ನವದೆಹಲಿ: ನೂತನ ಎಲೆಕ್ಷನ್ ಬಿಲ್ ಅನ್ನೇ ನೆಪ ಮಾಡಿಕೊಂಡು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸಂಸತ್ ಅಧಿವೇಶನದಲ್ಲಿ ಗಲಾಟೆ ಮಾಡಿದವು, ಅವರಿಗೆ ಸ್ಪೀಕರ್ ಚರ್ಚೆಗೆ ಅವಕಾಶ ನೀಡಿದರೂ ಚರ್ಚೆ ಮಾಡದೇ ಓಡಿ ಹೋದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
Advertisement
ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಅನಿರ್ದಿಷ್ಟವಾಧಿಗೆ ಮುಂದೂಡಿಕೆಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲೂ ವಿಪಕ್ಷಗಳು ಅತ್ಯಂತ ಕೆಟ್ಟದಾಗಿ ವರ್ತಿಸಿವೆ, ರೂಲ್ ಬುಕ್ ಹರಿಯುವ ಮೂಲಕ ಸಂಸತ್‍ಗೆ ಅವಮಾನ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: MES ಗಲಭೆಗೆ ಕಾಂಗ್ರೆಸ್, ಬಿಜೆಪಿ ಕೈವಾಡ ಇಲ್ಲ, ಇದು ಪುಂಡ ಪೋಕರಿಗಳ ಕೆಲಸ: ಪ್ರಹ್ಲಾದ್ ಜೋಶಿ
Advertisement
Advertisement
ವಿಪಕ್ಷಗಳ ಗಲಾಟೆಯ ನಡುವೆಯೂ 18 ದಿನಗಳ ಕಾಲ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲಾಯಿತು, ಈ ಬಾರಿಯ ಅಧಿವೇಶನದಲ್ಲಿ 13 ಬಿಲ್ ಮಂಡನೆ ಮಾಡಲಾಗಿತ್ತು ಈ ಪೈಕಿ ಎರಡು ಸದನದಲ್ಲಿ 11 ಬಿಲ್‍ಗಳು ಪಾಸಾಗಿದೆ. ಎಲೆಕ್ಷನ್ ಬಿಲ್ ಸೇರಿದಂತೆ ಹಲವು ಬಿಲ್ ಮಂಡನೆಯಾಗಿದ್ದು ವ್ಯವಸ್ಥೆಯನ್ನು ಸುಧಾರಿಸಲು ಇವು ಸಹಕಾರಿಯಾಗಲಿದೆ ಎಂದರು.ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ
Advertisement
ಇನ್ನು ಕ್ರಿಪ್ಟೊ ಕರೆನ್ಸಿ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕ್ರಿಪ್ಟೊ ಕರೆನ್ಸಿ ನಿಷೇಧ ಮಾಡುವ ಬಿಲ್ ಮತ್ತಷ್ಟು ಪರಿಶೀಲನೆಗೆ ಒಳಪಟ್ಟಿದೆ ಇಲಾಖೆಯು ಆತಂರಿಕವಾಗಿ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆರಂಭದಲ್ಲಿ ಇಲಾಖೆ ಬಿಲ್ ಮಂಡಿಸುವ ಮಾಹಿತಿ ನೀಡಿತ್ತು ಹೀಗಾಗಿ ಇದನ್ನು ಅಧಿಕೃತ ಬಿಲ್ ಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು ಆದರೆ ಇದನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಿರುವ ಹಿನ್ನಲೆ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಬಹುದು ಎಂದರು. ಇದನ್ನೂ ಓದಿ: 2023ರ ವರೆಗೂ ಬೊಮ್ಮಾಯಿ ಸಿಎಂ ಆಗಿ ಮುಂದುವರಿಯಲಿದ್ದಾರೆ: ಪ್ರಹ್ಲಾದ್ ಜೋಶಿ
ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಿಸುವ ಬಿಲ್ ಸ್ಟ್ಯಾಂಡಿಂಗ್ ಕಮಿಟಿಗೆ ಕಳುಹಿಸಿದ್ದೆವೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಪುರುಷರಷ್ಟೆ ಮಹಿಳೆಯರಿಗೂ ಸಮಾನ ಅವಕಾಶ ಮಹಿಳೆಯರಿಗೂ ನೀಡಬೇಕಿದ್ದು ಈ ಬಿಲ್ ಶೈಕ್ಷಣಿಕವಾಗಿ ಮಹಿಳೆಯರಿಗೆ ಸಹಕಾರಿಯಾಗಲಿದೆ. ಮಹಿಳೆಯರು ಹೆಚ್ಚು ವಿದ್ಯಾವಂತರಾಗಲು ಅವಕಾಶ ನೀಡಲಿದೆ. ಈ ಹಿಂದೆ ಮಹಿಳೆಯರ ಮದುವೆ ವಯಸ್ಸು 10 ವರ್ಷವಿತ್ತು, ಕಾಲಕ್ಕೆ ತಕ್ಕಂತೆ ಬದಲಾಗಿ ಇಂದು 18 ವರ್ಷಕ್ಕೆ ಬಂದು ತಲುಪಿದೆ ಭವಿಷ್ಯದ ದೃಷ್ಟಿಯಿಂದ ಇದು 21 ವರ್ಷಕ್ಕೆ ಏರಿಸುವ ಸೂಕ್ತ ಎಂದು ಜೋಶಿ ಹೇಳಿದರು.