟೆ ರಿಲೀಫ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಹುಸೇನ್ (A Hussain) ಮನವಿ ಮಾಡಿದ್ದಾರೆ, ಈ ಕುರಿತು ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನಾವೇನು ದಸರಾ ರಜೆಗೆ ತಗಾದೆ ತೆಗೆದಿದ್ವಾ? – ರಂಜಾನ್‌ಗೆ ನೌಕರರಿಗೆ 1 ಗಂಟೆ ರಿಲೀಫ್ ಕೊಡಿ: ಸಿಎಂಗೆ ಹುಸೇನ್ ಮನವಿ
Advertisement
Advertisement
ಅಂಬೇಡ್ಕರ್ ಅವರು ಬರೆದಿರೋ ಸಂವಿಧಾನದಲ್ಲಿ ಎಲ್ಲ ಧರ್ಮದ ಆಚರಣೆಗೆ ಸಮಾನ ಅವಕಾಶವಿದೆ. ಭಾರತ ದೇಶ ಜಾತ್ಯತೀತ ರಾಷ್ಟ್ರ, ಒಂದು ಧರ್ಮದ ಸರ್ಕಾರಿ ನೌಕರರಿಗೆ ಈ ರೀತಿಯ ಅವಕಾಶ ಮಾಡಿಕೊಡೋದು ತಪ್ಪು ಮತ್ತು ಖಂಡನೀಯ. ಆದ್ರೆ ಕಾಂಗ್ರೆಸ್ ವೋಟ್‌ಬ್ಯಾಂಕ್‌ಗಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಮೆರಿಕದ ಎಫ್‌ಬಿಐಗೆ ಗುಜರಾತ್ ಮೂಲದ ಕಾಶ್ ಪಟೇಲ್ ಬಾಸ್ – ನೇಮಕವಾದ ಬೆನ್ನಲ್ಲೇ ಬಿಗ್ ವಾರ್ನಿಂಗ್
Advertisement
ಒಂದು ಧರ್ಮದ ಆಚರಣೆಗೆ ಅವಕಾಶ ಮಾಡಿಕೊಡೋದು ತಪ್ಪು, ಒಂದು ವೇಳೆ ನಮ್ಮ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ರೆ ಹಿಂದೂಗಳು ಕೂಡ ಶಿವರಾತ್ರಿ, ಏಕಾದಶಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ಉಪವಾಸ ಮಾಡ್ತಾರೆ, ಅದಕ್ಕೂ ಅವಕಾಶ ನೀಡ್ತಾರಾ? ಇವತ್ತು ರಂಜಾನ್ ಉಪವಾಸಕ್ಕೆ 1 ಗಂಟೆ ಮನವಿ ಮಾಡ್ತಾರೆ, ನಾಳೆ ಶುಕ್ರವಾರದ ನಮಾಜ್‌ಗೂ ಅವಕಾಶ ಕೊಡಿ ಅಂತ ಕೇಳ್ತಾರೆ. ಇದಕ್ಕೆಲ್ಲ ಸರ್ಕಾರ ಅನುಮತಿ ನೀಡಬಾರದು ನೀಡಿದ್ರೇ ಹಿಂದೂಗಳು ಇದನ್ನ ವಿರೋಧಿಸಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: MUDA Case | ಸಿಎಂ ಸೇಫ್, ಸೈಟ್ ಮಾಡಿಕೊಟ್ಟ ಅಧಿಕಾರಿಗಳು ಲಾಕ್ – ಇನ್ವೆಸ್ಟಿಗೇಷನ್ ಚಾಪ್ಟರ್-2