ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ಮೊದಲಿನಿಂದಲೂ ಪರ ವಿರೋಧ ಕೇಳಿ ಬರುತ್ತಿದೆ. ಅದನ್ನು ಒಂದು ಸಿನಿಮಾವಾಗಿ ತಗೆದುಕೊಂಡಿದ್ದರೆ, ಇಷ್ಟೊತ್ತಿಗೆ ನೂರಾರು ಸಿನಿಮಾಗಳಲ್ಲಿ ಅದೂ ಒಂದಾಗಿರುತ್ತಿತ್ತು. ಆದರೆ, ಧರ್ಮಾಧಾರದ ಮೇಲೆ, ಪಕ್ಷಗಳ ವಿರುದ್ಧ ಹೀಗೆ ತಮ್ಮಿಷ್ಟಕ್ಕೆ ಈ ಸಿನಿಮಾವನ್ನು ಬಳಸಿಕೊಂಡಿರುವ ಪರಿಣಾಮ, ಇವತ್ತು ಆ ಸಿನಿಮಾವನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
Advertisement
ಬಾಲಿವುಡ್ ನಟಿ , ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಈ ಸಿನಿಮಾವನ್ನು ಹಿಗ್ಗಾಮುಗ್ಗ ಹೊಗಳಿದರೆ, ಹೆಸರಾಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಕಾಶ್ ರೈ ಈ ಸಿನಿಮಾವನ್ನು ಬೇರೆ ರೀತಿಯಲ್ಲಿ ತಗೆದುಕೊಂಡಿದ್ದಾರೆ. ಈ ಕುರಿತು ಅವರು ಟ್ವಿಟ್ ಮಾಡಿದ್ದು, ಅದು ಈಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
Advertisement
Advertisement
ಎಲ್ಲರಿಗೂ ಗೊತ್ತಿರುವಂತೆ ಪ್ರಕಾಶ್ ರೈ, ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ವಿರುದ್ಧ ತಿರುಗಿ ಬಿದ್ದಾಗಿನಿಂದ ‘ಜಸ್ಟ್ ಆಸ್ಕಿಂಕ್’ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾರೆ. ಈ ಹ್ಯಾಷ್ ಟ್ಯಾಗ್ ಅಡಿಯಲ್ಲಿಯೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಮಾಡಿದ ಪ್ರಶ್ನೆಗೆ ಕೆಲವರು ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
#kashmirifiles this propaganda film … is it healing wounds or sowing seeds of hatred and inflicting wounds #Justasking pic.twitter.com/tYmkekpZzA
— Prakash Raj (@prakashraaj) March 18, 2022
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತಾಗಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾಯ ಕೆದರುತ್ತಿದೆಯೋ, ವಾಸಿ ಮಾಡುತ್ತದೆಯೋ ಅಥವಾ ದ್ವೇಷವನ್ನು ಹರಡುತ್ತಿದೆಯೋ?’ ಎಂದು ಕೇಳಿದ್ದಾರೆ. ಈ ಪ್ರಶ್ನೆಯನ್ನು ಕೇಳುವುದರ ಜತೆ ಜತೆಗೆ ಅವರು ಥಿಯೇಟರ್ ನಲ್ಲಿ ಜನರು ವೀಕ್ಷಿಸುತ್ತಿರುವ ಮತ್ತು ಪ್ರತಿಕ್ರಿಯೆಯ ವಿಡಿಯೋವನ್ನೂ ಅವರು ಟ್ವಿಟ್ ಮಾಡಿದ್ದಾರೆ. ಒಂದು ಕಡೆ ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ವಿರೋಧದ ಅಲೆಯೂ ಎದ್ದಿದೆ. ಏನೇ ಆದರೂ, ಸಿನಿಮಾ 100 ಕೋಟಿ ಕ್ಲಬ್ ಸೇರುವ ಮೂಲಕ ಯಶಸ್ಸಿನ ಸಿನಿಮಾ ಪಟ್ಟಿಗೆ ಸೇರಿದೆ.