– ಕಾಂಗ್ರೆಸ್‌ನವ್ರು ರಾಜೀವ್ ಗಾಂಧಿ ಚಿತಾಭಸ್ಮ ತೋರಿಸಿ ಮತ ಪಡೆದಿದ್ದು ನೆನಪಿದ್ಯಾ?
– ನಾವು ಗೆದ್ರೆ ಇವಿಎಂ, ಆಯೋಗ ಸರಿಯಿಲ್ಲ ಅಂತಾರೆ ಅಂತ ಜೋಶಿ ಕಿಡಿ
ನವದೆಹಲಿ: ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ಉತ್ತರ ಕೊಡಲು ಇನ್ಯಾರನ್ನೋ ಕಳುಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.
ಮತಗಳ್ಳತನದ ಆರೋಪ ಮಾಡಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ (Rahul Gandhi) ಕುರಿತು ನವದೆಹಲಿಯಲ್ಲಿ (New Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಗುರುವಾರ ಮತಗಳ್ಳತನದ ಆರೋಪ ಮಾಡಿ, ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಯಾಕೆ ಪ್ರತಿಭಟನೆ ನಡೆಸಿದ್ದಾರೆ ಎಂದು ಕೇಳಿದ್ರೆ ಅವರಿಗೆ ಗೊತ್ತಿರಲ್ಲ. ರಾಜ್ಯ ಚುನಾವಣಾ ಆಯೋಗ ಬಂದು ಸ್ಪಷ್ಟನೆ ನೀಡಿ ಎಂದು ಕೇಳಿದೆ. ಫ್ರೀಡಂ ಪಾರ್ಕ್ನಿಂದ ಆಯೋಗದ ಕಚೇರಿಗೆ ನಡೆದು ಹೋದರೆ 5 ನಿಮಿಷ. ಆದರೆ ಆಯೋಗದ ಕಚೇರಿಗೆ ಹೋಗಿಲ್ಲ. ಬೇರೆ ಯಾರನ್ನೊ ಕಳುಹಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಿಪ್ಪಲ್ಲಿ ಕಾಫಿ ಕೊಡೋ ಕಾಲದಲ್ಲಿ ಸಹಪಂಕ್ತಿ ಭೋಜನ ಎತ್ತಿಹಿಡಿದಿದ್ದು ವಿರೇಂದ್ರ ಹೆಗ್ಗಡೆಯವ್ರು: ಸಿ.ಟಿ ರವಿ
ಆರೋಪ ಮಾಡಿ ಇನ್ಯಾರನ್ನೋ ಉತ್ತರ ಕೊಡಿಸಲು ಕಳಿಸಿದರೆ, ನಿಮ್ಮ ಸುಳ್ಳು ಆರೋಪಕ್ಕೆ ಆಧಾರ ಇಲ್ಲ ಅಂತ ಅರ್ಥ. ಎಲ್ಲ ರಾಜ್ಯಗಳ ಚುನಾವಣಾ ಆಯೋಗ ಅಫಿಡವಿಟ್ ಕೇಳಿವೆ. ಈವರೆಗೂ ಅಫಿಡವಿಟ್ ಫೈಲ್ ಮಾಡಿಲ್ಲ. ರಾಹುಲ್ ಸ್ಥಿತಿ ಹೇಗೆಂದರೆ ಸರ್ಕಾರದಲ್ಲಿ ಇದ್ದಾಗ ಲೂಟಿಯ ಅಂಗಡಿ. ಚುನಾವಣೆಯಲ್ಲಿ ಮಾತ್ರ ಅವರಿಗೆ ಪ್ರೀತಿಯ ಅಂಗಡಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ
ರಾಹುಲ್ ಗಾಂಧಿ ಅವರನ್ನು ಅಧಿಕಾರದಿಂದ ಜನರು ಹಾಕಿದ ಮೇಲೆ ಸುಳ್ಳಿನ ಅಂಗಡಿ ತೆಗೆಯುತ್ತಾರೆ. ಇವರ ಅಜ್ಜಿ ತುರ್ತು ಪರಿಸ್ಥಿತಿ ಹೇರಿದವರು. ಇವರು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಫೇಲ್ ವಿಚಾರದಲ್ಲೂ ರಾಹುಲ್ ಸುಳ್ಳು ಹೇಳಿದ್ದರು
ಹಿಂದೆ ಮಹಾರಾಷ್ಟ್ರ ಚುನಾವಣೆಯಲ್ಲಿ 70 ಲಕ್ಷ ಮತದಾರರ ಸೇರ್ಪಡೆಯಾಗಿವೆ ಎಂದು ಹೇಳಿದ್ದರು. ಅದಾದ ಬಳಿಕ ಆಯೋಗ 40 ಲಕ್ಷ ಮತದಾರರ ಸೇರ್ಪಡೆಯಾಗಿದೆ ಎಂದು ಸ್ಪಷ್ಟನೆ ನೀಡಿತು. ಗುರುವಾರ ಸುದ್ದಿಗೋಷ್ಠಿಯಲ್ಲಿ ಒಂದು ಕೋಟಿ ಮತದಾರರು ಹೆಚ್ಚಾಗಿದ್ದಾರೆ ಎಂದು ಹೇಳಿದ್ದಾರೆ. ರಫೇಲ್ ವಿಚಾರದಲ್ಲೂ ಹೀಗೆ ಸುಳ್ಳು ಸಂಖ್ಯೆ ಹೇಳಿದ್ದರು. 2004, 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲೂ ಮಹಾರಾಷ್ಟ್ರದಲ್ಲಿ ಮತ ಪ್ರಮಾಣ ಹೆಚ್ಚಾಗಿದೆ. ಎನ್‌ಡಿಎ ಕಾಲದಲ್ಲೂ ಇದು ಹೆಚ್ಚಾಗಿದೆ. ಈ ಹಿಂದೆ ಮಹಾರಾಷ್ಟ್ರದಲ್ಲೂ ಇವರೇ ಗೆದ್ದಿದ್ದರಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಮತದಾರರ ಪಟ್ಟಿ ನೀಡಿದಾಗ ಯಾಕೆ ಪ್ರಶ್ನಿಸಿಲ್ಲ?
ಚುನಾವಣೆಗೂ ಮುನ್ನ ಮತದಾರರ ಚೀಟಿ ಕರಡು ಪಟ್ಟಿ ನೀಡಲಾಗುತ್ತದೆ. ರಾಹುಲ್ ಗಾಂಧಿ ಪ್ರಕಾರ ಕಾಂಗ್ರೆಸ್ ಬಿಎಲ್‌ಎಗಳು ಕತ್ತೆ ಕಾಯುತ್ತಿದ್ದಾರ? ಯಾಕೆ ಅಂದೇ ತಕಾರರು ಎತ್ತಲಿಲ್ಲ. 2024ರಲ್ಲಿ ಅಕ್ರಮ ನಡೆದಿದ್ದರೆ ನಿಮ್ಮದೇ ಸರ್ಕಾರದ ಅಧಿಕಾರಿಗಳಿಂದ ನಡೆದಿರಬಹುದು. ಮತದಾರರ ಪಟ್ಟಿ ನೀಡಿದಾಗ ನೀವು ಯಾಕೆ ಈ ಬಗ್ಗೆ ಮಾತನಾಡಲಿಲ್ಲ. ಚುನಾವಣೆ ಸೋತ ಮೇಲೆ ಯಾಕೆ ಕೋರ್ಟ್ಗೆ ಅರ್ಜಿ ಸಲ್ಲಿಸಲಿಲ್ಲ. ಕಾಂಗ್ರೆಸ್ ಯಾವುದೇ ದಾಖಲೆಗಳನ್ನು ಕೇಳಿಲ್ಲ. ರಾಹುಲ್ ಗಾಂಧಿ ರೀತಿ ಕಾಂಗ್ರೆಸ್ ಅಭ್ಯರ್ಥಿ ಬೇರೆ ಲೋಕ ಅಥವಾ ದೇಶದಲ್ಲಿದ್ದರಾ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ
ನಾವು ಗೆದ್ರೆ ಇವಿಎಂ, ಆಯೋಗ ಸರಿಯಿಲ್ಲ ಅಂತಾರೆ
ಮಹಾದೇವಪುರದಲ್ಲಿ 25% ಮತ ಪ್ರಮಾಣ ಹೆಚ್ಚಾಗಿದೆ ಎನ್ನುವ ಆರೋಪ ಇದೆ. ದುಲೈ ಲೋಕಸಭೆ ಕ್ಷೇತ್ರದಲ್ಲಿ ಐದು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂತು. ಮಾಲೆಂಗಾವ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದ ಮತ ಬಂತು. ಹಾಗಿದ್ರೆ ನಾವು ಇದಕ್ಕೆ ಏನು ಹೇಳಬೇಕು. ಮಾಲೆಂಗಾವ್‌ನಲ್ಲಿ 43% ಮತದಾರರ ಪ್ರಮಾಣ ಹೆಚ್ಚಾಗಿದೆ. 2024ರಲ್ಲಿ ರಾಜ್ಯದಲ್ಲಿ ಬಿಜೆಪಿ ಸೋತಿತು. ಕಾಂಗ್ರೆಸ್ ಗೆದ್ದಾಗ ಇವಿಎಂ, ಆಯೋಗ ಎಲ್ಲ ಸರಿ ಇತ್ತು. ಲೋಕಸಭೆಯಲ್ಲಿ ನಾವು ಗೆದ್ದೆವು. ಆಗ ಆಯೋಗ ಸರಿ ಇಲ್ಲ, ಇವಿಎಂ ಸರಿ ಇಲ್ಲ. ಕುಣಿಯಲು ಬಾರದಿದ್ದರೆ ನೆಲೆ ಡೊಂಕು ಅಂದ್ರಂತೆ. ರಾಹುಲ್ ಗಾಂಧಿ ಮೂರ್ಖತನಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಲೇವಡಿ ಮಾಡಿದ್ದಾರೆ.
ರಾಜೀವ್ ಗಾಂಧಿ ಚಿತಾಭಸ್ಮ ತೋರಿಸಿ ಮತ ಪಡೆದಿದ್ರು
ಈ ಹಿಂದೆ ಕಾಂಗ್ರೇಸ್ ಅವಧಿಯಲ್ಲಿ ಚುನಾವಣಾ ಆಯೋಗದ ಕಮಿಷನರ್‌ಗಳನ್ನು ರಾಜ್ಯಸಭೆಗೆ ನೇಮಕ ಮಾಡಿ, ಮಂತ್ರಿ ಮಾಡಿದ್ದೀರಿ. ರಾಜೀವ್ ಗಾಂಧಿ ಹತ್ಯೆಯಾದಾಗ ದೇಶದಲ್ಲಿ ಚುನಾವಣೆ ನಿಲ್ಲಿಸಿದ್ದರು. ಚಿತಾಭಸ್ಮ ತೋರಿಸಿ ಮತ ಪಡೆದುಕೊಂಡರು. ಆಯೋಗವನ್ನು ಹೀಗೆ ಬಳಸಿಕೊಂಡವರು ನಮಗೆ ಪಾಠ ಹೇಳುತ್ತಿದ್ದಾರೆ. ಸಿಸಿಟಿವಿ ದೃಶ್ಯ ನೀಡಿಲ್ಲ ಎಂದು ಆರೋಪ ಇದೆ. ಸಿಸಿಟಿವಿ ಸ್ಟೋರೆಜ್ 45 ದಿನಗಳಿಗೆ ಮಾತ್ರ ಇರುತ್ತದೆ. 45 ದಿನಗಳ ಬಳಿಕ ಕೇಳಿದರೆ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಮನವಿ ಮೇರೆಗೆ ಬಿಹಾರದಲ್ಲಿ ಎಸ್‌ಐಆರ್ ಮಾಡಿದ್ದೆ. ಆದರೆ ಈಗ ಹೀಗೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಸತ್ಯ ಸಂಗತಿ ಜನರ ಮುಂದೆ ಬರಬೇಕು ಎಂದಿದ್ದಾರೆ.