ಮೈಸೂರು: ನಟ ಪ್ರಕಾಶ್ ರೈ ನಾನೊಬ್ಬ ದೊಡ್ಡ ನಟ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಡಾ.ರಾಜ್, ಅಮಿತಾಬ್, ಎನ್.ಟಿ.ಆರ್ ಯಾರೂ ಕೂಡ ನಾನು ದೊಡ್ಡ ನಟ ಅಂತ ಹೇಳಿಕೊಂಡಿಲ್ಲ. ಹೀಗಾಗಿ ರೈ ಹೇಳಿಕೆ ಒಂದು ರೀತಿಯ ಅಭಾಸ ಸೃಷ್ಠಿಸುತ್ತದೆ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟ ಅಷ್ಟೇ. ಇವರು ತಮ್ಮನ್ನ ದೊಡ್ಡ ನಟ ಅಂದುಕೊಂಡು ರಾಜಕಾರಣಿಗಳನ್ನ ಟೀಕೆ ಮಾಡೋದು ಸರಿಯಲ್ಲ. ಪ್ರಕಾಶ್ ರೈ “ಸ್ಪಿಟ್ ಅಂಡ್ ರನ್ ಥರ. ಗುದ್ದು ಓಡೋದಲ್ಲ. ಉಗಿದು ಓಡೋದು”. ಆದ್ರೆ ನಾನು ಅವರಂತೆ ಇರೋಕೆ ಆಗೋಲ್ಲ. ನನಗೆ ಜವಾಬ್ದಾರಿ ಇದೆ, ಕ್ಷೇತ್ರ ಇದೆ. ಅವರಂತೆ ನಾನು ಓಡಿ ಹೋಗೋಕೆ ಆಗೋಲ್ಲ ಅಂತ ಟಾಂಗ್ ನೀಡಿದ್ರು.
Advertisement
Advertisement
ನಟ ಪ್ರಕಾಶ್ ರೈ ಕುರಿತು ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಅವರಿಗೆ ಮೋದಿ, ಯೋಗಿ ಆದಿತ್ಯನಾಥ್, ಟ್ರಂಪ್ ಚೈನಾ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ಹಕ್ಕಿದೆ. ಅಂತೆಯೇ ಇವರನ್ನು ಪ್ರಶ್ನೆ ಮಾಡುವ ಹಕ್ಕು ಸಹ ಸಾರ್ವಜನಿಕರಿಗೆ ಹಾಗೂ ನನಗೆ ಇದೆ. ಉತ್ತರಪ್ರದೇಶದ ಮಕ್ಕಳ ಮರಣಕ್ಕೆ ಮಿಡಿಯುವ ಇವರ ಆತ್ಮಸಾಕ್ಷಿ. ಕೋಲಾರದಲ್ಲಿ ಆದ ಮಕ್ಕಳ ಸಾವಿನ ಸರಣಿ ಇವರು ಯಾಕೆ ಮಾತನಾಡೋಲ್ಲ. ಇತರರನ್ನು ಪ್ರಶ್ನೆ ಮಾಡುವ ಧಾವಂತದಲ್ಲಿ ದ್ವಂದ್ವ ನಿಲುವನ್ನು ಬಹಿರಂಗೊಳಿಸುತ್ತಿದ್ದಾರೆ. ಸಚಿವ ರಮಾನಾಥ್ ರೈ ಜೊತೆ ವೇದಿಕೆ ಹಂಚಿಕೊಳ್ಳುವ ಇವರು ಶರತ್ ಮಡಿವಾಳ ಹತ್ಯೆ ಬಗ್ಗೆ ಯಾಕೆ ಪ್ರಶ್ನಿಸೋಲ್ಲ ಅಂತ ಕಿಡಿಕಾರಿದ್ರು.
Advertisement
ದೇಶದಲ್ಲಿ ಮಾತನಾಡಲು ಭಯವಾಗುತ್ತಿದೆ ಎಂಬ ಪ್ರಕಾಶ್ ರೈ ಹೇಳಿಕೆಗೆ ಇದೇ ಪ್ರತಿಕ್ರಿಯಿಸಿದ ಅವರು, ಇವರೇ ಮೋದಿ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಇದಕ್ಕಿಂತ ಸ್ವಾತಂತ್ರ್ಯ ಇನ್ನೆನು ಬೇಕಿದೆ. ಮೋದಿ ಬಗ್ಗೆ ಯಾರೇ ಏನೆ ಮಾತನಾಡಿದ್ರು ಅವರು ಸುಮ್ಮನೆ ಇದ್ದಾರೆ. ಇದಕ್ಕಿಂತ ವಾಕ್ ಸ್ವಾತಂತ್ರ್ಯ ಇನ್ಯಾವ ದೇಶದಲ್ಲಿದೆ ಅಂದ್ರು.
Advertisement
ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈhttps://t.co/bQZOSjVkhR#Bengaluru #Modi #PrathapSimha #PrakashRai #Padmavathi #NationalAnthem pic.twitter.com/Ho1xh1L2iO
— PublicTV (@publictvnews) November 12, 2017
ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ https://t.co/XzdnyUDwB6#Bengaluru #GST #Actor #PrakashRai #BJpGovt pic.twitter.com/MBiwvfh75P
— PublicTV (@publictvnews) October 18, 2017
ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನೊಬ್ಬ ಏಕಲವ್ಯ: ಪ್ರಕಾಶ್ ರೈ https://t.co/M3cyhGfMoo#prakashrai #ekalavya #chitradurga pic.twitter.com/WHzUZpwAC6
— PublicTV (@publictvnews) November 5, 2017
ಎಲ್ಲವನ್ನು ನೋಡಿಕೊಂಡು ಸುಮ್ಮನಿರುವ ಹೇಡಿಯಲ್ಲ: ಪ್ರಕಾಶ್ ರೈ ಘರ್ಜನೆ https://t.co/ohndolUETR#PrakashRai #Udupi #PrakashRaj #KaranthPrashasti pic.twitter.com/SU1Gp1rwes
— PublicTV (@publictvnews) October 10, 2017
ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ https://t.co/OqcQTT7M2R #PrakashRai #KamalHaasan #Hindu #Terrorism pic.twitter.com/3pioybmCHh
— PublicTV (@publictvnews) November 4, 2017