ಮಂಗಳೂರು: ಸಾಲುಸಾಲು ಹಿಂದೂಗಳ ಹತ್ಯೆಯ ನಂತರ ಧಾರ್ಮಿಕ ಹೋರಾಟಗಾರರು ಸ್ವಾಮೀಜಿಗಳು ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ಕಾರ್ಯಕರ್ತರು ತನ್ನದೇ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಮುಂದಿನ ಚುನಾವಣೆಯ ಹೊತ್ತಿಗೆ ಹೊಸ ಹಿಂದೂ ಪಕ್ಷದ ಉದಯವಾಗುತ್ತದೆ ಎಂಬ ನೇರ ಎಚ್ಚರಿಕೆ ನೀಡಲಾಗಿದೆ.
Advertisement
ಪ್ರವೀಣ್ ಮನೆಗೆ ಭೇಟಿ ಕೊಟ್ಟು ಸಾಂತ್ವಾನ ಹೇಳಲು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತಡೆಯೊಡ್ಡಿತ್ತು. ಟೋಲ್ ಬಳಿ ನಿಂತು ಪ್ರಮೋದ್ ಮುತಾಲಿಕ್ ಹಿಂದೂ ಪಕ್ಷ ಕಟ್ಟುವ ಘೋಷಣೆಯನ್ನು ಮಾಡಿಬಿಟ್ಟಿದ್ದಾರೆ. ಇತ್ತ ಪ್ರವೀಣ್ ಮನೆಗೆ ಭೇಟಿ ಕೊಟ್ಟ ಸಂತೋಷ್ ಗುರೂಜಿ ಬೆಳವಣಿಗೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಗಳಿಗೆ ಸರ್ಕಾರದಿಂದ ಯಾವುದೇ ರಕ್ಷಣೆ ಇಲ್ಲ ನಮ್ಮ ರಕ್ಷಣೆಗೆ ನಾವು ಆಯುಧಗಳನ್ನು ಹಿಡಿದುಕೊಳ್ಳೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ಆ.4 ರಂದು ರಾಜ್ಯಕ್ಕೆ ಬರಲಿದ್ದಾರೆ ಅಮಿತ್ ಶಾ
Advertisement
Advertisement
ಒಟ್ಟಿನಲ್ಲಿ ಕರಾವಳಿಯಲ್ಲಿ ಹರಿದ ಬಿಜೆಪಿ ಮುಖಂಡ ಪ್ರವೀಣ್ ನೆತ್ತರು ಕಾರ್ಯಕರ್ತರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಕಾರ್ಯಕರ್ತರು ಬೆಂಕಿ ಮಾತುಗಳ ಮೂಲಕ ಮಂಗಳಾರತಿ ಮಾಡ್ತಿದ್ದಾರೆ. ಇಷ್ಟಕ್ಕೇ ಇದು ಮುಗಿದಿಲ್ಲ. ಈ ಮಧ್ಯೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಿಡಿಸಿದ ಬೆಂಕಿ ಬಾಂಬ್ ಬಿಜೆಪಿಯ ವಿರುದ್ಧ ರೋಷಾಗ್ನಿಗೆ ತುಪ್ಪ ಸುರಿದಂತೆ ಆಗಿದೆ. ಅಕ್ಷರಶಃ ಥಂಡಾ ಹೊಡೆದಂತೆ ಆಗಿದೆ ಬಿಜೆಪಿ ಪರಿಸ್ಥಿತಿ. ಚಕ್ರವರ್ತಿ ಸೂಲಿಬೆಲೆ ಬಿಜೆಪಿ ವಿರುದ್ಧ ಹಲವು ಚಾರ್ಜ್‍ಶೀಟ್ ಮಾಡಿದ್ದಾರೆ.