ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದ್ದೇವೆ, ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ, ಮೋದಿಗೆ ಗಿಫ್ಟ್ ಕೊಡಿ: ಪ್ರಹ್ಲಾದ್ ಜೋಶಿ

Public TV
1 Min Read
Pralhad Joshi 3

ಧಾರವಾಡ: ದೇಶದಲ್ಲಿ ಮೊದಲು ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು. ಆರ್ಟಿಕಲ್ 370 ( Article 370) ತೆಗೆದು ಉಗ್ರರ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದ ಕಬಡ್ಡಿ ಪಂದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ, ಮೊದಲು ಬೆಂಗಳೂರು, ಹೈದರಾಬಾದ್‍ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲವೂ ಬಂದ್ ಆಗಿದೆ. ಏಕೆಂದರೆ ಆರ್ಟಿಕಲ್ 370 ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಧರ್ಮಪತ್ನಿಯನ್ನು ನಮಗೆ ಪರಿಚಯಿಸಿ: ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಒತ್ತಾಯ

ಮೋದಿಯವರು (Narendra Modi) ಆರ್ಟಿಕಲ್ 370 ತೆಗೆದಿದ್ದೇ ಇದಕ್ಕೆಲ್ಲ ಕಾರಣ. ಹೀಗಾಗಿ ಬಿಜೆಪಿಯ 370 ಸ್ಥಾನ ತಾವು ಆರಿಸಿ ಕಳುಹಿಸಬೇಕು. ಇದುವೇ ನೀವು ಮೋದಿಯವರಿಗೆ ಕೊಡುವ ಗಿಫ್ಟ್ ಎಂದು ಹೇಳಿದರು. ಇದನ್ನೂ ಓದಿ: ಪುಟ್ಟಣ್ಣ ಗೆಲುವು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನರ ಮನಸ್ಥಿತಿಗೆ ಸಾಕ್ಷಿ: ಡಿಕೆಶಿ

Share This Article