ಬೆಂಗಳೂರು: ಲೋಕಸಭಾ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವ ಪ್ರಕಾಶ್ ರೈ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಿವಿ ಮಾತು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್, ಇಲ್ಲಿ ರೀ ಟೇಕ್ ಇರುವುದಿಲ್ಲ. ಎಡಿಟಿಂಗ್ ಇರುವುದೇ ಇಲ್ಲ. ಸಿದ್ಧಪಡಿಸಿರುವ ಸಂಭಾಷಣೆಗೂ ಹೆಚ್ಚು ಅವಕಾಶವಿಲ್ಲ. ಆ್ಯಕ್ಷನ್-ಕಟ್ ಪದವೇ ನಿಷಿದ್ದ, ಹುಷಾರಾಗಿರಿ ಅಂತ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಬಹುಭಾಷಾ ನಟ ಪ್ರಕಾಶ್ ರೈ ಅವರು ಆಪ್ತರೊಬ್ಬರಿಗೆ ಹೊಸ ವರ್ಷ ಶುಭಕೋರಿ 2018ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಹೊರ ಹಾಕಿದ್ದರು. ಆಪ್ತರ ಬಳಿ ಚರ್ಚೆ ನಡೆಸಿಯೇ ನಿರ್ಧಾರ ತೆಗೆದುಕೊಂಡಿರುವ ಅವರು, ಹೊಸ ವರ್ಷದ ಶುಭ ಕೋರಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
Advertisement
ಚುನಾವಣೆಗೆ ನಿಲ್ಲಲು ನಿರ್ಧರಿಸಿರುವ ಪ್ರಕಾಶ್ ರೈ (ರಾಜ್) ಅವರಿಗೆ ಒಂದು ಕಿವಿ ಮಾತು.
ಇಲ್ಲಿ ರೀ ಟೇಕ್ ಇರುವುದಿಲ್ಲ.
ಎಡಿಟಿಂಗ್ ಇರುವುದೇ ಇಲ್ಲ. ಸಿದ್ದಪಡಿಸಿರುವ ಸಂಭಾಷಣೆಗೂ ಹೆಚ್ಚು ಅವಕಾಶವಿಲ್ಲ.
Action -cut ಪದವೇ ನಿಷಿದ್ದ. ಹುಷಾರಾಗಿರಿ.
— S.Suresh Kumar (@nimmasuresh) January 1, 2019
Advertisement
ಪಕ್ಷೇತರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ಆಪ್ತರ ಬಳಿ ಚರ್ಚಿಸಿರುವೆ. ಈ ನಿಟ್ಟಿನಲ್ಲಿ ಹೊಸ ವರ್ಷಕ್ಕೆ ಹೊಸ ಪ್ರಾರಂಭವನ್ನು ಆರಂಭಿಸುತ್ತಿದ್ದೇನೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ನಿಮ್ಮ ಬೆಂಬಲದೊಂದಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ. ಈ ಸಂಬಂಧ ಎಲ್ಲ ಮಾಹಿತಿಯನ್ನು ಸದ್ಯದಲ್ಲೇ ನಿಮಗೆ ತಿಳಿಸುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಹೇಳಿಕೊಂಡಿಲ್ಲ ಎಂದು ಆಪ್ತ ವಲಯವು ತಿಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv