ಹುಬ್ಬಳ್ಳಿ: ಮಾಜಿ ಪ್ರಧಾನಿ ನೆಹರು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಎಂದಿಗೂ ಹೋಲಿಕೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವೈಚಾರಿಕತೆ ಇರುವ ನಾಯಕರಾಗಿದ್ದಾರೆ. ಅವರು ಸಾಕಷ್ಟು ಬಜೆಟ್ ಮಂಡಿಸಿದ್ದಾರೆ. ಆದರೆ ಅವರ ವೈಚಾರಿಕತೆ ಅವರಿಗರಲಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಈ ರೀತಿ ಮಾತನಾಡುವುದು ಸರಿಯಲ್ಲ. ಈ ದೇಶದಲ್ಲಿ ಹೆಡ್ಗೆವಾರ್ ಆರ್‌ಎಸ್‍ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕರಾಗಿದ್ದಾರೆ. ಮುಸ್ಲಿಂ ತುಷ್ಟೀಕರಣಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡ್ತಿದ್ದಾರೆಂದ ಅವರು, ಆರ್‌ಎಸ್‍ಎಸ್‍ನವರು ಮೂಲ ನಮ್ಮ ದೇಶದವರಲ್ಲ ಎನ್ನುವ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದರು.
ಹೆಡ್ಗೆವಾರ್ ಅವರು ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಅವರು ತಿಳಿದುಕೊಂಡು ಮಾತನಾಡಬೇಕು. ಅವರು ಸೇವಾದಳದಲ್ಲಿದ್ದರು. ಅವರೊಬ್ಬರು ಹುಟ್ಟು ದೇಶಭಕ್ತರು. ಸಿದ್ದರಾಮಯ್ಯ ಅವರಿಗೆ ಆರ್‌ಎಸ್‍ಎಸ್ ಬಗ್ಗೆ ಗೊತ್ತಿಲ್ಲ ಅಂದರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ದರೂ ನಾಟಕ ಮಾಡುತ್ತಿದ್ದಾರೆ. ಪಠ್ಯಪುಸ್ತಕದಲ್ಲಿ ಕಮ್ಯುನಿಷ್ಠರ ವಿಚಾರಧಾರೆ ಹಾಕಿದರೂ, ಸಿದ್ದರಾಮಯ್ಯ ತಾವೊಬ್ಬರೇ ತಜ್ಞರು ಅನ್ಕೊಂಡಿದ್ದಾರೆ. ಅದನ್ನು ಬಿಟ್ಟು ಹೊರಗಡೆ ಬರಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತದಲ್ಲೇ ಯುದ್ಧ ನೌಕೆಗಳು ತಯಾರಾಗೋ ಮೂಲಕ ಪ್ರಧಾನಿಯವರ ಆತ್ಮನಿರ್ಭರ್ ಅಭಿಯಾನಕ್ಕೆ ಬಲ ಬಂದಿದೆ: ರಾಜನಾಥ್ ಸಿಂಗ್
ಕೆಲ ಗದ್ಯವನ್ನು ಇವರೇ ತೆಗೆದು, ಇವರೇ ಡ್ರಾಮ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಯುಪಿನಲ್ಲಿ 388 ಕ್ಷೇತ್ರದ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜನ ನಿಮ್ಮನ್ನು ಮೂಲೆಗೆ ತಳ್ಳಿದ್ದಾರೆಂದು ಟೀಕಿಸಿದರು. ಇದನ್ನೂ ಓದಿ: ಸೊಳ್ಳೆ ಉತ್ಪಾದನೆಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ – 50 ಸಾವಿರ ರೂ. ದಂಡ ವಿಧಿಸಿ: ಡೆಲ್ಲಿ ಹೈಕೋರ್ಟ್