ಲಕ್ನೋ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ವಿರುದ್ಧ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಸರ್ದಾರ್ ಪರ್ವಿಂದರ್ ಸಿಂಗ್ ಎಂಬವರು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ಲಕ್ನೋ ಕೋರ್ಟ್‍ನಲ್ಲಿ ಅಕ್ಟೋಬರ್ 7 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
Advertisement
ಬೆಂಗಳೂರಿನಲ್ಲಿ ಕಳೆದ ಭಾನುವಾರ ನಡೆದ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ 11ನೇ ರಾಜ್ಯ ಸಭೆಯಲ್ಲಿ ಪ್ರಕಾಶ್ ರಾಜ್ ಮೋದಿ ವಿರುದ್ಧ ಮಾತನಾಡಿದ್ದರು. ಗೌರಿ ಲಂಕೇಶ್ ಹತ್ಯೆಯನ್ನ ಸಂಭ್ರಮಿಸುವಂತಹ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇಂತಹ ಟ್ರೋಲ್‍ಗಳನ್ನ ಹಾಕಿದ ಕೆಲವು ಟ್ವಿಟ್ಟರ್ ಖಾತೆಗಳನ್ನ ಮೋದಿ ಫಾಲೋ ಮಾಡುತ್ತಿದ್ದಾರೆಂದು ಪ್ರಕಾಶ್ ರಾಜ್ ಖಂಡಿಸಿದ್ದರು.
Advertisement
ಇದನ್ನೂ ಓದಿ: ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ
Advertisement
ಪ್ರಧಾನಿ ಮೋದಿ ಫಾಲೋ ಮಾಡ್ತಿರೋ ಕೆಲವು ಜನರು ತುಂಬಾ ಕ್ರೂರಿಗಳು, ಅದರ ಬಗ್ಗೆ ಕಣ್ಣು ಮುಚ್ಚಿ ಕುಳಿತಿರೋ ಪ್ರಧಾನಿ ನಮ್ಮಲ್ಲಿದ್ದಾರೆ. ಉತ್ತರಪ್ರದೇಶದ ವಿಡಿಯೋಗಳನ್ನ ನೋಡಿದ್ರೆ ಅವರು(ಯೋಗಿ ಆದಿತ್ಯನಾಥ್) ಮುಖ್ಯಮಂತ್ರಿಯೋ ಅಥವಾ ದೇವಸ್ಥಾನದ ಪೂಜಾರಿಯೋ ಎಂದು ಗೊಂದಲವಾಗುತ್ತದೆ. ಇಂತಹ ಡಬಲ್ ರೋಲ್ ಮಾಡೋ ಜನರು ನಮ್ಮಲ್ಲಿದ್ದಾರೆ. ನನಗೆ 5 ರಾಷ್ಟ್ರಪ್ರಶಸ್ತಿಗಳನ್ನ ನೀಡಿದ್ದಾರೆ. ಅದನ್ನು ಅವರಿಗೆ ನೀಡಬೇಕೆಂದಿದ್ದೇನೆ. ಅವರು ನನಗಿಂತ ದೊಡ್ಡ ನಟರು ಎಂದು ಪ್ರಕಾಶ್ ರಾಜ್ ಹೇಳಿದ್ದರು. ಈ ಹೇಳಿಕೆ ಬಗ್ಗೆ ಸಾಕಷ್ಟು ಟ್ರೋಲ್‍ಗಳಾಗಿದ್ದು, ನಾನು ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದರು.
Advertisement
ಇದನ್ನೂ ಓದಿ: ಅವಾರ್ಡ್ ಗಳನ್ನ ವಾಪಸ್ ಕೊಡಲು ನಾನೇನು ಮೂರ್ಖನಾ?- ಪ್ರಕಾಶ್ ರಾಜ್
ಇದನ್ನೂ ಓದಿ: ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಲು ಹುಚ್ಚು ಹೇಳಿಕೆ: ಪ್ರಕಾಶ್ ರಾಜ್ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ