ಹುಬ್ಬಳ್ಳಿ: ಧಮ್ಕಿ ಹಾಕುವುದು ಡಿ.ಕೆ. ಶಿವಕುಮಾರ್ ಹಾಗೂ ಹೊಡೆಯುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಂಸ್ಕೃತಿಯಾಗಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶ್ರೀಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಕಾಂಗ್ರೆಸ್ (Congress) ನಾಯಕರ ಆರೋಪಕ್ಕೆ ನಗರದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನವರ ಆರೋಪ ಬಾಲಿಶವಾಗಿದೆ. ಸಾಂಸ್ಕೃತಿಕ, ಭಾರತೀಯ ಹಿಂದೂ ಸಂಸ್ಕೃತಿಯನ್ನು ಬಿಜೆಪಿ ಪಾಲಿಸಿಕೊಂಡು ಬಂದಿದೆ ಎಂದರು.
ಪಂಚಮಸಾಲಿ ಸಮುದಾಯದ ಹೋರಾಟ ಮುಂದುವರಿಸುವ ಯೋಚನೆ ಕಾಂಗ್ರೆನವರದ್ದಾಗಿತ್ತು. ಈ ಬಿಜೆಪಿ ಸರ್ಕಾರ ಎಲ್ಲ ಮೀಸಲಾತಿ ಸಮಸ್ಯೆ ಪರಿಹರಿಸಿ ತಾರ್ಕಿಕ ಅಂತ್ಯ ಹಾಡಿದೆ. ಡಿ.ಕೆ.ಶಿವಕುಮಾರ್ (DK Shivakumar) ಸಂಸ್ಕೃತಿ ಗೂಂಡಾ ಸಂಸ್ಕೃತಿಯಾಗಿರುವುದು ಜಗತ್ತಿಗೆ ಗೊತ್ತಿದೆ ಎಂದು ಕುಟುಕಿದರು. ಇದನ್ನೂ ಓದಿ: ಟಿಪ್ಪುವನ್ನು ಕೊಂದ ಕ್ರೆಡಿಟ್ ಕೊಡವರಿಗೆ ಹೋಗ್ಬೇಕು: ಎನ್.ಯು ನಾಚಪ್ಪ
ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪ ಶ್ರೀಗಳಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದ ಅವರು, ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ನೀಡಿರುವುದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸಹಮತವಿಲ್ಲ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಪಂಚಮ ಸಾಲಿ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಅವರು ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಮಾತ್ರ ಮಾಡುತ್ತಿದ್ದರು. ಇದರ ಅರ್ಥ ಅವರ ಬದ್ಧತೆ ಇರಲಿಲ್ಲ. ಸದಾಶಿವ ಆಯೋಗ ಒಪ್ಪವಂತಹ, ಸಮಸ್ಯೆ ಬಗೆಹರಿಸುವ ತಾಕತ್ತು ಇರಲಿಲ್ಲ. ತಮ್ಮ ಕಾಲದಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ನೀಡಿದ್ದರು. ಧರ್ಮದ ಆಧಾರ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಣಯವಾಗಿದೆ. ಬಿಜೆಪಿ ನಿರ್ಣಾಯಕ ಸರ್ಕಾರವಾಗಿದೆ. ನಮ್ಮ ಪಕ್ಷದ ಬದ್ಧತೆ ಸ್ಪಷ್ಟವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ (Siddaramaiah) ಅಧಿಕಾರಕ್ಕೆ ಬಂದರೆ ಮೀಸಲಾತಿ ಸ್ಥಗಿತ ಮಾಡುತ್ತೇನೆ ಎಂದು ಹೇಳುತ್ತಿದ್ದು, ಬಂದರೆ ಅದರ ಅರ್ಥ ಅವರು ಅಧಿಕಾರಕ್ಕೆ ಬರವುದಿಲ್ಲ ಎಂದು ಗ್ಯಾರಂಟಿಯಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಇಲ್ಲಿವರೆಗೆ ಕ್ಷೇತ್ರದ ಆಯ್ಕೆ ಮಾಡಲು ಆಗಿಲ್ಲ. ಕಳೆದ ಬಾರಿ ಬಾದಾಮಿಯಲ್ಲಿ 1500 ವೋಟ್ ಬಿಳದಿದ್ದರೆ ಅವರು ಮಾಜಿಮುಖ್ಯಮಂತ್ರಿ ಅಲ್ಲ ಮಾಜಿ ಶಾಸಕರಾಗಿರುತ್ತಿದ್ದರು. 11 ಬಜೆಟ್ ಮಂಡಿಸಿದವರಿಗೆ ಒಂದು ಕ್ಷೇತ್ರವಿಲ್ಲ. ಗೆಲ್ಲವ ವಿಶ್ವಾಸ ಅವರಿಗೆ ಇಲ್ಲ ಎಂದರು.
ಸಿದ್ದರಾಮಯ್ಯ ಅವರು ಪರಮೇಶ್ವರ್ (Parameshwar), ಮುನಿಯಪ್ಪನವರಿಗೆ ಹಾಗೂ ಖರ್ಗೆ ಅವರಿಗೆ ಸತತವಾಗಿ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಹಳೆ ಪರಂಪರೆ ಇದ್ದು, ದಲಿತ ಹೆಸರು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.