ಹುಬ್ಬಳ್ಳಿ: ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ (Rice) ಕೊಡಲು ರೆಡಿಯಿದೆ. ಆದ್ರೆ ಅಕ್ಕಿ ಖರೀದಿಸೋಕೆ ರಾಜ್ಯ ಸರ್ಕಾರದ (Karnataka Government) ಬಳಿಯೇ ದುಡ್ಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.
ನಾವು ಕೇಳಿದಾಗ ಕೇಂದ್ರ ಅಕ್ಕಿ ಕೊಡಲಿಲ್ಲ. ಈಗ ಭಾರತ್ ಅಕ್ಕಿ (Bharat Rice) ಕೂಡ ನಿಲ್ಲಿಸಿದ್ದಾರೆ. ಶೀಘ್ರವೇ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಅಕ್ಕಿ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದರು. ಈ ಹೇಳಿಕೆ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ, ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ಕೊಡಲು ರೆಡಿಯಿದೆ. ಆದ್ರೆ ಅಕ್ಕಿ ಖರೀದಿಸೋಕೆ ರಾಜ್ಯ ಸರ್ಕಾರದ ಬಳಿಯೇ ದುಡ್ಡಿಲ್ಲ. ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ – ಹೆಚ್.ವಿಶ್ವನಾಥ್ ಬೇಸರ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ ಆಗಿ ಪರಿವರ್ತನೆ ಆಗಿದೆ. ಒಂದು ರಸ್ತೆ ಮಾಡಿಸೋದಕ್ಕೂ ದುಡ್ಡಿಲ್ಲ. ಕಳೆದ ಬಾರಿ ನಮ್ಮ ಬಳಿ ಅಕ್ಕಿ ಬಫರ್ ಸ್ಟಾಕ್‌ಗೆ ಹತ್ತಿರ ಇತ್ತು. ದೇಶಾದ್ಯಂತ ಅಕ್ಕಿ ಸಂಗ್ರಹ ಕಡಿಮೆ ಆಗುತ್ತೆ ಅನ್ನುವ ಆತಂಕ ಇತ್ತು, ಆದ್ದರಿಂದ ಅಕ್ಕಿ ನಿಲ್ಲಿಸಿದ್ದೆವು. ಈಗ ನಮ್ಮ ಬಳಿ ಅಕ್ಕಿ ಸ್ಟಾಕ್ ಇದೆ. ಮುಕ್ತ ಮಾರುಕಟ್ಟೆ ಸಪೋರ್ಟ್ ಸಿಸ್ಟಮ್‌ನಲ್ಲಿ (Open Market Support System) ನಾವು ಅಕ್ಕಿ ಕೊಡ್ತಿದ್ದೇವೆ. 34 ರೂ. ಇದ್ದ ಅಕ್ಕಿ ಬೆಲೆ 28 ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮುಡಾ ಪ್ರಕರಣ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ
ನೀವು 170 ರೂ. ಎಷ್ಟು ಜನರಿಗೆ ಅಕ್ಕಿ ಕೊಟ್ಟಿದ್ದೀರಿ? ಕಳೆದ 2 ತಿಂಗಳಿಂದ ಗೃಹಲಕ್ಷ್ಮಿ ಹಣವೇ ಬಂದಿಲ್ಲ. ವೃದ್ಯಾಪ್ಯ ವೇತನವೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಯಾಕೆ ಹೆಚ್ಚಿಸಿದ್ರಿ? ನಾಚಿಕೆ ಆಗಲ್ವಾ ನಿಮಗೆ? ಜನರಿಗೆ ದ್ರೋಹ ಮಾಡೋ ಸರ್ಕಾರ ಸಿದ್ಧರಾಮಯ್ಯ ಸರ್ಕಾರ. ಎಲ್ಲ ಬೆಲೆಯನ್ನು ಜಾಸ್ತಿ ಮಾಡಿದ್ದಾರೆ. ಜನರಿಗೆ ಹೊರೆ ಹಾಕೋ ಕೆಲಸ ಮಾಡಿದ್ದಾರೆ. ಯಾವುದೇ ಸಣ್ಣ ಕೆಲಸಕ್ಕೂ ದುಡ್ಡಿಲ್ಲ ಅಂತಿದ್ದಾರೆ. ಇವಾಗ ಅಕ್ಕಿ ತಗೊಳ್ಳಿ ಅಂದ್ರೆ ಅದಕ್ಕೂ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಸಿದ್ದರಾಮಯ್ಯ ಏನಾಗ್ತಿದೆ ಎಂದು ಅಧಿಕಾರಿಗಳಿಂದ ತಿಳಿದುಕೊಂಡು ಮಾತಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: 2ನೇ ವಿಮಾನ ನಿಲ್ದಾಣದ ಬಗ್ಗೆ ವಿಸ್ತೃತ ಚರ್ಚೆ ಬಳಿಕ ಸೂಕ್ತ ತೀರ್ಮಾನ: ಎಂ.ಬಿ.ಪಾಟೀಲ್