ದಾವಣಗೆರೆ: ಮುಸ್ಲಿಮರು ದಾಂಧಲೆ ಮಾಡೋಕೆ ಇದು ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಅಲ್ಲ ಹುಷಾರ್ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ (Mysuru) ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ನಡೆದ ಕಲ್ಲು ತೂರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ, ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ನೀಡಲು ಕಾನೂನು, ಸಂವಿಧಾನ ಇದೆ. ನೀವು ಬೇಕಾದರೆ ದೂರು ನೀಡಬೇಕಿತ್ತು. ಇಲ್ಲವೇ ಧರಣಿ ಮಾಡಬೇಕಿತ್ತು ಅದನ್ನು ಬಿಟ್ಟು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಮಾಡೋದು, ಪೊಲೀಸರಿಗೆ ಕಲ್ಲು ಹೊಡೆಯುವುದನ್ನು ಬಿಡಬೇಕು ಎಂದಿದ್ದಾರೆ.
Advertisement
ಉದಯಗಿರಿ ಮುಸ್ಲಿಮರೇ ಜಾಸ್ತಿ ಇರುವ ಏರಿಯಾವಾಗಿದ್ದು, ಅಲ್ಲಿ ಈ ಘಟನೆ ನಡೆದಿದೆ. ತಪ್ಪು ಮಾಡಿದವನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕಾನೂನು ಇದೆ ಸಂವಿಧಾನ ಇದೆ ತಪ್ಪಿತಸ್ಥನಿಗೆ ಶಿಕ್ಷೆ ಆಗುತ್ತದೆ. ಅದನ್ನು ಬಿಟ್ಟು ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದು ಎಷ್ಟು ಸರಿ. ಇದು ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ದೇಶ ಅಲ್ಲ. ನಿಮಗೆ ಏನು ತೊಂದರೆಯಾಗಿದೆ ಎಂದು ದೂರು ನೀಡಿ, ಧರಣಿ ಮಾಡಿ ಎಂದು ಸಲಹೆ ನೀಡಿದ್ದಾರೆ.
Advertisement
Advertisement
ನೀವು ಎಷ್ಟು ಬಾರಿ ಹಿಂದೂ ದೇವರುಗಳ ಮೇಲೆ ಅವಹೇಳನಕಾರಿಯಾಗಿ ಮಾತಾಡಿಲ್ಲ. ನಾವು ಕೂಡ ಈ ರೀತಿ ಎದ್ದರೇ ಏನಾಗಬಹುದು ಹೇಳಿ? ನೀವು ಏನ್ ಬೇಕಾದರೂ ಮಾಡಬಹುದು ಎಂದುಕೊಂಡರೇ ಹಿಂದೂ ಸಮಾಜ ಉತ್ತರ ನೀಡುತ್ತೆ. ರಕ್ಷಕರ ಮೇಲೆ ಕಲ್ಲು ತೂರಾಟ ಮಾಡಿದರೆ ಎಲ್ಲಿದೆ ವ್ಯವಸ್ಥೆ? ನಾಳೆ ಬೇಲ್ ತೆಗೆದುಕೊಂಡು ವಾಪಸ್ ಬಂದು ಇದೇ ಕೆಲಸ ಮಾಡ್ತಾರೆ. 2047 ಕ್ಕೆ ಈ ದೇಶವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಮುಂದಾಗಿದ್ದಕ್ಕೆ ಈ ರೀತಿ ಭಯಾನಕ ವಾತಾವರಣವನ್ನು ಸೃಷ್ಟಿ ಮಾಡಲು ಮುಂದಾಗುತ್ತಿದ್ದಾರೆ. ಈ ಘಟನೆಗೆ ಮುಸ್ಲಿಮರಿಗಿಂತ ಕಾಂಗ್ರೆಸ್‌ನವರೇ ಹೆಚ್ವು ಹೊಣೆಯಾಗುತ್ತಾರೆ ಎಂದು ಕಿಡಿಕಾರಿದ್ದಾರೆ.
Advertisement
ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ಈ ರೀತಿ ಮುಸ್ಲಿಂ ಗೂಂಡಗಳಿಗೆ ಕುಮ್ಮಕ್ಕು ಕೊಡುತ್ತಾ ಬಂದಿದೆ. ಈ ಕುಮ್ಮಕ್ಕಿನಿಂದ ಕೆಜಿ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಘಟನೆಗಳಲ್ಲಿ ಪೊಲೀಸರು ಓಡಿ ಹೋಗುವಂತಾಗಿದೆ. ಕೂಡಲೇ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಿ ಅವರು ಕೆಲಸ ಮಾಡುತ್ತಾರೆ ಎಂದು ಆಗ್ರಹಿಸಿದ್ದಾರೆ.