ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳುವಳಿಕೆಗೇಡಿ ಅಲ್ಲ, ತಿಳುವಳಿಕೆಗೇಡಿ ಥರಾ ಆಡುತ್ತಿದ್ದಾರೆ. ತುಷ್ಟೀಕರಣದಿಂದಲೇ 2018ರಲ್ಲಿ ಅವರು ಸೋತಿದ್ದು ಎಂಬುದನ್ನ ಮರೆಯಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ವಾಪಸ್ ಪಡೆಯುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಹಿಜಬ್ (Hijab) ಬ್ಯಾನ್ ವಾಪಸ್ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಭಾಷಣ ಮಾಡ್ತಾರೆ. ಹಿಜಬ್ ಎಲ್ಲಾ ಕಡೆ ಬ್ಯಾನ್ ಆಗಿದೆಯಾ? ಶಾಲಾ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಅನುಸರಿಸಬೇಕು. ಅವರು ಹಿಜಬ್ ಹಾಕೊಂಡು ಬಂದರೆ, ಇನ್ನೊಬ್ಬರು ಕೇಸರಿ ಶಾಲು ಹಾಗೂ ಮತ್ತೊಬ್ಬರು ಟೋಪಿ ಹಾಕಿಕೊಂಡು ಬರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದ್ಯಪ್ರಿಯರ ಬೇಡಿಕೆಗಳು ನ್ಯಾಯಯುತವಾಗಿವೆ: ಸಚಿವ ಲಾಡ್
Advertisement
Advertisement
ಬಣ್ಣದ ಆಧಾರದ ಮೇಲೆ ಗುರುತಿಸಿಕೊಳ್ಳಬೇಕಾ? ಎಲ್ಲಾ ಕಡೆ ಹಿಜಬ್ ನಿಷೇಧ ಮಾಡಲಾಗಿದೆಯೇ? ಬೇಕಾದ ಕಡೆ ಹಾಕಿಕೊಳ್ಳಲಿ, ಆದರೆ ಶಾಲೆಗಳಲ್ಲಿ ಬೇಡ ಅಷ್ಟೇ. ಸಿದ್ದರಾಮಯ್ಯ ಇದನ್ನ ತಿಳಿದುಕೊಳ್ಳಬೇಕು ಅಥವಾ ತಿಳಿದು ತಿಳಿಯದವರಂತೆ ಮಾತಾಡ್ತಿದ್ದಾರೋ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಹಿಜಬ್ ಶಾಲಾ-ಕಾಲೇಜುಗಳಲ್ಲಿ ಮಾತ್ರ ನಿಷೇಧ ಇದೆ. ಅಲ್ಲಿ ಸಮವಸ್ತ್ರ ಇರುತ್ತದೆ. ಅದನ್ನು ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್