ಗದಗ: ಕಾಂಗ್ರೆಸ್‌ನ(Congress) ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಅಂತ ಇಡಿಗೆ ಎಲ್ಲಾ ಮಾಹಿತಿ ನೀಡಿದೆ. ಯಾರು ಕಳುಹಿಸಿದ್ದು ಅಂತಾ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಸ್ಫೋಟಕ ಹೇಳಿಕೆ ನೀಡಿದರು.
ಗೃಹಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ಕುರಿತು ಗದಗದಲ್ಲಿ(Gadag) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2013ರಲ್ಲಿ ಪರಮೇಶ್ವರ್(G Parameshwar) ಅವರನ್ನು ಸೋಲಿಸಿದ್ದು ಯಾರು? ಇದೇ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಸೋಲಿಸಿದ್ದು, ಇದು ಜಗತ್ ಜಾಹಿರ ವಿಚಾರ. ಸಿದ್ದರಾಮಯ್ಯನವರೇ, ಜನರು ಇತಿಹಾಸವನ್ನು ಅಷ್ಟು ಬೇಗ ಮರೆಯೋದಿಲ್ಲ ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ
ಗೋಲ್ಡ್ ಸ್ಮಗ್ಲಿಂಗ್‌ನಿಂದ ಹಿಡಿದು ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಇಡಿಗೆ ಪತ್ರ ಬರೆಯುತ್ತಿದ್ದವರು ಯಾರು? ಕಾಂಗ್ರೆಸ್‌ನ ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಎಂದು ಇಡಿಗೆ ಎಲ್ಲಾ ಮಾಹಿತಿ ಕಳುಹಿಸುತ್ತಾರೆ. ಇಷ್ಟೆಲ್ಲಾ ಮಾಡಿ ಈಗ ಡ್ರಾಮ ಮಾಡ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಜ್ಯೋತಿ ಮಲ್ಹೊತ್ರಾಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ
ಪರಮೇಶ್ವರ್ ಬಗ್ಗೆ ನಮಗೆ ಗೌರವ ಇದೆ. ಅವರು ಒಬ್ಬ ಸಭ್ಯ ರಾಜಕಾರಣಿ. ಕಾಂಗ್ರೆಸ್‌ನ ಒಂದು ಗುಂಪಿನವರು ಮಾಹಿತಿಗಳನ್ನೆಲ್ಲಾ ಇಡಿಗೆ ಕಳುಹಿಸಿದ್ದು. ಯಾರು ಕಳುಹಿಸಿದ್ದು ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಗುಪ್ತಚರ ಇಲಾಖೆ ಅವರ ಬಳಿ ಇದೆ. ಅವರ ಬಳಿ ಕೇಳಿದ್ರೆ ಯಾರು ಅಂತ ಹೇಳ್ತಾರೆ. ಇಂತಹ ಮಾಹಿತಿ ಸಿಕ್ಕಾಗ ಇಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಇವರೇ ಮಾಹಿತಿಯನ್ನು ಬೇಕಂತಲೆ ಕೊಟ್ಟಿದ್ದಾರೆ. ಇಡಿ ಕರ್ತವ್ಯದಂತೆ ತನಿಖೆ ಮಾಡ್ತಿದೆ. ಪರಮೇಶ್ವರ್‌ಗೆ ತೊಂದರೆ ಕೊಡಬೇಕು ಎಂಬ ಯಾವ ಉದ್ದೇಶವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಕಾನೂನು ಪ್ರಕಾರ ತಪ್ಪು ಮಾಡಿದ್ರೆ. ನಾನೇ ತಪ್ಪು ಮಾಡಲಿ, ಸಿದ್ದರಾಮಯ್ಯ, ಪರಮೇಶ್ವರ್ ತಪ್ಪು ಮಾಡಲಿ. ನಮ್ಮ ಪಕ್ಷದವರು ಇನ್ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗುತ್ತೆ. ಎಲ್ಲದಕ್ಕೂ ರಾಜಕಾರಣ ಬೆರಸಿದ್ರೆ, ನಿಮ್ಮ ಪಕ್ಷದವರು ಏನೇನು ಮಾಡಿದ್ದಾರೆಂಬುದು ಮುಂದೆ ನಿಮಗೇ ತೊಂದರೆ ಆಗುತ್ತದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ
ಎಲ್ಲಾ ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧೀಯ ಕೇಂದ್ರ ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶದ ಕುರಿತು ಪ್ರತಿಕ್ರಿಯಿಸಿದರು. ರಾಜೀವ್ ಗಾಂಧಿ ದೇಹಾಂತ್ಯವಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಪರಿವಾರದ ಪ್ರಧಾನ ಮಂತ್ರಿ ಇಲ್ಲ. ಅವರದ್ದೇ ಸರ್ಕಾರ ಇದ್ದಾಗಲೂ, ಯಾವ ಪ್ರಧಾನಮಂತ್ರಿ ಹೆಸರು ಬಂದ್ರೂ ಇವರಿಗೆ ಉರಿಯುತ್ತಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ತಡೆದುಕೊಳ್ಳಲು ಆಗ್ತಿಲ್ಲ. ಪ್ರಧಾನ ಮಂತ್ರಿ ಕುರ್ಚಿ ಅಂದ್ರೆ, ಗಾಂಧಿ ಪರಿವಾರದವರಿಗೆ ಮಾಡಿಟ್ಟ ಮೀಸಲು ಅಂತ ತಿಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಾ.ನಗರ| ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ವಧು
ಪ್ರಧಾನ ಮಂತ್ರಿ ಜನ ಔಷಧೀಯ ಕೇಂದ್ರ ಬಂದ್ ಮಾಡಿದ್ದಾರೆ. ಔಷಧ ಫ್ರೀ ಕೊಡುತ್ತೇವೆ ಅಂತಾರೆ. ಎಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಔಷಧ ಉಚಿತ ಸಿಗುತ್ತಾ? ಉತ್ತರ ಕರ್ನಾಟಕ ಪ್ರತಿಷ್ಠಿತ ಕಿಮ್ಸ್‌ನಲ್ಲಿ ಔಷಧ ಹೊರಗಡೆ ಬರೆದುಕೊಡ್ತಾರೆ. ನೀವು ಉಚಿತ ಕೊಟ್ರೆ ಜನ ಯಾಕೆ ಪ್ರಧಾನಮಂತ್ರಿ ಔಷಧ ಕೇಂದ್ರಕ್ಕೆ ಹೋಗ್ತಾರೆ. ಉಚಿತ ಔಷಧ ಕೊಟ್ರೆ ಜನೌಷಧೀಯ ಕೇಂದ್ರಕ್ಕೆ ಹೋಗಿ ತೆಗದುಕೊಳ್ಳಲು ಜನರಿಗೆ ಹುಚ್ಚು ಹಿಡಿದಿದ್ಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅತ್ಯಾಚಾರ ಕೇಸ್ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್
ಕಡಿಮೆ ಬೆಲೆಗೆ ಸಿಗುವ ಔಷಧಕ್ಕೂ ಕಲ್ಲು ಹಾಕ್ತಿರಿ. ಯಾಕೆಂದರೆ ಅದರಲ್ಲಿ ಪ್ರಧಾನಮಂತ್ರಿ ಹೆಸರಿದೆ. ಪ್ರಧಾನ ಮಂತ್ರಿ ಪದವನ್ನು ದ್ವೇಷ ಮಾಡ್ತಿದ್ದಾರೆ. ನೆಹರು, ಗಾಂಧಿ ಕುಟುಂಬದವರು ಪ್ರಧಾನಮಂತ್ರಿ ಆಗುವುದಿಲ್ಲ ಅಂತ ಅವರಿಗೂ ಗೊತ್ತಾಗಿದೆ. ದೇಶದ ಅಭ್ಯುದಯವನ್ನು ವಿರೋಧ ಮಾಡ್ತಿದ್ದಾರೆ. ದೇಶವನ್ನೇ ದ್ವೇಷ ಮಾಡ್ತಾ ಹಿಂದೂಸ್ತಾನ ವಿರುದ್ಧ ಹೋರಾಟ ಮಾಡ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಜನೌಷಧೀಯ ಕೇಂದ್ರದ ಬಗ್ಗೆ ಬಡವರ ಹಿತದೃಷ್ಟಿಯಿಂದ ಮರು ಪರಿಶೀಲನೆ ಮಾಡಬೇಕು. ಜನ ಔಷಧೀಯ ಕೇಂದ್ರ ಬಂದ್ ಮಾಡುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.