-ಜಗದೀಶ್ ಶೆಟ್ಟರ್, ಬಿಎಸ್‍ವೈರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ
ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಹೋಗುವುದು ತಪ್ಪಲ್ಲ. ಅವರಿಗೆ ಇನ್ನೂ 18 ತಿಂಗಳ ಅಧಿಕಾರ ಇದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಹೋಗುವುದು ಸಹಜ. ಹೀಗಾಗಿಯೇ ಕೇಂದ್ರ ಗೃಜ ಸಚಿವ ಅಮಿತ್ ಶಾ, ಶೋಚ್ ಸಮಜಕರ್ ತೀರ್ಮಾನ ಕೈಗೊಂಡಿದ್ದಾರೆ. ಅಮಿತ್ ಶಾ ಹೇಳಿದ ಮೇಲೆ ಅದು ಚರ್ಚೆಯ ವಿಷಯ ಅಲ್ಲವೆಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿಂದು ಪಾಲಿಕೆ ಚುನಾವಣೆಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿ ಮಾತನಾಡಿದ ಅವರು, ಹೈಕಮಾಂಡ್ ಬಹಳಷ್ಟು ಚರ್ಚಿಸಿ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಬೊಮ್ಮಾಯಿಯವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿಯವರಿಂದ ಉತ್ತಮ ಆಡಳಿತ ನಡೆಯುತ್ತಿದೆ. ಹೀಗಾಗಿ ಅವರ ನೇತೃತ್ವದಲ್ಲಿ ಚುನಾವಣೆ ಹೋಗುವುದು ತಪ್ಪಲ್ಲವೆಂದು ಅಮಿತ್ ಶಾ ತೀರ್ಮಾನವನ್ನು ಸರ್ಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಸಾರ್ವಜನಿಕ ಗಣೇಶೋತ್ಸವ ಕುರಿತು ಸಿಎಂ ನಿರ್ಧಾರ: ಬೈರತಿ ಬಸವರಾಜು
Advertisement
Advertisement
ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಹಾಗೂ ಬಿ.ಎಸ್ ಯಡಿಯೂರಪ್ಪ ಕಡೆಗಣಿಸುತ್ತಿಲ್ಲ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬಹಳಷ್ಟು ಜನರು ಬಿಎಸ್‍ವೈರನ್ನು ಅಧಿಕಾರದಿಂದ ತಗೆದರು ಅಂತಿದ್ದಾರೆ. ಆದರೆ ಯಡಿಯೂರಪ್ಪ ಸ್ವಪ್ರೇರಣೆಯಿಂದ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಅವರೇ ಹೇಳಿದಂತೆ 2 ವರ್ಷ ಅಧಿಕಾರ ನಡೆಸಿ ಬೇರೆಯವರಿಗೆ ಅಧಿಕಾರ ನೀಡಿದ್ದಾರೆ. ಯಾರಿಗಾದರೂ ಕ್ರೇಡಿಟ್ ಕೊಡುವುದಿದ್ದರೆ, ಅದು ಯಡಿಯೂರಪ್ಪರಿಗೆ ಸಿಗಬೇಕು ಎಂದು ಬಿಎಸ್‍ವೈ ನಡೆಯನು ಹಾಡಿ ಹೊಗಳಿದ್ದಾರೆ.
Advertisement
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸುತ್ತೇವೆ. 55-60 ಸ್ಥಾನಗಳಲ್ಲಿ ಗೆಲುವು ನಿಶ್ಚಿತವಾಗಿದೆ. ಕೆಲವೊಂದು ಕಡೆ ಮತದಾರರ ಹೆಸರು ಶಿಫ್ಟಿಂಗ್ ಆಗಿದೆ. ಜಿಲ್ಲಾಡಳಿತ ಈ ಬಗ್ಗೆ ಮೊದಲು ಗಮನ ಹರಿಸಬೇಕಾಗಿತ್ತು. ಈ ಕುರಿತು ಎಲ್ಲ ಮಾಹಿತಿ ಪಡೆದು ಚುನಾವಣೆ ಆಯೋಗದ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಮೈಸೂರಿನ ಜನರಿಗೆ ನವಿಲು ಯಾವುದು? ಕೆಂಭೂತ ಯಾವುದು ಎಂಬುದು ಗೊತ್ತಿದೆ: ಮಹದೇವಪ್ಪ