ನವದೆಹಲಿ: ನಸಿ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ(#SelfiewithSapling) ನೂತನ ಅಭಿಯಾನಕ್ಕೆ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಚಾಲನೆ ನೀಡಿದ್ದಾರೆ.
ಜೂನ್ 5ರಂದು ವಿಶ್ವಾದ್ಯಂತ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ. ಈ ವಿಶೇಷ ದಿನದ ಅಂಗವಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ #SelfiewithSapling ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಮೂಲಕ ನಮ್ಮ ಜೀವ ಉಳಿಸುವ ಪರಿಸರವನ್ನು ನಾವು ಉಳಿಸೋಣ ಎಂದು ಎಲ್ಲರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
Advertisement
Advertisement
ಈ ಬಗ್ಗೆ ಟ್ವಿಟ್ಟರ್ ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿರುವ ಅವರು, ಭಾರತೀಯರೆಲ್ಲರೂ ಉತ್ಸಾಹದಿಂದ ಪರಿಸರ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನಾವು ಸೆಲ್ಫಿ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಸೆಲ್ಫಿ ತೆಗೆದು ನಿಮ್ಮ ಸಾಮಾಜಿಕ ತಾಣಗಳಲ್ಲಿ #SelfiewithSapling ಹ್ಯಾಶ್ ಟ್ಯಾಗ್ ಜೊತೆ ಪೋಸ್ಟ್ ಮಾಡುವಂತೆ ತಿಳಿಸಿದ್ದಾರೆ.
Advertisement
Advertisement
ನವದೆಹಲಿಯ ಪರ್ಯಾವರಣ ಭವನದಲ್ಲಿ ಬುಧವಾರ ನಡೆಯಲಿರುವ ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಕ್ರಿಕೆಟರ್ ಕಪಿಲ್ ದೇವ್ ಮತ್ತು ನಟ ಜಾಕಿ ಶ್ರಾಫ್ ಭಾಗವಹಿಸಲಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರ `ಸ್ವಚ್ಛ ಗಾಳಿ’ ಯೋಜನೆಗೂ ಇಲ್ಲರೂ ಸಹಕಾರ ನೀಡಬೇಕು. ಪರಿಸರ ರಕ್ಷಣೆಯ ಯೋಜನೆಗಳು ಬರೀ ಸರ್ಕಾರಕ್ಕೆ ಸೀಮಿತವಾದದಲ್ಲ. ಜನರೂ ಕೂಡ ಈ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳು ಜನರ ಯೋಜನೆ ಎಂದು ಮೋದಿ ಸರ್ಕಾರ ನಂಬುತ್ತದೆ. ಹೀಗಾಗಿ ಕೇವಲ ಈ ಯೋಜನೆಗೆ ಮಾತ್ರವಲ್ಲ ಮುಂದೆ ಬರುವ ಸರ್ಕಾರದ ಪ್ರತಿ ಯೋಜನೆಗೂ ಜನರು ಕೈಜೋಡಿಸುತ್ತೀರಿ ಎಂದು ನಾವು ಆಶಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
On the eve of #WorldEnvironmentDay happy to launch #SelfiewithSapling campaign. I urge all to join this campaign, plant a sapling and post the selfie at your social media with hashtag #SelfiewithSapling.@moefcc ,@UNEnvironment @MIB_India @PIB_India @UNinIndia #BeatAirPollution pic.twitter.com/csIs1xgvTj
— Prakash Javadekar (@PrakashJavdekar) June 4, 2019
ಈ ಬಾರಿ ವಿಶ್ವಸಂಸ್ಥೆ `ಸ್ವಚ್ಛ ಗಾಳಿ’ ಅಭಿಯಾನವನ್ನು ಆರಂಭಿಸಿದೆ. ಹೀಗಾಗಿ ನಾವೆಲ್ಲರು ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ಈಗಾಗಲೇ ಕೇಂದ್ರ ಸರ್ಕಾರ ಸ್ಚಚ್ಛ ಗಾಳಿ ಮಿಷನ್‍ಗೆ ಚಾಲನೆ ನೀಡಿದೆ. ಹೀಗಾಗಿ ನಾವು ಗಾಳಿಯನ್ನು ಸ್ವಚ್ಛಗೊಳಿಸಲು ಸಸಿಗಳನ್ನು, ಗಿಡಗಳನ್ನು ಬೆಳೆಸಬೇಕು. ಆದ್ದರಿಂದ ಸಸಿಗಳನ್ನು ನೆಟ್ಟು ಅದರ ಆರೈಕೆ ಮಾಡುವುದು ಮುಖ್ಯ ಎಂದು ತಿಳಿಸಿದರು.