ಧಾರವಾಡ: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾಂಸದೂಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ದತ್ತಪೀಠ ಅಪವಿತ್ರ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ಈ ಬಗ್ಗೆ ವೀಡಿಯೋ ಒಂದರಲ್ಲಿ ಮಾತನಾಡಿದ ಮುತಾಲಿಕ್, ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಅಲ್ಲಿ ಗೋ ಮಾಂಸದೂಟ ಮಾಡುತ್ತಾರೆ. ನಾವು ಹೋಮ-ಹವನ ಮಾಡುವ ಪವಿತ್ರ ಕ್ಷೇತ್ರ ಅದು. ಅಂತಹ ಕ್ಷೇತ್ರದಲ್ಲಿ ಗಲೀಜು ಮಾಡಿದ್ದಾರೆ. ಅಲ್ಲಿ ಮಾಂಸದೂಟ ನಿಷೇಧ ಇದೆ. ಆದರೂ ಅಲ್ಲಿ ಮುಸ್ಲಿಮರು ಮಾಂಸದೂಟ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು
Advertisement
ಇದು ಅಕ್ಷಮ್ಯ ಅಪರಾಧ. ನಾನು ಅವರಿಗೆ ಬೈಯೊದಿಲ್ಲ. ಮುಜರಾಯಿ ಮತ್ತು ಪೊಲೀಸ್ ಇಲಾಖೆ ಮೇಲೆ ಜಿಲ್ಲಾಧಿಕಾರಿ ತನಿಖೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಶ್ರೀರಾಮ ಸೇನೆಯವರು ಅಲ್ಲಿ ಗೋಮೂತ್ರದಿಂದ ಶುದ್ಧೀಕರಣ ಮಾಡುತ್ತೇವೆ. ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಇಂತಹ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ದತ್ತಪೀಠದಲ್ಲಿ ಅವರಿಗೆ ಪ್ರವೇಶ ಕೊಡುವುದಿಲ್ಲ ಎಂದರು.
Advertisement
ಈ ಎಚ್ಚರಿಕೆಯನ್ನು ಅಲ್ಲಿನ ಜಿಲ್ಲಾಧಿಕಾರಿಗೆ ಕೊಡುತ್ತೇನೆ. ಇದು ಹುಡುಗಾಟಿಕೆ ಅಲ್ಲ. ಅಲ್ಲಿ ತಪ್ಪು ಮಾಡಿದ ಮುಸ್ಲಿಮರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿರುವ ಮುಲ್ಲಾ, ಮೌಲ್ವಿಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಆಗಬೇಕು. ಕ್ರಮ ತೆಗೆದುಕೊಂಡರೆ ಸರಿ, ಇಲ್ಲದೇ ಹೋದಲ್ಲಿ ನಾವು ಅವರ ಮೇಲೆ ಕೇಸ್ ಹಾಕುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ – ಅಷ್ಟಮಂಗಲ ಪ್ರಶ್ನೆಗೆ ಮುಂದಾದ ವಿಹೆಚ್‌ಪಿ