ಹುಬ್ಬಳ್ಳಿ: ಅಜಾನ್ ವಿರುದ್ಧ ನಾಳೆ ಭಜನೆ ಮತ್ತು ಸುಪ್ರಭಾತ ಅಭಿಯಾನದ ಹಿನ್ನೆಲೆಯಲ್ಲಿ ಸರ್ಕಾರ ಸುಮ್ಮನಿದೆ ಎಂದು ಭಾವಿಸಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಶರೇವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಗಡುವು ಕೊಟ್ಟಿದ್ದು ಗೊತ್ತಿಲ್ಲ. ಕಾನೂನು ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು. ಇದನ್ನೂ ಓದಿ: ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್
Advertisement
Advertisement
ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಕಿಂಗ್‍ಪಿನ್ ಹೆಸರು ಬಹಿರಂಗ ಪಡಿಸಿದರೆ ಸರ್ಕಾರ ಉರುಳುತ್ತದೆ ಎನ್ನುವ ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವನ್ನು ಉರುಳಿಸೋದು, ಬಿಡುವುದು ಅವರ ಜವಾಬ್ದಾರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಅಕ್ರಮ ನೇಮಕಾತಿಯ ಬಗ್ಗೆ ಯಾರ ಹತ್ತಿರ ಮಾಹಿತಿ ಇದೆ ಅದನ್ನು ಅವರು ಕೊಡಲಿ. ಸಿಐಡಿ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷನನ್ನೇ ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಅಳವಡಿಸುವುದು ಕಡ್ಡಾಯ: ಸುಧಾಕರ್