ಧಾರವಾಡ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Corporation Corruption Case) ಸಂಪೂರ್ಣವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಬಾಂಬ್ ಸಿಡಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್ ಮಾಡಿದ್ರು: ಹೆಚ್‌ಡಿಕೆ ಕಿಡಿ
ಧಾರವಾಡದಲ್ಲಿ (Dharwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ, 40 ದಿನವಾದರೂ ಎಸ್‌ಐಟಿ ನಾಗೇಂದ್ರ (BN Nagendra) ಮತ್ತು ದದ್ದಲ್‌ಗೆ ನೋಟೀಸ್ ಕೊಟ್ಟಿಲ್ಲ, ಅವರನ್ನು ವಿಚಾರಣೆಗೂ ಕರೆದಿಲ್ಲ. ಈಗ ದದ್ದಲ್‌ನನ್ನ ಬಂಧಿಸಿ ಅಂತ ಹೇಳಿದ್ದಾರೆ. ಬಂಧನಕ್ಕೊಳಗಾಗಿ ಸಿಎಂ ಸಂಪೂರ್ಣ ಆಶ್ರಯದಲ್ಲಿ ರಾಜಾತಿಥ್ಯ ಪಡೆಯಬೇಕೆಂಬ ದುರಾಲೋಚನೆಯೂ ಇದರಲ್ಲಿದೆ. ಸರ್ಕಾರಿ ಖಜಾನೆಯಿಂದ ಹಣ ಹೋಗಿದೆ. ಅತ್ಯಂತ ಹತಾಶಾ ಭಾವನೆಯಿಂದ ಸಿದ್ದರಾಮಯ್ಯ ಶಿಷ್ಯಂದಿರು ಮಾತನಾಡುತ್ತಿದ್ದಾರೆ. ಇವರ ತಲೆಯಲ್ಲಿನ ಬುದ್ಧಿ ತೀರಾ ಖಾಲಿಯಾಗಿದೆ ಅನಿಸುತ್ತಿದೆ ಎಂದ ಅವರು, ಸಿದ್ದರಾಮಯ್ಯ (Siddaramaiah) ಹಿಂದೆಲ್ಲ ನಾಲಿಗೆ ಮೆದುಳಿಗೆ ಸಂಬಂಧವಿಲ್ಲದ ಮಾತು ಅಂತೆಲ್ಲ ಹೇಳುತ್ತಿದ್ದರು, ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಹ ಕೇಳಿದ್ದಾರೆ, ಈಗ ಅವರ ಮಂತ್ರಿಗಳೇ ನಾಲಿಗೆ-ಮೆದುಳಿಗೆ ಸಂಬಂಧ ಇಲ್ಲದಂತೆ ಮಾತನಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು.
ಇಲ್ಲೊಬ್ಬ ಮಂತ್ರಿ ಸಹ ಹಾಗೆಯೇ ಮಾತನಾಡಿದ್ದಾರೆ, ನೀವು ಸಹಿ ಮಾಡಿದೀರಿ, ಅಕೌಂಟ್ ನಿಮ್ಮ ಹೆಸರಿನಲ್ಲಿದೆ, ಬೇರೆ ಅಕೌಂಟ್‌ಗೆ ಹಣ ಹೋಗಿದೆ, ಅಲ್ಲಿಂದ ಪಡೆದು ನುಂಗಿ ನೀರು ಕುಡಿದಿದ್ದಾರೆ ಎಂದ ಅವರು, ಇದರಲ್ಲಿ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದಾರೆ. ಈ ಹಿಂದೆಯೂ ತೆಲಂಗಾಣ ಚುನಾವಣೆಗೆ ಸಾವಿರಾರೂ ಕೋಟಿ ಹಣ ಕಳುಹಿಸಿದ್ದರು, ಇಬ್ಬರು ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕಿತ್ತು. ಅದನ್ನ ಆಗ ನಾನು ಹೇಳಿದ್ದೆ, ಹಣ ಕಳಿಸುತ್ತಿದ್ದಾರೆ ಅಂದಾಗ ಕಾಂಗ್ರೆಸ್ ನವರು ವಿರೋಧಿಸಿದ್ದರು ಎಂದರು. ಇದನ್ನೂ ಓದಿ: ಆಟೋ ಚಕ್ರದಿಂದ ಮೈಗೆ ಚಿಮ್ಮಿದ ಕೆಸರು – ಮರಳಿ ಬರುವವರೆಗೂ ಕಾದು ಚಾಲಕನಿಗೆ ಚಾಕು ಇರಿತ
ಮುಡಾ ಹಗರಣದಲ್ಲಿಯೂ ಇವರು ಸಿಕ್ಕಿಬಿದ್ದಿದ್ದಾರೆ, 2003-04 ರಲ್ಲಿ ಆ ಭೂಮಿ ಡಿನೋಟಿಫಿಕೇಶನ್ ಆಗಿತ್ತು ಎನ್ನಲಾಗಿದೆ. 2010ರ ವರೆಗೆ ಆ ಭೂಮಿ ಮುಡಾ ಹೆಸರಿನಲ್ಲಿಯೇ ಇದೆ. 2010ರ ನಂತರ ಅನೇಕರಿಗೆ ಫ್ಲಾಟ್ ನೀಡಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ದಾನ ಕೊಟ್ಟಿದ್ದಾರೆ ಅಂತಿದ್ದಾರೆ. ಮುಡಾ ಅಭಿವೃದ್ಧಿಪಡಿಸಿ ಫ್ಲಾಟ್ ನೀಡಿದೆ, 2013ರ ಚುನಾವಣೆಯಲ್ಲಿ ಅಫಿಡವಿಟ್‌ನಲ್ಲಿ ಏಕೆ ಹಾಕಿಲ್ಲ? 2018ರ ಚುನಾವಣೆಯಲ್ಲಿ ಅದನ್ನು 25 ಲಕ್ಷ ರೂ. ಅಂತ ತೋರಿಸಿದ್ದಾರೆ. 2023ರ ಚುನಾವಣೆಯಲ್ಲಿ ಅದನ್ನು 8.62 ಕೋಟಿ ರೂ. ಅಂತ ತೋರಿಸಿದ್ದಾರೆ, ಇದೀಗ 62 ಕೋಟಿ ರೂ. ಅಂತ ಏಕೆ ಪರಿಹಾರ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೇ ಇಲ್ಲಿ ಫ್ಲಾಟ್ ಇದ್ದರೂ ವಿಜಯನಗರದಲ್ಲೇಕೆ ಫ್ಲಾಟ್ ತೆಗೆದುಕೊಂಡಿರಿ? ಇವರೆಲ್ಲಾ ಕಳ್ಳರಿದ್ದಾರೆ, ಅಷ್ಟೇ ಎಂದು ಜೋಶಿ ಕಿಡಿ ಕಾರಿದರು. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ – ಮೂವರು ಸಾವು, 14 ಮಂದಿ ಗಂಭೀರ