ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ ನಂತರ ನನ್ನನ್ನು ನರೇಂದ್ರ ಮೋದಿ ಚಮಚಾ ಎನ್ನುತ್ತಿದ್ದಾರೆ. ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟವಾದವರು ಈ ರೀತಿ ಮಾತನಾಡುವುದು ಸಹಜ ಎಂದಿದ್ದಾರೆ ನಟ ಪ್ರಕಾಶ್ ಬೆಳವಾಡಿ.
ಇಂದು ಮೈಸೂರಿನಲ್ಲಿ ‘ಮೈಸೂರು ಸಿನಿಮಾ ಸೊಸೈಟಿ’ ಏರ್ಪಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ಬೆಳವಾಡಿ, “ಈ ಸಿನಿಮಾ ಪ್ರಾಪಗೆಂಡಾಕೆ ಬಳಕೆ ಆಗುತ್ತಿದೆ. ಜಾತಿರಾಜಕಾರಣಕ್ಕೆ ಕಾರಣವಾಗಿದೆ. ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಸಿನಿಮಾ ಇರುವುದೇ ಸತ್ಯ ಹೇಳುವುದಕ್ಕೆ. ಈ ಸಿನಿಮಾ ಸತ್ಯವನ್ನೇ ಹೇಳಿದೆ’ ಎಂದರು. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಮತ್ತು ಆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ತಮ್ಮನ್ನು ನರೇಂದ್ರ ಮೋದಿ ಅವರ ಚಮಚಾ ಎಂದು ಕರೆಯುತ್ತಿರುವ ವಿಷಯವನ್ನೂ ಅವರು ಹೇಳಿಕೊಂಡರು. ಕೆಲವು ವಿಷಯಗಳನ್ನು ಮೋದಿ ಅವರನ್ನು ಬೆಂಬಲಿಸಿದ್ದು ನಿಜ ಎಂದು ಪ್ರಕಾಶ್ ಬೆಳವಾಡಿ ಒಪ್ಪಿಕೊಂಡರು. ಯಾರು ಏನು ಬೇಕಾದರೂ ಅಂದುಕೊಳ್ಳಲಿ ನಾನು ಸತ್ಯದ ಪರ ಇರುವುದಾಗಿ ಅವರು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇರದೇ ಇದ್ದರೆ ಸಿನಿಮಾ ಬಿಡುಗಡೆಯೇ ಆಗುತ್ತಿರಲಿಲ್ಲ ಎಂದರು ಪ್ರಕಾಶ್ ಬೆಳವಾಡಿ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ
ನಿರ್ದೇಶಕನಿಗೆ ಇರಬೇಕಾದ ಜವಾಬ್ದಾರಿಗಳ ಬಗ್ಗೆಯೂ ಮಾತನಾಡಿದ ಅವರು, ನಿರ್ದೇಶಕರು ಸತ್ಯದ ಪರವಾಗಿ ಕೆಲಸ ಮಾಡಬೇಕು. ಅವನು ಕಾರಕೂನನಂತೆ ಕೆಲಸ ಮಾಡಬಾರದು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹಾಗಾಗಿ ಅವರನ್ನು ಎಲ್ಲರೂ ಅಭಿನಂದಿಸಬೇಕು ಎಂದಿದ್ದಾರೆ ಬೆಳವಾಡಿ.