ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇವೆ ಎಂದು ಯಾವ ಆಧಾರದ ಮೇಲೆ ಹೇಳಿದ್ದೀರಿ? ಸಿದ್ದರಾಮಯ್ಯನವರೇ (Siddaramaiah) ನಿಮ್ದೇನು ಸರ್ಕಾರನಾ? ಸರ್ವಾಧಿಕಾರನಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರಶ್ನಿಸಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಎಲ್ಲಿದ್ದೀರಿ? ಶ್ರೀಕಾಂತ್ ಮೇಲೆ ಯಾವ ಕೇಸ್ ಇಲ್ಲ. ಜೋಶಿ ಅವರೇನು ಕಾನೂನು ತಜ್ಞರಾ ಎಂದು ಕೇಳಿದ್ದರು. ನಾನು ಕಾನೂನು ತಜ್ಞ ಹೌದೋ ಅಲ್ಲವೋ ನಿಮ್ಮ ಕಡೆ ಕಾನೂನು ತಜ್ಞರು ಇದಾರೋ ಇಲ್ವೋ ಕೇಸ್ ಏನಾಗಿದೆ ಅನ್ನೋದನ್ನ ತಿಳಿದುಕೊಳ್ಳಬೇಕಿತ್ತು. ಈ ತರಹ ಮಾತಾಡೋದು ಒಬ್ಬ ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿದ್ದು ನಮ್ಮ ಸರ್ಕಾರ: ದಿನೇಶ್ ಗುಂಡೂರಾವ್
Advertisement
Advertisement
ಒಂದು ಕೋಮಿನ ವೋಟಿಗಾಗಿ ತುಷ್ಟೀಕರಣದ ಪರಾಕಾಷ್ಠೆ ಹೆಚ್ಚಾಗಿದೆ. ರಾಮಮಂದಿರಕ್ಕೆ ಯಾರೂ ಬರಬಾರದು ಎಂದು ದುಷ್ಟ ಯೋಜನೆ ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕಾಂಗ್ರೆಸ್‍ನವರು ಭಯ ಹುಟ್ಟಿಸುತ್ತಿದ್ದಾರೆ. ಇದು ಸರ್ಕಾರ ನಡೆಸೋ ರೀತಿನಾ? ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ.
Advertisement
ಹುಚ್ಚು ಹುಚ್ಚಾಗಿ ಯಾರನ್ನೋ ಅರೆಸ್ಟ್ ಮಾಡಿದ್ದಾರೆ. ಇದು ಸರ್ಕಾರದ ನಡೆಸುವ ರೀತಿಯಲ್ಲ. ಒಂದು ಕೋಮಿನ ಮತಕ್ಕಾಗಿ, ರಾಮ ಮಂದಿರ ಉದ್ಘಾಟನೆ ಆಗುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ಏನೋ ಮಾಡಲು ಹೋಗಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಸಿದ್ದರಾಮಯ್ಯ ಹೀಗೆ ಆದ್ರೆ, ಈ ಬಾರಿನೂ ಕಾಂಗ್ರೆಸ್ ದೇಶದಲ್ಲಿ ಅಧಿಕೃತ ವಿರೋಧ ಪಕ್ಷ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
Advertisement
ಶ್ರೀಕಾಂತ್ ಪೂಜಾರಿಯವರಿಗೆ ಬೇಲ್ ಆಗಿರುವುದರಿಂದ ಹೋರಾಟ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್‍ನ ರಾಜಕೀಯ ಹೋರಾಟ ಆರೋಪಕ್ಕೆ, ನೀವು ಏನನ್ನೂ ರಾಜಕೀಯ ಲಾಭಕ್ಕೆ ಮಾಡೋದಿಲ್ವಾ? ಶ್ರೀಕಾಂತ್ ಪೂಜಾರಿಯವರನ್ನು ಅರೆಸ್ಟ್ ಮಾಡಿರೋದು ರಾಜ್ಯದ ಹಿತ ದೃಷ್ಟಿಯಿಂದನಾ? ಎಂದು ಕಿಡಿಕಾರಿದ್ದಾರೆ.
ಇನ್ನೂ ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ವಿಚಾರದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ತಪ್ಪುಗಳು ನಡೆಯದಂತೆ ಸಮಗ್ರ ತನಿಖೆ ಮಾಡಬೇಕು. ಮೇಲ್ ಹಾಕಿದವರು ಯಾವ ಜಾತಿಯವರು ಎಂದು ನೋಡದೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ – ಹೆಚ್.ಆರ್.ರಂಗನಾಥ್‌ಗೆ ಆಹ್ವಾನ