ಬೀದರ್: ಫೀರ್ ಪಾಶಾ ದರ್ಗಾ ಮೂಲ ಅನುಭವ ಮಂಟಪ ಎಂಬ ವಿವಾದ ಬೆನ್ನಲ್ಲೇ ಇಂದು ಬಸವಕಲ್ಯಾಣಕ್ಕೆ ಭೇಟಿ ನೀಡಬೇಕಿದ್ದ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲನ ಶ್ರೀಗಳನ್ನು ಜಿಲ್ಲಾಡಳಿತ ಬ್ಯಾನ್ ಮಾಡಿದೆ.
ಕಾರಣವೇನು?
ದಿನೇ ದಿನೇ ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪದ ಕಿಚ್ಚು ಜೋರಾಗುತ್ತಿದೆ. ಈ ವೇಳೆ ಕಲ್ಯಾಣಕ್ಕೆ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲನ ಶ್ರೀಗಳು ಭೇಟಿ ನೀಡಿದ್ರೆ ಕೊಮುಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥಿತೆಗೆ ಧಕ್ಕೆ ಬರುತ್ತದೆ. ಈ ಹಿನ್ನೆಲೆ ಮುತಾಲಿಕ್ ಹಾಗೂ ಆಂದೋಲನ ಶ್ರೀಗಳನ್ನು ಜೂನ್ 4 ರಿಂದ 12 ರ ಸಂಜೆ 6 ಗಂಟೆಯವರೆಗೆ ಬಸವಕಲ್ಯಾಣಕ್ಕೆ ಬಾರದಂತೆ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆಯಾಗಲು ಬಿಡಲ್ಲ – ಗುಜರಾತ್ ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ
Advertisement
Advertisement
ಮುತಾಲಿಕ್ ಹಾಗೂ ಆಂದೋಲನ ಶ್ರೀಗಳು ಇಂದು ಬಸವಕಲ್ಯಾಣದ ಘನ ರುದ್ರಮುನಿಮಠಕ್ಕೆ ಭೇಟಿ ನೀಡಬೇಕಿತ್ತು. ಈ ವೇಳೆ ಅವರು ಮೂಲ ಅನುಭವ ಮಂಟಪದ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ಹಾಗೂ ವಿವಿಧ ಮಠಾಧೀಶರಗಳನ್ನು ಭೇಟಿ ಮಾಡಬೇಕಿತ್ತು.
Advertisement
Advertisement
ಈಗಾಗಲೇ ಜೂನ್ 12 ರಂದು ಮೂಲ ಅನುಭವ ಮಂಟಪಕ್ಕಾಗಿ ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮೂಲ ಅನುಭವ ಕೂಗು ದಿನೇ ದಿನೇ ಜೋರಾಗುತ್ತಿದೆ.