ಹುಬ್ಬಳ್ಳಿ: ಜಮೀರ್ ಹೇಳಿಕೆ ಚಿಲ್ಲರೆ ಹೇಳಿಕೆ, ಅತ್ಯಂತ ಕೀಳು ಮಟ್ಟದ ಹೇಳಿಕೆ ಎಂದು ಶಾಸಕ ಜಮೀರ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಜಮೀರ್ ಒಬ್ಬ ಶಾಸಕನಾಗಿ ಇಂತಹ ಕೀಳು ಮಟ್ಟದ ಹೇಳಿಕೆ ನೀಡಬಾರದು, ಸದನದಲ್ಲಿಂದು ಹಿಜಾಬ್, ನ್ಯಾಯಲಯ ಮಧ್ಯಂತರ ಆದೇಶ ಮತ್ತು ಜಮೀರ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.
ಕಾಂಗ್ರೆಸ್‍ನ ತುಷ್ಠಿಕರಣ ರಾಜಕೀಯದಿಂದ ಪಾಕಿಸ್ತಾನ ನಿರ್ಮಾಣವಾಗಿದೆ. ಈಗ ಮತ್ತೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಮುಸ್ಲಿಂರಿಗೆ ಸಲಹೆ ನೀಡುತ್ತೇನೆ ಕಾಂಗ್ರೆಸ್ ನಿಮ್ಮ ಮಕ್ಕಳನ್ನು ಬಳಿಸಿಕೊಳ್ಳುತ್ತಿದೆ. ಹಿಂದಿನಿಂದಲೂ ಇದೇ ರಾಜಕಾರಣ ಮಾಡಿದೆ. ಇದಕ್ಕೆ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ಎಲ್ಲಾ ವರ್ಗಕ್ಕೂ ವಸ್ತ್ರ ಸಂಹಿತೆ ಇರುತ್ತದೆ. ಶಿಕ್ಷಣ ಇಲಾಖೆ,ಪೊಲೀಸ್, ಮಿಲ್ಟ್ರಿ, ವೈದ್ಯರು ಎಲ್ಲರಿಗೂ ಇರುತ್ತದೆ. ಅದನ್ನು ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ, ಚೀನಾ ಏಜೆಂಟ್ ಆಗಿದ್ದಾರೆ ತೆಲಂಗಾಣ ಸಿಎಂ: ಬಿಜೆಪಿ
ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಯುವರಾಣಿ ಒಂದು ಶಬ್ಧ ಬಳಕೆ ಮಾಡಿದ್ದಾರೆ. ಅವರು ಮಾಡಿದ ಶಬ್ಧದ ಬಳಿಕೆಯನ್ನು ನಾನು ಬಳಕೆ ಮಾಡಲ್ಲ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನೂ ಹಿಜಾಬ್ ವಿಚಾರದಲ್ಲಿ ಶಾಲೆ, ಕಾಲೇಜುಗಳಲ್ಲಿ ಯಾರೇ ಪ್ರತಿಭಟನೆ ಮಾಡಿದರು. ಅವರನ್ನು ಬಂಧನ ಮಾಡಬೇಕೆಂದು ಒತ್ತಾಯಿಸಿದ್ದಾರೆ.