ಹೆಸರಾಂತ ನಟ ಪ್ರಕಾಶ್ ರೈ (Prakash Rai) ಗೆ ದಿ ಕಾಶ್ಮೀರ್ ಫೈಲ್ಸ್ (The Kashmir Files)ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅರ್ಬನ್ ನಕ್ಸಲ್ (Urban Naxal) ಎಂದು ಕರೆದಿದ್ದಾರೆ. ಅಲ್ಲದೇ, ಅಂಧಕಾರ್ ರಾಜ್ ಎಂದೂ ಅವರನ್ನು ಸಂಬೋಧಿಸಿದ್ದಾರೆ. ಈ ಹಿಂದಿ ಪ್ರಕಾಶ್ ರೈ ಪಠಾಣ್ (Pathan) ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಪಠಾಣ್ ಸಿನಿಮಾ 700 ಕೋಟಿ ಸಂಪಾದಿಸಿದೆ. ಕೆಲವರು ಈ ಸಿನಿಮಾವನ್ನು ಬ್ಯಾನ್ ಮಾಡಲು ಹೊರಟಿದ್ದರು. ಮೂರ್ಖರು, ಮತಾಂಧರು ಪಠಾಣ್ ಸಿನಿಮಾಗೆ ತೊಂದರೆ ಕೊಟ್ಟರು. ಮೋದಿ (Modi) ಸಿನಿಮಾ 30 ಕೋಟಿಯೂ ಕಲೆಕ್ಷನ್ ಮಾಡಲಿಲ್ಲ. ಅವರು ಬೊಗಳುತ್ತಾರೆ ಕಚ್ಚುವುದಿಲ್ಲ’ ಎಂದು ಟೀಕೆ ಮಾಡಿದ್ದರು.
Advertisement
ಮುಂದುವರೆದು ಮಾತನಾಡಿದ್ದ ಪ್ರಕಾಶ್ ರೈ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ಟೀಕಿಸಿದ್ದರು. ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯದವರು ಆಸ್ಕರ್ ಪ್ರಶಸ್ತಿ ಕೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ವಿವೇಕ್ ಅಗ್ನಿಹೋತ್ರಿಯನ್ನು ಕಾಲೆಳೆದಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಅಂತಾರಾಷ್ಟ್ರೀಯ ಜ್ಯೂರಿಗಳು ತೆಗಳಿದ್ದರು ಎಂದು ನೆನಪಿಸಿದ್ದರು. ಹೀಗಾಗಿ ಅಗ್ನಿಹೋತ್ರಿ ಮತ್ತೆ ಪ್ರಕಾಶ್ ರೈಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾ ರ್ಥ್ -ಕಿಯಾರಾ ಜೋಡಿ
Advertisement
Advertisement
ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಬರೆದಿರುವ ವಿವೇಕ್ ಅಗ್ನಿಹೋತ್ರಿ, ‘ಅರ್ಬನ್ ನಕ್ಸಲ್ ಗಳ ನಿದ್ದೆ ಕೆಡಿಸಿದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಚಿತ್ರವು ಬಿಡುಗಡೆಯಾಗಿ ಒಂದು ವರ್ಷ ಕಳೆದರೂ, ಓರ್ವ ವ್ಯಕ್ತಿಯ ನಿದ್ದೆ ಕೆಡಿಸಿದೆ ಆ ಸಿನಿಮಾ. ಭಾಸ್ಕರ್ ಪ್ರಶಸ್ತಿಯು ನಿಮ್ಮ ಬಳಿಯೇ ಇರುವಾಗ ಅದನ್ನು ನಾನು ಪಡೆಯಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
Advertisement
ಪಠಾಣ್ ಸಿನಿಮಾದ ಗೆಲುವಿನ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಪರವಾಗಿ ಪ್ರಕಾಶ್ ರೈ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಭಕ್ತರು ಎಷ್ಟೇ ಚೀರಾಡಿದರೂ ಸಿನಿಮಾ ಗೆದ್ದಿತು. ಆದರೆ, ಮೋದಿ ಸಿನಿಮಾ ಮೂವತ್ತು ಕೋಟಿ ರೂಪಾಯಿಯನ್ನೂ ಮಾಡಲಿಲ್ಲ ಎಂದು ಕಾಲೆಳೆದಿದ್ದರು. ಪ್ರಕಾಶ್ ರೈ ಅವರ ಈ ಬರಹ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k