ಮಂಡ್ಯ: ಖ್ಯಾತ ನಟರಾದ ಪ್ರಕಾಶ್ ರೈ ಜಿಲ್ಲೆಯಲ್ಲಿನ ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಕೆ.ಆರ್.ಪೇಟೆ, ಪಾಂಡವಪುರ ಮತ್ತು ಮೆಣಸಗೆರೆ ಗ್ರಾಮದ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಮೆಣಸೆಗೆರೆ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಪ್ರಕಾಶ್ ರೈ, ಕೆ.ಆರ್.ಪೇಟೆ ಹಾಗು ಪಾಂಡವಪುರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಈ ಮೂರು ಶಾಲೆಗಳ ಅಭಿವೃದ್ಧಿಯನ್ನು ಪ್ರಕಾಶ್ ರೈಯವರ ಟ್ರಸ್ಟ್ ನಿಂದ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
Advertisement
Karnataka..visiting govt schools in KR Pete,panadavapura, menasagere..interacting with children.. parents.. teachers .. drawing a road map to rejuvenate n empower equal n quality education to the poor .. meeting concerned ministers n officials today . A #justasking initiative pic.twitter.com/s2LZIx1tLd
— Prakash Raj (@prakashraaj) June 12, 2018
Advertisement
ಶಾಲೆಗೆ ಭೇಟಿ ನೀಡಿದ್ದ ವೇಳೆ ಪ್ರಕಾಶ್ ರೈ ಕೆಲ ಸಮಯವನ್ನು ಮಕ್ಕಳೊಂದಿಗೆ ಕಳೆದಿದ್ದು, ಟ್ವಿಟ್ಟರ್‍ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಶಾಲೆಯ ಮಕ್ಕಳು, ಶಿಕ್ಷಕರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಬಡ ಮಕ್ಕಳಿಗೂ ಎಲ್ಲ ಗುಣಮಟ್ಟದ ಶಿಕ್ಷಣ ಸಿಗಬೇಕು ಅಂತಾ ಬರೆದುಕೊಂಡಿದ್ದಾರೆ.
Advertisement
ಈ ಹಿಂದೆ ಪ್ರಕಾಶ್ ರೈ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲಾರಹಟ್ಟಿ ಗ್ರಾಮವನ್ನು ದತ್ತು ಪಡೆದುಕೊಂಡಿದ್ದರು.