ಹಾವೇರಿ: ಸ್ವಾತಂತ್ರ್ಯ ಹೋರಾಟ ನಮ್ಮದು ಎಂದು ಹೇಳಲು ಕಾಂಗ್ರೆಸ್‍ನವರಿಗೆ ಅರ್ಹತೆ, ನೈತಿಕತೆ, ಅಧಿಕಾರವೂ ಇಲ್ಲ. ಈಗಿನ ಕಾಂಗ್ರೆಸ್‍ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿನದು ಡುಪ್ಲಿಕೇಟ್ ಕಾಂಗ್ರೆಸ್, ಈಗಿನವರು ನಕಲಿ ಗಾಂಧಿವಾದಿಗಳು ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಸ್ವಾತಂತ್ರ್ಯದ ವಿಚಾರದಲ್ಲಿ ಕಾಂಗ್ರೆಸ್‍ನವರು ರಾಜಕೀಯ ಮಾಡಬಾರದಿತ್ತು. ಈಗಿರುವುದು ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಲ್ಲ, ಇಂದಿರಾ ಕಾಂಗ್ರೆಸ್. ಐ ಕಾಂಗ್ರೆಸ್- ಅಂದರೆ ಇಂದಿರಾ ಕಾಂಗ್ರೆಸ್ ಎಂದು ಟೀಕಿಸಿದರು.
Advertisement
Advertisement
ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್‍ಗೆ ಹೋಲಿಕೆ ಮಾಡಬಾರದು. ಬ್ಯಾನರ್‌ಗಳ ಬಗ್ಗೆ ಆಕ್ಷೇಪಣೆ ಇದ್ದರೆ ಆಕ್ಷೇಪಣೆ ಸಲ್ಲಿಸಲಿ. ಹರಿಯುವುದು ಇತ್ಯಾದಿ ಮಾಡಿ ಯಾರೂ ಸೌಹಾರ್ದತೆಯನ್ನು ಹಾಳು ಮಾಡಬಾರದು. ಅದನ್ನು ನಾನು ಎಲ್ಲರಿಗೂ ಸಲಹೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಇನ್ನು ಭಾರತದ ಧ್ವಜ ಮಾತ್ರ ಹಾರುತ್ತದೆ, ಪಾಕ್ ಧ್ವಜ ಇತಿಹಾಸ ಮಾತ್ರ: ಮನೋಜ್ ಸಿನ್ಹಾ
Advertisement
ದೇಶದ ಸ್ವಾತಂತ್ರ್ಯಕ್ಕಾಗಿ ಅಭೂತಪೂರ್ವ ಹೋರಾಟಗಳು ನಡೆದಿವೆ. ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಮೂರೂವರೆ ಕೋಟಿ ಜನರು ಪ್ರಾಣತ್ಯಾಗ ಮಾಡಿರು ಅಂದಾಜಿದೆ. ಅದೆಲ್ಲವನ್ನು ನೆನಪಿಸಬೇಕು. ದೇಶವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿ, ಜಗತ್ತಿನಲ್ಲಿ ಭಾರತ ಒಂದು ಹಿರಿಯಣ್ಣನಂತೆ ಆಗಬೇಕು ಎನ್ನುವ ಕಾರಣಕ್ಕೆ ಮೋದಿಯವರ ಕರೆಯಂತೆ ಈ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಅಭೂತಪೂರ್ವ ಯಶಸ್ಸು ಸಿಗುತ್ತಿದೆ. ಧ್ವಜ ಖರೀದಿ ಮಾಡಿ ಎಂದಾಗ ಒಂದೇ ದಿನದಲ್ಲಿ ಒಂದು ಕೋಟಿ ಧ್ವಜ ಖರೀದಿ ಮಾಡಿದ್ದಾರೆ. ಯಾರು ಇದನ್ನು ವಿರೋಧಿಸುತ್ತಿದ್ದರೋ ಅವರೇ ಈಗ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
Advertisement
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಕಾರ್ಪೋರೇಶನ್ ಮೈದಾನ. ಯಾರಿಗೆ ಕೊಡಬೇಕು, ಯಾರಿಗೆ ಬೇಡ ಅನ್ನೋದು. ಅಲ್ಲಿನ ಕಾರ್ಪೋರೆಶನ್ ಅವರಿಗೆ ಅಧಿಕಾರವಿದೆ. ಅಲ್ಲಿನ ಕಾರ್ಪೋರೇಶನ್ ಅವರು ಮತ್ತು ಅಲ್ಲಿನ ಕಾನೂನು ಪಾಲನೆ ಮಾಡೋರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ