ಮಂಗಳೂರು: ನಾನು ಒಂದೇ ಒಂದು ವೋಟರ್ ಐಡಿ ಹೊಂದಿದ್ದೇನೆ. ಆದರೆ ಕೆಲವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದ್ದಾರೆ.
ಮೂರು ಮತದಾರರ ಗುರುತಿನ ಹೊಂದಿರುವ ಆರೋಪದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ತಪ್ಪು ಗ್ರಹಿಕೆಯಿಂದ ದೂರು ಕೊಟ್ಟಿರಬೇಕು. ಒಂದು ವೇಳೆ ಅವರ ಬಳಿ ಆಧಾರಗಳಿದ್ದರೆ ರುಜುವಾತು ಮಾಡಲಿ. ನಾನು ಕೂಡ ನನ್ನ ಬಳಿ ಒಂದೇ ವೋಟರ್ ಐಡಿ ಇರುವುದನ್ನು ಸಾಬಿತು ಮಾಡುತ್ತೇನೆ ಎಂದು ತಿಳಿಸಿದರು.
Advertisement
ಕೆಲವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಆರೋಪಕ್ಕೆ ಮುಂದಾಗಿದ್ದಾರೆ. ಪ್ರಶ್ನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಕರ್ನಾಟಕದಲ್ಲಿ ಮತದಾನ ಮಾಡುತ್ತಿಲ್ಲವೆಂದು ಅನೇಕರು ದೂರಿದ್ದಾರೆ. ತಮಿಳುನಾಡಿನ ಅಡಿಯಾರ್ ನಲ್ಲಿ ನಾನು 20 ವರ್ಷಗಳಿಂದ ವಾಸವಾಗಿದ್ದೇನೆ. ಹೀಗಾಗಿ ಅಲ್ಲಿ ಮಾತ್ರ ಮತದಾನದ ಗುರುತಿನ ಚೀಟಿ ಪಡೆದುಕೊಂಡಿರುವೆ. ಭಾರತದ ಪ್ರಜೆಯಾಗಿರುವ ನಾನು ಎಲ್ಲಿಯಾದರೂ ಮತದಾನದ ಹಕ್ಕನ್ನು ಪಡೆದುಕೊಂಡಿರುವೆ ಎಂದು ತಿಳಿಸಿದರು.
Advertisement
Advertisement
ಏನಿದು ಆರೋಪ?:
ಬಹುಭಾಷಾ ನಟ ಪ್ರಕಾಶ ರೈ ಅವರು ಮೂರು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟೇ ಅಲ್ಲದೆ ಮಂಗಳೂರಿನಲ್ಲಿ ಪ್ರಕಾಶ್ ರೈ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ತಮಿಳುನಾಡಿನ ಎರಡು ಕಡೆ ಮತ್ತು ತೆಲಂಗಾಣದಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ದಾಖಲೆ ಇರುವ ಮಾಹಿತಿ ಈಗ ವೈರಲ್ ಆಗಿದೆ.
Advertisement
He knows very well that judiciary has loop holes.. And he is enjoying it.
— ಹೇಳ್ಬೇಕು ಅನ್ನಿಸ್ತು???????? (@Wenay_Aradhya) December 1, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv