ಬೆಂಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೆಲವು ರಾಜಕಾರಣಿಗಳ ಏಜೆಂಟ್. ಅವರು ಹಿಂದೂ ಪರ ಅಲ್ಲ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷಾದ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಜ ವಿಚಾರಗಳನ್ನು ಮುಚ್ಚಿ ಹಾಕಲು ಕೆಲವರು ಏಜೆಂಟ್ ಮೂಲಕ ಹಿಂದುತ್ವ ಎಂದು ಶುರು ಮಾಡಿದ್ದಾರೆ. ಮುಸ್ಲಿಂ ಚಿನ್ನದ ಅಂಗಡಿಗಳಿಂದ ಚಿನ್ನ ಖರೀದಿ ಮಾಡಬಾರದು ಅಂತಾ ಫರ್ಮಾನು ಹೊರಡಿಸಿದ್ದಾರೆ. ಹಾಗಾದ್ರೆ ಮುಸ್ಲಿಂ ಸೇವಿಸಿದ ಗಾಳಿ ಹಿಂದೂ ಸೇವನೆ ಮಾಡಬಾರದು. ಮುಸ್ಲಿಂಗೆ ಬೇರೆ ಬಿಸಿಲು, ಹಿಂದೂಗೆ ಬೇರೆ ಬಿಸಿಲು ಅಂತಿದ್ದೀಯಾ? ಮುಸ್ಲಿ ರಕ್ತ ಕೆಂಪು, ಹಿಂದೂ ರಕ್ತ ಬೇರೆ ಏನಾದರೂ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
Advertisement
Advertisement
ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದುತ್ವ ಪರ ಮಾತನಾಡುವವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಏನ್ ಮಾಡಲು ಹೊರಟಿದ್ದಾರೆ ಇವರು? ತಲೆಗಿಲೆ ಕೆಟ್ಟಿದ್ದೀಯಾ? ಮುತಾಲಿಕ್‍ಗೆ ಬಿಸಿಲು ಜಾಸ್ತಿ ಆಗಿದೆ ಎಂದು ಕಿಡಿಕಾರಿದರು. ಅವರು ಹಿಂದೂ ಪರ ಅಲ್ಲ. ಹಿಂದುತ್ವಪರ. ಹಿಂದೂ ಧರ್ಮ ವಿಶಾಲವಾದ ಧರ್ಮ, ಸಹಿಷ್ಣುತೆ ಇರುವ ಧರ್ಮ. ಆದ್ರೆ ರಾಜಕಾರಣಿಗಳಿಗೆ ಇವರು ಏಜೆಂಟ್ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಂ ಭಾವೈಕ್ಯತೆಯ ಹಬ್ಬ – ಇಡೀ ಗ್ರಾಮದ ಆರಾಧ್ಯ ದೈವರಾದ ಜಮಾಲ್ ಮೌಲ್ವಿ
Advertisement
ನೈಜ ಸಮಸ್ಯೆ ಬಗ್ಗೆ ಚರ್ಚೆ ಮಾಡಬಾರದು ಅಂತೇಳಿ ಮುತಾಲಿಕ್ ಬಿಟ್ಟಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಹುನ್ನಾರ ಇದು. ಈ ರೀತಿ ಪೋಲಿ ಪುಡಾರುಗಳಿಂದ ಹಿಂದೂ, ಮುಸ್ಲಿಂ ಬೇರೆ-ಬೇರೆ ಮಾಡಲು ಸಾಧ್ಯವಿಲ್ಲ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು. ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಹಿಂದುತ್ವ ಪರ ಸಂಘಟನೆಗಳಿಗೆ ಗುತ್ತಿಗೆ ಕೊಟ್ಟಿದೆ. ಸರ್ಕಾರ ಇದೆಯಾ ಇವತ್ತು? ಎಲ್ಲ ನೇಮಕಾತಿಗಳಲ್ಲೂ ಹಗರಣಗಳು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಸಿಎಂ ಬೊಮ್ಮಾಯಿ ಕಂಟ್ರೋಲ್‍ನಲ್ಲಿ ಅಧಿಕಾರ ನಡೆಸಲು ಆಡಳಿತ ಇದೆಯಾ? ಜಾತ್ರೆಯಲ್ಲಿ ಯಾರೂ ಬೇಕಾದ್ರೂ ಏನ್ ಬೇಕಾದ್ರೂ ಮಾಡಬಹುದು ಅನ್ನುವಂತಿದೆ. ದೇವರು ರಾಜ್ಯದ ಜನರನ್ನು ಕಾಪಾಡುತ್ತಾನೆ. ಮುಸ್ಲಿಂ ದೇಶಗಳಲ್ಲಿ ಬೇರೆ ಬೇರೆ ಸಮುದಾಯದವರು ಹೋಗಿ ದುಡಿಯುತ್ತಿದ್ದಾರೆ. ಹಿಂದೂಪರ, ಮುಸ್ಲಿಂ ಸಂಘಟನೆಗಳು ಏಕೆ ಇರಬೇಕು? ನಮ್ಮನ್ನ ಕಾಪಾಡಲು ಸಂವಿಧಾನ ಇಲ್ಲವಾ?, ವ್ಯವಸ್ಥೆ ಇಲ್ಲವಾ? ಎಂದು ಪ್ರಶ್ನೆ ಮಾಡಿದರು.
ಇದು ರಾಜಕಾರಣ, ಮುಂದಿನ ವರ್ಷ ಚುನಾವಣೆ ಇದೆ. ಜನರ ಬಳಿ ಅಭಿವೃದ್ಧಿ ಏನು ಅಂತಾ ಹೇಳಲು ಆಗಲ್ಲ. ಅದಕ್ಕೆ ಈ ಗಲಾಟೆ ಮಾಡಿಸ್ತಿದ್ದಾರೆ. ಜನರ ಹೆಣದ ಮೇಲೆ ರಾಜಕೀಯ ಮಾಡ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧವೂ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು: ಬಿ.ಸಿ.ಪಾಟೀಲ್