ಧಾರವಾಡ: ಕಾಂಗ್ರಸ್‍ನವರಿಗೆ (Congress) ಧ್ಯಾನ (Meditation) ಎಂದರೇ ಏನು ಅಂತಾನೇ ಗೊತ್ತಿಲ್ಲ. ಅವರಿಗೆ ಕೇವಲ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯೇ ಧ್ಯಾನ ಇದ್ದಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವ ವಿಚಾರದ ಕುರಿತು ಸಿದ್ದರಾಮಯ್ಯ (Siddaramaiah) ಮಾಡಿದ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅವರು, ಶಾಲಾ ಮಕ್ಕಳಿಗೆ ಧ್ಯಾನ ಮಾಡಿಸುವ ಮೂಲಕ ಹಿಂದುತ್ವ ಹೇರುತ್ತಿದ್ದಾರೆ ಎಂಬುದು ಸುಳ್ಳು. ಶಾಲೆಗಳಲ್ಲಿ ಇಂತದ್ದೇ ದೇವರ ಧ್ಯಾನ ಮಾಡಿ ಎಂದು ಹೇಳಿಲ್ಲ. ಕಾಂಗ್ರೆಸ್‍ನವರು ಭಗವದ್ಗೀತೆಯನ್ನೂ ವಿರೋಧ ಮಾಡುತ್ತಾರೆ. ಒಂದು ಸಮಾಜದ ತುಷ್ಟೀಕರಣ ಮಾಡುವುದಕ್ಕಾಗಿ ಏನು ಬೇಕಾಗಿದೆಯೋ ಅದನ್ನೆಲ್ಲ ಮಾಡಿದ್ದಾರೆ. ತ್ರಿವಳಿ ತಲಾಕ್ ವಿಷಯದಲ್ಲಿ ಸುಪ್ರೀಂ ಕೋರ್ಟ್‍ನ ಆದೇಶವನ್ನೂ ತಿರುವು ಮುರುವು ಮಾಡಿದ್ದಾರೆ ಎಂದು ಆರೋಪಿಸಿದರು.
ಯೋಗ ಮಾಡಿದಾಗಲೂ ಕಾಂಗ್ರೆಸ್‍ನವರು ವಿರೋಧ ವ್ಯಕ್ಯಪಡಿಸಿದ್ದರು. ಆದರೆ, ಇಡೀ ಜಗತ್ತು ಯೋಗ ಒಪ್ಪಿಕೊಂಡ ಮೇಲೆ ಕಾಂಗ್ರೆಸ್‍ನವರು ಯೋಗ ಒಪ್ಪಿಕೊಳ್ಳುತ್ತಿದ್ದಾರೆ ಎಂದ ಅವರು, ಭಾರತೀಯ ಪರಂಪರೆಯನ್ನು ವಿರೋಧ ಮಾಡುವುದು ಕಾಂಗ್ರೆಸ್‍ನವರ ಕೆಲಸ. ಅವರು ಯಾವ ದೇವರನ್ನು ಆರಾಧನೆ ಮಾಡುತ್ತಾರೋ ಆ ದೇವರು ಅವರಿಗೆ ಸಮೃದ್ಧಿ ನೀಡಲಿ ಎಂದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – BJPಗೆ ಗುಡ್ ಬೈ ಹೇಳಿದ ಹಿರಿಯ ನಾಯಕ
ಕಾಂಗ್ರೆಸ್‍ನವರು ಹಣ, ಅಧಿಕಾರದ ಧ್ಯಾನ ಮಾಡುತ್ತಾರೆ ಮಾಡಲಿ. ಆದರೆ, ಶಾಲಾ ಮಕ್ಕಳಲ್ಲಿ ಏಕಾಗೃತೆ ಬರಲಿ ಎಂಬ ಕಾರಣಕ್ಕೆ ಧ್ಯಾನ ಮಾಡಿಸುವ ನಿಯಮ ತಂದಿರಬಹುದು. ಆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಕಾಂಗ್ರೆಸ್‍ನವರು ಬೇಜವಾಬ್ದಾರಿತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಂದು ಲಕ್ಷ ಸರ್ಕಾರಿ ಉದ್ಯೋಗ, ಉಚಿತ ವಿದ್ಯುತ್ – ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ