ದಾವಣಗೆರೆ: ನಟ ಅರ್ಜುನ್ ಸರ್ಜಾ ಅವರ ಮೇಲಿನ ಮೀಟೂ ಆರೋಪವನ್ನು ನಾನು ಒಪ್ಪುವುದಿಲ್ಲ. ಅವರು ಲೈಂಗಿಕ ಕಿರುಕುಳ ಮಾಡುವಂತಹ ವ್ಯಕ್ತಿ ಅಲ್ಲ. ಅಮೆರಿಕದಿಂದ ಶೃತಿ ಹರಿಹರನ್ ಅವರಿಗೆ ಹಣ ಸಂದಾಯವಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಮೀಟೂ ಅಭಿಯಾನ ಇಂದು ಶೋಷಿತ ಮಹಿಳೆಯರಿಗೆ ಧ್ವನಿ ನೀಡಿದೆ. ಮೀಟೂ ಅಭಿಯಾನಕ್ಕೆ ನನ್ನ ಬೆಂಬಲವೂ ಇದೆ. ಆದರೆ ಇಂದು ನಟ ಅರ್ಜುನ್ ಸರ್ಜಾ ರಂತಹ ಸಭ್ಯರ ಮೇಲೆ ಶೃತಿ ಹರಿಹರನ್ ಅವರು ಆರೋಪ ಮಾಡಿರುವುದು ಕುತಂತ್ರದ ಭಾಗವಾಗಿದೆ ಎಂದರು.
ಅರ್ಜುನ್ ಸರ್ಜಾರ ಅವರ ಹಿನ್ನೆಲೆ ನನಗೆ ಗೊತ್ತಿದೆ. ಅವರ ಚಟುವಟಿಕೆ ಹಾಗೂ ಸಮಾಜ ಮುಖಿ ಕಾರ್ಯಗಳನ್ನು ಗಮನಿಸಿದ ವೇಳೆ ಇದು ಸ್ಪಷ್ಟವಾಗುತ್ತದೆ. ಈಗಾಗಲೇ ಆರೋಪದ ಹಿಂದಿನ ಕುತಂತ್ರಗಳನ್ನು ಅರ್ಜುನ್ ಸರ್ಜಾ ಆಪ್ತ ಕಾರ್ಯದರ್ಶಿ ಪ್ರಶಾಂತ್ ಸಂಬರ್ಗಿ ಅವರು ತಿಳಿಸಿರುವಂತೆ ಅಮೆರಿಕದಿಂದ ಹಣ ಸಂದಾಯವಾಗಿವ ಆರೋಪ ಇದೆ. ಶೃತಿ ಅವರು ಬೇರೆಯವರ ಮಾತು ಕೇಳಿ ಅಥವಾ ಯಾವುದೋ ಆಮಿಷಕ್ಕೆ ಒಳಗಾಗಿ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಇಂದು ಶೃತಿ ಅವರಿಗೆ ಹಣ ಬರುತ್ತಿರುವುದು ನೂರಕ್ಕೆ ನೂರರಷ್ಟು ನಾನು ಒಪ್ಪುತ್ತೇನೆ. ನಮ್ಮ ಬೆಂಬಲ ಅರ್ಜುನ್ ಸರ್ಜಾ ಅವರಿಗೆ ಇರಲಿದೆ ಎಂದರು.
ಇಂತಹ ಕುತಂತ್ರಗಳು ಹಿಂದು ಸಂಪ್ರದಾಯದ ಮೇಲೆ ನಡೆಯುತ್ತಿರುವ ದಾಳಿಗಳಾಗಿದ್ದು, ಶಬರಿಮಲೆಯಿಂದ ಹಿಡಿದು ದೇಶದಲ್ಲಿ ಪ್ರಮುಖವಾಗಿ ಹಿಂದು ಧರ್ಮ ಪರ ಗುರುತಿಸಿಕೊಂಡಿರುವ ವ್ಯಕ್ತಿಗಳ, ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಮೇಲೆ ವ್ಯವಸ್ಥಿತವಾಗಿ ಮಾಡುತ್ತಿರುವ ಆರೋಪ ಎಂದು ಗುಡುಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv