– ಚನ್ನಗಿರಿ ಪ್ರಕರಣದಲ್ಲಿ ಮಾತ್ರ ಪೊಲೀಸರ ಮೇಲೆ ಕ್ರಮ ಯಾಕೆ?
– ರಾಜ್ಯ ಸರ್ಕಾರದ ವಿರುದ್ಧ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
ಹುಬ್ಬಳ್ಳಿ: ಯಾರು ಎಲ್ಲೇ ಗಲಭೆ ಮಾಡಿದರೂ ತಪ್ಪು, ಅದನ್ನು ಖಂಡಿಸಬೇಕು. ಆದ್ರೆ ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಗಿರಿ ಲಾಕಪ್ ಡೆತ್ (Channagiri Lockup Death) ವಿಚಾರದಲ್ಲಿ ಸಿದ್ದರಾಮಯ್ಯನವರು ತೆಗೆದುಕೊಂಡ ನಿರ್ಧಾರವನ್ನು ಈ ಹಿಂದೆ ನಡೆದ ಯಾವುದೇ ವಿಚಾರದಲ್ಲಿಯೂ ತೆಗೆದುಕೊಂಡಿಲ್ಲ. ಅಂಜಲಿ, ನೇಹಾ ಹಿರೇಮಠ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಆಗಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಯಾಕೆ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?
ಒತ್ತಡ ಹಾಕಿದ್ರೆ ಪೊಲೀಸರೇ ಓಡಿ ಹೋಗ್ತಾರೆ:
ಸಿದ್ದರಾಮಯ್ಯನವರೇ ನೀವು ಎಷ್ಟು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದೀರಿ, ನಿಮ್ಮ ಈ ತುಷ್ಟಿಕರಣ ರಾಜಕೀಯದಿಂದ ಅರಾಜಕತೆ ಸೃಷ್ಟಿ ಆಗುತ್ತದೆ. ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ? ಯಾರೇ ಗಲಭೆ ಮಾಡಿದ್ರೂ ತಪ್ಪು, ಅದನ್ನು ಖಂಡಿಸಲೇಬೇಕು. ಆದ್ರೆ ಈ ವಿಚಾರದಲ್ಲಿ ಪೊಲೀಸರ ನೈತಿಕತೆ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಠಾಣೆ ಬಿಟ್ಟು ಓಡಿಹೋಗ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಪೊಲೀಸರು ಪ್ರತಿ 2 ಗಂಟೆಗೆ ಡ್ರಿಲ್ ಮಾಡಬೇಕು ಎಂಬ ಸಿಎಂ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಸಿಎಂಗೆ ಮತ್ತು ಗೃಹಸಚಿವರಿಗೆ ಡ್ರಿಲ್ ಮಾಡಿಸಬೇಕು. ರಾಜ್ಯ ಪೊಲೀಸರಿಂದು ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಔರಾಧ್ ಕರ್ ವರದಿಯನ್ನೇ ಇನ್ನೂ ಜಾರಿ ಮಾಡಿಲ್ಲ, 2 ಗಂಟೆಗೊಮ್ಮೆ ಡ್ರಿಲ್ ಮಾಡಿ ಅಂದರೆ ಅವರು ಎಲ್ಲಿಂದ ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ
ಪೊಲೀಸರು ಹುಚ್ಚರಂತೆ ರಸ್ತೆಯಲ್ಲಿ ಓಡಾಡಬೇಕಾ? ಹೀಗೆ ಮಾಡಿದರೆ ಜನ ಏನು ಹೇಳತ್ತಾರೆ? ಕರ್ನಾಟಕ ಸರ್ಕಾರ ಮತಿಭ್ರಮಣೆಗೊಂಡಿದೆ. ಆದೇಶ ಮಾಡುವುದಕ್ಕೂ ಮುನ್ನ ಯೋಚನೆ ಮಾಡುತ್ತಿಲ್ಲ. ಪೊಲೀಸರಿಗೆ ಹೊರಡಿಸಿರುವ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕುರಾನ್ ಸತ್ಯವಾಗಿ ನನ್ನ ಗಂಡನಿಗೆ ಯಾವ್ದೇ ರೋಗ ಇರಲಿಲ್ಲ, ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ