ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮನವಿ ಪತ್ರ ಸಲ್ಲಿಸಿದರು.
Advertisement
ತಾಜ್ ವೆಸ್ಟ್ ಎಂಡ್‍ನಲ್ಲಿ ಬೊಮ್ಮಾಯಿ ಅವರು ಇದ್ದರು. ಪರಿಣಾಮ ಮುತಾಲಿಕ್ ಅವರು ಅಲ್ಲಿಗೆ ಹೋಗಿ ಅವರನ್ನು ಭೇಟಿಯಾಗಿದ್ದಾರೆ. ಹರ್ಷನ ಕೊಲೆಗೆ ಸಂಬಂಧಿಸಿದಂತೆ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೇಡಿಕೆಗಳ ಮನವಿ ಸಲ್ಲಿಸಿದ ಮುತಾಲಿಕ್ ಅವರು, ಹರ್ಷನ ಕೊಲೆಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹರ್ಷ ಮೃತದೇಹ ಮೆರವಣಿಗೆ ವೇಳೆ ಕೇಸರಿ ಧ್ವಜ ಹಿಡಿದು ಕಲ್ಲು ತೂರಾಟ
Advertisement
Advertisement
ಅಲ್ಲದೆ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಲು ಮನವಿ ಮಾಡಿದ್ದು, ಹಿಂದೂ ಮುಖಂಡರು, ಕಾರ್ಯಕರ್ತರಿಗೆ ಸೂಕ್ತ ಭಧ್ರತೆ ಕೊಡಬೇಕು. SDPI, PIFI , ಸಿಎಫ್ ಐ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
Advertisement
ಈ ವೇಳೆ ಪ್ರಮೋದ್ ಮುತಾಲಿಕ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಿನ್ನೆ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಕರ್ನಾಟಕದಲ್ಲಿ ಅಶಾಂತಿ ಉಂಟುಮಾಡಬೇಕು ಈ ರೀತಿ ಮಾಡಿದ್ದಾರೆ. ಇವತ್ತು ಶ್ರೀರಾಮ ಸೇನೆ, ಇತರೆ ಹಿಂದೂಪರ ಸಂಘಟನೆಗಳು ಸಿಎಂ ಅವರನ್ನು ಭೇಟಿ ಮಾಡಿದ್ವಿ. ಮೂವರುನ್ನು ಅರೆಸ್ಟ್ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ. ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು ಎಂದು ಕೇಳಿಕೊಂಡಿದ್ದೇನೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ SDPI, PIFI ಹಾಗೂ CFI ಮೇಲೆ ಕ್ರಮ ಜರುಗಿದಬೇಕು. ಇವರನ್ನು ಬಂಧಿಸಬೇಕು. ಹಿಂದೂ ಸಂಘಟನೆಗಳಿಗೆ ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಟ್ರೈಲರ್ ಮಾತ್ರ!
ಶವಯಾತ್ರೆ ವೇಳೆಯೂ ಕಲ್ಲು ಎಸೆದಿದ್ದಾರೆ ಅನ್ನೋ ಮಾಹಿತಿ ಬಗ್ಗೆಯೂ ಸಿಎಂಗೆ ತಿಳಿಸಿದ್ದೇನೆ. ಅವರು ಸೊಕ್ಕಿನಿಂದ ಯೋಜನಾಬದ್ಧವಾಗಿ ಮಾಡಿದ್ದಾರೆ. ಇದರ ಬಗ್ಗೆಯೂ ಮಾಹಿತಿ ಪಡೆದು ಕ್ರಮ ಜರುಗಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಇವರು ತಮ್ಮ ಪ್ರವೃತ್ತಿಯನ್ನ ನಿಲ್ಲಿಸೋದಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಸತ್ಯ. ಇದು ಬರೀ ಟ್ರೈಲರ್ ಮಾತ್ರ. ಅವರು ಈ ಪ್ರವೃತ್ತಿ ಬಿಡೋದಿಲ್ಲ. ಹೀಗಾಗಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೊಡಿ ಎಂದು ಸರ್ಕಾರಕ್ಕೆ ಹೇಳುತ್ತೇನೆ ಎಂದರು.
ಬಿಜೆಪಿ ಸರ್ಕಾರವಿದ್ದಾಗ ಹಿಂದೂ ಕಾರ್ಯಕರ್ತ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಈ ಘಟನೆಯಿಂದ ಕೇವಲ ನಾಚಿಕೆ ಆಗ್ತಿಲ್ಲ ನೋವಾಗ್ತಿದೆ. ಎಸ್ ಡಿಪಿಐ ಪಿಎಎಫ್ ಐ ಸಂಘಟನೆಯನ್ನ ಬ್ಯಾನ್ ಮಾಡಲೇಬೇಕು. ಬಿಜೆಪಿ ಈ ಹಿಂದೆಯೂ ಬ್ಯಾನ್ ಮಾಡಿ ಅಂತ ಆಗ್ರಹಿಸಿತ್ತು. ಆದ್ರೆ ಈಗ ಏಕೆ ಬಾಯಿ ಮುಚ್ಚಿಕೊಂಡು ಇದ್ದೀರಾ ಎಂದು ಕೇಳ್ತೀನಿ. ಒಂದು ವೇಳೆ ಈ ಸಂಘಟನೆಗಳನ್ನ ಬ್ಯಾನ್ ಮಾಡಲಿಲ್ಲ ಎಂದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಇದನ್ನೂ ಓದಿ: ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ- ಮೂವರು ಆರೋಪಿಗಳ ಬಂಧನ
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ಸೇರಿದಂತೆ ಶ್ರೀರಾಮಸೇನೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.