ಧಾರವಾಡ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಗರಿಗೆದರಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ಐವರು ಶಂಕಿತ ಉಗ್ರರ (Suspected Terrorist) ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸೆರೆ ಸಿಕ್ಕ ಶಂಕಿತ ಉಗ್ರರ ಬಳಿ ಪಿಸ್ತೂಲ್, ಸಜೀವ ಗುಂಡು, ಸ್ಯಾಟ್ಲೈಟ್ ಫೋನ್ ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಟ್ಟ ಹುಳಗಳು, ಹಾವು ಹಾಗೂ ಚೇಳುಗಳು ಹೊರ ಬರುತ್ತಿವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟದ ಸಭೆಯೇ ಉಗ್ರರ ಟಾರ್ಗೆಟ್
Advertisement
ಇವರನ್ನು ಕಾಂಗ್ರೆಸ್ ಸರ್ಕಾರ ಪೋಷಿಸುತ್ತಿದೆ. ಇದೇ ರೀತಿ ಉಗ್ರರನ್ನು ಪೋಷಣೆ ಮಾಡಿ ದೇಶದ ಲಕ್ಷಾಂತರ ಜನರನ್ನು ಕಾಂಗ್ರೆಸ್ ಕೊಂದು ಹಾಕಿದೆ. ಇವರ ಅಧಿಕಾರದಿಂದ ಈ ರೀತಿಯ ಪ್ರಕರಣಗಳು ಇನ್ನೂ ಹೆಚ್ಚುತ್ತವೆ. ಬಂಧಿತರು ಲಷ್ಕರ್ ಎ ತೊಯ್ಬಾ ಸಂಘಟನೆಯ ಸಂಪರ್ಕದಲ್ಲಿರುವಂತವರು. ಅಷ್ಟೇ ಅಲ್ಲ ಬಿಜೆಪಿ ಸರ್ಕಾರ ಇದ್ದಾಗಲೂ ಕೂಡ ಹರ್ಷನ ಕೊಲೆಗಡುಕರು ಜೈಲಿನಲ್ಲಿ ತಮ್ಮ ಕುಟುಂಬದವರ ಜೊತೆ ಮಾತನಾಡುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದ್ದಾರೆ.
Advertisement
Advertisement
ಜೈಲಿನಲ್ಲಿದ್ದ ಕೊಲೆಗಡುಕರ ಸಂಪರ್ಕ ಬೆಳೆಸಿ ಅವರ ಮೂಲಕ ಕೃತ್ಯ ಎಸಗುವ ಕೆಲಸವನ್ನು ಉಗ್ರರು ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜೈಲಿನಲ್ಲಿ ಪಾಕಿಸ್ತಾನಿಗಳು, ಅಫ್ಘಾನಿಸ್ತಾನಿ ಉಗ್ರರು ಇದ್ದಾರೆ. ಅಲ್ಲದೇ ಭೂಗತ ಮುಸ್ಲಿಂ ವ್ಯಕ್ತಿಗಳಿದ್ದಾರೆ. ಇವರೆಲ್ಲರನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Advertisement
ಸರ್ಕಾರದ ನಿರ್ಲಕ್ಷದಿಂದ ಈ ರೀತಿಯ ಕೃತ್ಯಗಳಾಗುತ್ತಿವೆ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲ. ಬಿಜೆಪಿ ಕೂಡ ಇದಕ್ಕೆ ಕಾರಣ. ತೀರ್ಥಹಳ್ಳಿ ಕ್ಷೇತ್ರದ ಹಿಂದಿನ ದಾಖಲೆಗಳನ್ನು ತೆಗೆದರೆ ಗೊತ್ತಾಗುತ್ತದೆ. ಮಲೆನಾಡಿನಲ್ಲಿ ಇವರು ಬಹಳ ದೊಡ್ಡ ಪ್ರಮಾಣದಲ್ಲಿ ಕೃತ್ಯಕ್ಕೆ ಯೋಜನೆ ಮಾಡುತ್ತಿದ್ದಾರೆ. ಸುಲ್ತಾನ್ ಪಾಳ್ಯ ಒಂದೇ ಅಲ್ಲ ಚಾಮರಾಜಪೇಟೆಯ ಕ್ಷೇತ್ರದಲ್ಲಿಯೂ ಉಗ್ರರು ಇದ್ದಾರೆ.
ಅಫ್ಘಾನಿಸ್ತಾನಿಗಳು, ಬಾಂಗ್ಲಾ ದೇಶಿಗಳು ಕೋವಿಡ್ ಸಂದರ್ಭದಲ್ಲಿ ವೈದ್ಯರನ್ನು ಸರ್ವೆ ಮಾಡಲು ಒಳಗಡೆ ಬಿಡಲಿಲ್ಲ. ಇದಕ್ಕೆ ಇದೇ ಮೂಲ ಕಾರಣವಾಗಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಭೆ ಹಾಗೂ ಮೈಸೂರು ಘಟನೆ ಇವೆಲ್ಲ ಕೂಡ ಉಗ್ರ ಕೃತ್ಯಗಳಾಗಿವೆ. ಈ ರಾಜಕಾರಣಿಗಳು ಅಧಿಕಾರ ದಾಹದಿಂದ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಮಹಿಳೆಯರನ್ನೂ ಬಂಧಿಸಿ ಸಾಕಷ್ಟು ರೀತಿಯ ವಿಚಾರಣೆ ನಡೆಸಬೇಕು. ಇತ್ತೀಚೆಗೆ ಪಾಕಿಸ್ತಾನದಿಂದ ಒಬ್ಬಳು ದೆಹಲಿಗೆ ಬಂದಿದ್ದಳು ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರಕರಣವನ್ನು ನಿರ್ಲಕ್ಷ ಮಾಡಬಾರದು. ಸಿಸಿಬಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಗೋಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಸರ್ಕಾರ ಇಂತವುಗಳನ್ನು ಗಂಭೀರವಾಗಿ ನೋಡದಿದ್ದರೆ ಜನರೇ ಎಚ್ಚೆತ್ತು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿದೆ: ಬೊಮ್ಮಾಯಿ
Web Stories