ಹುಬ್ಬಳ್ಳಿ: ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ರಾಹುಲ್ ಗಾಂಧಿ (Rahul Gandhi) ಮತ್ತು ಸಿದ್ದರಾಮಯ್ಯ (Siddaramaiah) ಆರೋಗ್ಯ ಸುಧಾರಿಸಿದೆ. ಕಾಂಗ್ರೆಸ್ ಅವರನ್ನ ನಿಷ್ಪಪ್ರಯೋಜಕ, ಅಪ್ರಯೋಜಕ, ಬುದ್ಧಿ ಇಲ್ಲದವರು ಅಂತ ನಾವು ಹೇಳುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಲೇವಡಿ ಮಾಡಿದ್ದಾರೆ.
ನನ್ನ ವಿರುದ್ಧ ಅಪಪ್ರಚಾರಕ್ಕೆ ಕೋಟಿ, ಕೋಟಿ ಖರ್ಚು ಮಾಡುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ರಾಹುಲ್ ಗಾಂಧಿ ವಿರುದ್ಧ ನಾವ್ಯಾಕೆ ಖರ್ಚು ಮಾಡಬೇಕು. ಇದು ಜನರಿಗೂ ಗೊತ್ತಾಗಿದೆ ಅವರ ಪಕ್ಷದವರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಮತ ಸೆಳೆಯಲು JDS ಮೇಲೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್
ಕಾಂಗ್ರೆಸ್ (Congress) ವಿರೋಧ ಪಕ್ಷದಲ್ಲಿ ಕುರುವುದಕ್ಕೆ ಅರ್ಹತೆ ಇಲ್ಲ. ಒಂದು ಕಾಲದಲ್ಲಿ 28 ರಾಜ್ಯಗಳಲ್ಲಿ 26, 27 ರಾಜ್ಯಗಳಲ್ಲಿ ಅವರದೇ ಅಧಿಕಾರವಿತ್ತು. ಆದರೆ ಈಗ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇದಲ್ಲದೆ ರಾಜಸ್ಥಾನದಲ್ಲೂ ಇದೀಗ ಅಲುಗಾಡುತ್ತಿದೆ. ಸ್ಪರ್ಧೆ ಮಾಡುವ ಎಲ್ಲ ಚುನಾವಣೆಯಲ್ಲಿ ಸೋಲುತ್ತಿದಾರೆ. ಉತ್ತರ ಪ್ರದೇಶದಲ್ಲಿ ಒಂದು ಸೀಟ್ ಗೆದ್ದಿಲ್ಲ. 398 ಸೀಟ್‍ನಲ್ಲಿ 388 ಸೀಟ್‍ನಲ್ಲಿ ಡಿಪಾಸೀಟ್ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕ ಭನ್ವರ್ ಲಾಲ್ ಶರ್ಮಾ ನಿಧನ