ಹುಬ್ಬಳ್ಳಿ: ಕಾಂಗ್ರೆಸ್‌ನ DNAಯಲ್ಲಿ ನಿವೃತ್ತಿ, ಪ್ರಾಮಾಣಿಕತೆ ಅನ್ನೋದೆ ಇಲ್ಲ. ಇದ್ರೆ ರಾಹುಲ್ ಗಾಂಧಿ ನಿವೃತ್ತಿ ಪಡೆದಿದ್ದಾರಾ? ಎಂದು ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (pralhad joshi) ತಿರುಗೇಟು ನೀಡಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೀಡಿದ ಆಣೆಯಂತೆ ಕಾಂಗ್ರೆಸ್ ನಡೆದುಕೊಂಡಿಲ್ಲ. ದೇಶದಲ್ಲಿ ನರೇಂದ್ರ ಮೋದಿ (Narendra Modi) ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಪಾರದರ್ಶಕ ವ್ಯವಸ್ಥೆ ತಂದಿದೆ. ಆದರೆ ಈ ಪಾರದರ್ಶಕ ವ್ಯವಸ್ಥೆಯನ್ನು ಹಾಳು ಮಾಡಿ, ಹಣ ಹೊಡೆಯೋದಕ್ಕೆ ಕಾಂಗ್ರೆಸ್ (Congress) ಹೊರಟಿದೆ. ಇದೆಲ್ಲಾ ಗಮನಿಸಿದ್ರೆ ಸಿದ್ದರಾಮಯ್ಯ ಭ್ರಷ್ಟ ರಾಜಕಾರಣಿ ಎಂಬುದು ಜಗಜ್ಜಾಹಿರಾಗಿದೆ ಎಂದರು.
Advertisement
Advertisement
ಮೈಸೂರಿನಲ್ಲಿ (Mysuru) ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿಲ್ಲ ಏಕೆಂದರೆ, ಅಲ್ಲಿ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಅಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವರು ಬಯಸುತ್ತಿಲ್ಲ ಎಂದ ಅವರು, ಎಲ್ಲವೂ ಕಾನೂನಿನ ಮೇಲೆಯೇ ನಡೆಯಲ್ಲ. ಜನ ಏನು ಉತ್ತರ ನೀಡಬೇಕೋ ನೀಡುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ – ಆರೋಪಿ ಆರ್.ಡಿ.ಪಾಟೀಲ್‌ಗೆ ಸಿಐಡಿ ನೋಟಿಸ್
Advertisement
Advertisement
ಸಿದ್ದರಾಮಯ್ಯ (Siddaramaiah) ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ಅವರು ಒಬ್ಬ ಚುನಾಯಿತ ಪ್ರತಿನಿಧಿ. ಆದರೆ ರಾಹುಲ್ ಗಾಂಧಿ ಏನು? ದೇಶದಲ್ಲಿ ರಾಹುಲ್ ಗಾಂಧಿ ಸಂದೇಶ ದೇಶದ ತುಂಬಾ ಪಸರಿಸುತ್ತಿದೆ. ಆದರೆ ಖರ್ಗೆಯವರ ಸಂದೇಶ ಪಸರಿಸುತ್ತಿದೆ ಅಂತಾ ಯಾಕೆ ಹೇಳಲ್ಲ? ದೇಶದಲ್ಲಿ ಕಾಂಗ್ರೆಸ್ ಸರ್ವಾಧಿಕಾರ ಹಾಗೂ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಪ್ಪಲಿ ಹೆಸರೇಳಿಕೊಂಡು ಜೆಡಿಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಟೀಲ್‍ಗೆ ಚಪ್ಪಲಿ ಸೇವೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k