ಬೀದರ್: ಸರ್ಕಾರ ಕೊಟ್ಟಿರುವ ನಿಮ್ಮ ಎಸ್ಕಾರ್ಟ್ ಬಿಟ್ಟು ಮತಗಟ್ಟೆ ಬಳಿ ಹಾಕಿರುವ ಬೌಂಡರಿ ಒಳಗೆ ಬನ್ನಿ ನೋಡೋಣ ಎಂದು ಪರಿಷತ್ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಬಹಿರಂಗವಾಗಿ ಸವಾಲನ್ನು ಹಾಕಿದರು.
ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರ್ ಖಂಡ್ರೆ ಅವರೆ ನಿಮ್ಮ ಪಕ್ಷ ಒಂದು ದೊಡ್ಡ ಸ್ಥಾನ ಕೊಟ್ಟಿದೆ ಎಂದು ನಿಮ್ಮ ಕಣ್ಣು ತಲೆ ಮೇಲೆ ಹೋಗಿದೆ. ನಿಮ್ಮತರ ನನಗೆ ಬಾಪ್ ಕಮಾಯಿ(ಅಪ್ಪನ ದುಡಿಮೆ) ಇಲ್ಲ ಎಂದು ಟಾಂಗ್ ಕೊಟ್ಟ ಅವರು, ಚುನಾವಣೆಯ ದಿನ ನಾನು ಮತಗಟ್ಟೆ ಒಳಗಡೆ ಬರುತ್ತೇನೆ. ನೀವು ನನ್ನ ಎದುರು ಮತದಾನ ಮಾಡಬೇಕು ಎಂದು ಮತದಾರರಿಗೆ ಹೇಳುತ್ತೀರಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ
ಅದು ಯಾವ ಕಾನೂನು, ಯಾವ ಎಲೆಕ್ಷನ್ ರೂಲ್ಸ್ ಇದೆ. ನಿಮ್ಮ ಬಳಿ ನಾನು ನೋಡಬೇಕಿದೆ. ಈ ರೀತಿ ಮತದಾರರಿಗೆ ದಬ್ಬಾಳಿಕೆ, ಶೋಷಣೆ ಮಾಡೋದು ಬಿಡ್ರಿ ಎಂದು ಕಿಡಿಕಾರಿದರು. ಇದು ಕಾನೂನು ಬಾಹಿರವಾಗಿದ್ದು, 10ನೇ ತಾರೀಖು ತಾವು ಹೇಗೆ ಬರುತ್ತೀರಿ ನೋಡೋಣ ಎಂದು ಬಹಿರಂಗ ಸವಾಲು ಹಾಕಿದರು.