– ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ
– ಪೊಲೀಸರು ಕಾಂಗ್ರೆಸ್ ಸರ್ಕಾರದ ಗುಲಾಮರಾ?; ಸಚಿವ ರೋಷಾವೇಶ
ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮುಸ್ಲಿಮರ ವಿರುದ್ಧವಾಗಿಲ್ಲ. ಕಾಂಗ್ರೆಸ್ ನಾಯಕರಿಗೆ ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ಮಸೂದೆಗೆ ವಿರುದ್ಧ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ. ಸೋನಿಯಾ ಗಾಂಧಿ (Sonia Gandhi) ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ರಾಜಾ ಮಾತೆ ಸುಪುತ್ರ ರಾಹುಲ್ ಗಾಂಧಿ ಈ ಹಿಂದೆ ಬಿಲ್ ಹರಿದು ಹಾಕಿದ್ದಾರೆ. ಅವರು ಈ ಬಿಲ್ ಬಗ್ಗೆ ಮಾತನಾಡುತ್ತಾರೆ. ಮೋದಿ ಸರ್ಕಾರ ಅಸಂವಿಧಾನಕವಾಗಿ ಬಿಲ್ ಮಂಡನೆ ಮಾಡಿಲ್ಲ. ಕಾಂಗ್ರೆಸ್ ನಾಯಕರಿಗೆ ಈ ಬಿಲ್ ನಿಂದ ರಾಜಕೀಯವಾಗಿ ಹಿನ್ನಡೆ ಆಗುತ್ತೆ, ಹೀಗಾಗಿ ವಿರೋಧ ಮಾಡುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಇದರ ಪ್ರಭಾವ ಗೊತ್ತಾಗುತ್ತದೆ ಎಂದರು.
ವಕ್ಫ್ ಬಿಲ್ ಮುಸ್ಲಿಮರ (Muslims) ವಿರುದ್ಧ ಇಲ್ಲ. 39 ಲಕ್ಷ ಎಕರೆಗೆ 168 ಕೋಟಿ ರೆವೆನ್ಯೂ ಬರ್ತಾ ಇದೆ. ಕರ್ನಾಟಕದಲ್ಲಿ 54 ಸಾವಿರ ಎಕರೆ ವಕ್ಫ್ ಜಮೀನಿದೆ. ಈ ಆಸ್ತಿಯನ್ನ ಸರಿಯಾಗಿ ಬಳಸಿದರೆ, ಸಚ್ಛರ ಕಮೀಟಿ ವರದಿ ಪ್ರಕಾರ 12 ಸಾವಿರ ಕೋಟಿ ಆದಾಯ ಬರ್ತಿತ್ತು. ಇದರಲ್ಲಿ ದುರಪಯೋಗ, ಸ್ವಜನ ಪಕ್ಷಪಾತ ಇದೆ, ಆಸ್ತಿ ನುಂಗ್ತಾ ಇದ್ದಾರೆ. ಆದ್ದರಿಂದ ನಾವೆಲ್ಲ ವಿಚಾರ ಮಾಡಿ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ
ಈ ವಕ್ಫ್ ಬಿಲ್ ಬಗ್ಗೆ ಕೆಲವರಿಗೆ ತಪ್ಪಾಗಿ ಅರ್ಥ ಮಾಡಿಸ್ತಿದ್ದಾರೆ. ಬಹಳ ಹಿಂದೂಗಳ ಆಸ್ತಿ ವಕ್ಫ್ ಆಗಿದೆ. ವಕ್ಫ್ ಬೋರ್ಡ್ ಇಂಡಿಪೆಂಡೆಂಟ್ ಇದೆ. ಅನೇಕರ ಮುಸ್ಲಿಮರ ಮನೆಗಳನ್ನ ವಕ್ಫ್ ಆಸ್ತಿ ಮಾಡಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ ಅನೇಕರ ಮುಸ್ಲಿಂ ಮನೆ ವಕ್ಫ್ ಆಸ್ತಿ ಆಗಿವೆ. ಆದ್ದರಿಂದ ವಕ್ಫ್ ಬೋರ್ಡ್‌ನಲ್ಲಿ ಸರಿಯಾದ ರೀತಿ ಮ್ಯಾನೇಜಮೆಂಟ್ ಆಗಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರ
ಇನ್ನೂ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ ಇದೆ ಅಂತ ಸ್ಪಷ್ಟ ಆಗುತ್ತೆ. ಒಬ್ಬ ಶಾಸಕನಿಗೆ ಜಾತಿ ಅಥವಾ ಅವಾಚ್ಯ ಶಬ್ದದಿಂದ ಬೈದ್ರೆ, ಶೌಚಾಲಯ ಕೆಟ್ಟು ಹೋಗಿದ್ದಕ್ಕೆ ಫೋಟೋ ಹಾಕಿದ್ದಾರೆ ಅದರಲ್ಲೆನು ತಪ್ಪು? ಮೃತಪಟ್ಟ ಯುವಕ ಸೇರಿ ಇಬ್ಬರು ಯುವಕರ ಮೇಲೆ ಎಫ್‌ಐಆರ್ ಹಾಕ್ತಾರೆ. ಅಧಿಕಾರದ ಧರ್ಪ, ದುರಹಂಕಾರ ಯಾವ ಪ್ರಮಾಣದಲ್ಲಿದೆ? ಎಫ್‌ಐಆರ್ ಕೋರ್ಟ್‌ನಲ್ಲಿ ಸ್ಟೇ ಆಗುತ್ತೆ. ಆದರೂ ರೌಡಿ ಶೀಟರ್ ತಗಿತೇನೆ ಅಂತ ಬೆದರಿಸಿದ್ದಾರೆ. ಪೊಲೀಸರಿಗೆ ಹೇಳ್ತೇನೆ ಸರ್ಕಾರ ಒಂದೇ ಇರೋದಿಲ್ಲ, ಯಾವ ಆಧಾರದ ಮೇಲೆ ರೌಡಿ ಶೀಟರ್ ಹಾಕ್ತಿರಾ? ಪೊಲೀಸರೇ ಕಾಂಗ್ರೆಸ್ ಪಕ್ಷದ ಗುಲಾಮರಾ ನೀವು? ನಾವು ಕೂಡ ಸರ್ಕಾರದಲ್ಲಿದ್ದೇವೆ, ರಾಮಾನುಜ, ಎಸ್‌ಪಿ ಅಮಾನತ್ತು ಆಗಬೇಕು. ಪೊಣ್ಣನ್ನ ಅನ್ನೋನು ರಾಜಕೀಯಕ್ಕೆ ಅನ್ ಫಿಟ್ ಇದ್ದಾರೆ. ಕೆಲವೊಮ್ಮೆ ನಮ್ಮ ಫೋಟೋ ಕೂಡ ಹಾಕ್ತಾರೆ ನಾವು ಎಫ್‌ಐಆರ್ ಹಾಕಿದ್ದೇವಾ? ಆತನ ವಾಟ್ಸಪ್‌ನಲ್ಲಿ ಸ್ಪಷ್ಟವಾಗಿ ಹೆಸರಿದೆ, ಶಾಸಕನ ಹೆಸರು ಬರೆದಿದ್ದಾರೆ. ಇವರ ಮೇಲೆ ಒಂದೂ ಕೇಸ್ ಹಾಕಲ್ಲ ಒಳ್ಳೆ ರೀತಿಯ ಕೆಲಸ ಮಾಡುವ ಪೊಲೀಸರು ನಮ್ಮಲ್ಲಿ ಇದ್ದಾರೆ. ಹೈಕೋರ್ಟ್ ಸ್ಟೇ ಮಾಡಿದ ಮೇಲೂ ರೌಡಿ ಶೀಟರ್ ಹಾಕಿದ್ರೆ ಇಬ್ಬರು ಆಫೀಸರ್ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ನಾನು ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಬೈತಿಲ್ಲ. ಈ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಲೇಬೇಕು. ಇವರ ವಿರುದ್ಧ ಹೈಕೋರ್ಟ್ ನಲ್ಲಿ ಕೇಸ್ ಹಾಕಲು ಸೂಚಿಸಿದ್ದೇನೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆ ಎಲ್ಲಾ ಪೌಲ್ಟ್ರಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸೂಚನೆ