2020ರ ಸಿಂಪಲ್ ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ

Public TV
4 Min Read
udp prakash ammannayya

ಉಡುಪಿ: ಹಳೆ ವರ್ಷಕ್ಕೆ ಟಾಟಾ ಬೈಬೈ ಹೇಳಿ ಹೊಸ ವರ್ಷ ಬರಮಾಡಿಕೊಂಡಿದ್ದೇವೆ. ಕಳೆದದ್ದು ಕಳೆದು ಹೋಯಿತು. ಆಗಿದ್ದು ಆಗೋಯ್ತು. ಮುಂದೇನು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಹೊಸ ವರ್ಷದಲ್ಲಿ ಏನಾದರೂ ಹೊಸ ರೆಸಲ್ಯೂಷನ್ ತಗೆದುಕೊಳ್ಳಬೇಕು ಎಂದು ಎಲ್ಲರೂ ಯೋಚನೆ ಮಾಡುತ್ತಿದ್ದಾರೆ.

ಜ್ಯೋತಿಷ್ಯ ನಂಬುವವರು ನನ್ನ ಮುಂದಿನ ವರ್ಷ ಹೇಗಿರುತ್ತದೆ ಎಂದು ಲೆಕ್ಕ ಹಾಕಿಯೇ ಹಾಕುತ್ತಾರೆ. ಗ್ರಹಫಲ ಏನು. ಕಂಟಕ ಇದ್ದರೆ ಸುಲಭ ಪರಿಹಾರ ಏನು ಎಂದು ಹುಡುಕುತ್ತಿರುತ್ತಾರೆ. ಉಡುಪಿಯ ಕಾಪು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ದ್ವಾದಶ ರಾಶಿಯ ಫಲಾಫಲ ಹೇಳಿದ್ದಾರೆ. ಜ್ಯೋತಿಷ್ಯದ ಜೊತೆ ವಿಜ್ಞಾನ, ಮನಶಾಸ್ತ್ರ ಕಲಿತಿರುವ ಪ್ರಕಾಶ್ ಅಮ್ಮಣ್ಣಾಯ ಜನರನ್ನು ಭಯ ಬೀಳಿಸದೆ. ಸಾವಿರ ಲಕ್ಷದ ಪರಿಹಾರ ಸೂಚಿಸಿಲ್ಲ. ಬಹಳ ಸಿಂಪಲ್ಲಾಗಿ 2020ಯನ್ನು ಖುಷಿಖುಷಿಯಾಗಿ ಕಳೆಯಿರಿ ಎಂದು ಹೇಳಿದ್ದಾರೆ.

prakash ammannaya

ಹೊಸ ವರ್ಷ ಬಂದಾಗ ಮನುಷ್ಯ ಬಹಳ ಪ್ರಫುಲ್ಲಿತನಾಗಿರುತ್ತಾನೆ. ಹೊಸ ವರ್ಷ ಬಂದಾಗ ವರ್ಷ ಹೇಗಿರುತ್ತದೆ ಎಂಬುದು ಎಲ್ಲರಿಗೂ ಕುತೂಹಲ ಇರುತ್ತದೆ. ರಾಶಿಗಳ ಮೇಲೆ ಇಡೀ ವರ್ಷದ ಭವಿಷ್ಯ ಹೇಳುವುದು ಕಷ್ಟ. ಜಾತಕದ ಮೇಲೆ ಹೇಳಬಹುದು. ಆಳವಾಗಿ ದ್ವಾದಶರಾಶಿಯನ್ನು ಹೇಳದಿದ್ದರೂ, 12 ರಾಶಿಯನ್ನು ಪರಾಮರ್ಷೆ ಮಾಡಿ, ಕೆಲ ವಿಮರ್ಶೆ ಮಾಡಿದ್ದಾರೆ.

2020 ಜನವರಿ 26ಕ್ಕೆ ಶನಿ ಮಕರ ಪ್ರವೇಶವಾಗುತ್ತದೆ. ಮಾರ್ಚ್‍ನಲ್ಲಿ ಗುರು ಕೂಡ ಮಕರಕ್ಕೆ ಪ್ರವೇಶವಾಗುತ್ತದೆ. ಜೂನ್ ನಂತರ ಧನಸ್ಸು ರಾಶಿಗೆ ಎರಡು ಗ್ರಹಗಳ ಪ್ರವೇಶ ಆಗುವುದರಿಂದ ಈ ಮೂರು ರಾಶಿಯವರು ಮುಂಜಾಗ್ರತೆ ವಹಿಸಬೇಕು.

Happy New Year 2020

ಮೇಷ: ನಮ್ಮ ಅಭಿವೃದ್ಧಿಗೆ ನಾವೇ ಮಾರಕರಾಗುವ ಸ್ವಭಾವ. ಅವಸರ ಸ್ವಭಾವ ಸಲ್ಲದು. ಧರ್ಮ ಭ್ರಷ್ಟರಾಗುತ್ತೇವೆ. ದುಡಿತಕ್ಕೆ ತಕ್ಕ ಸಂಭಾವನೆ ಲಭ್ಯ. ಕಾಯಕವೇ ಕೈಲಾಸದಲ್ಲಿ ನಂಬಿಕೆ ಇಡಬೇಕು. ಭಾಗ್ಯ ಪ್ರಾಪ್ತಿ.

ವೃಷಭ: ಇದೂವರೆಗೆ ಅನುಭವಿಸಿದ ಸಂಕಟಗಳು ಕಡಿಮೆಯಾಗುತ್ತವೆ. ಅನಾರೋಗ್ಯ ದೂರ. ಜನವರಿ 26ರಿಂದ ಶುಭ ಫಲ ಪ್ರಾಪ್ತಿ. ಸರಿಯಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗಿ. ಮಾರ್ಚ್ ಬಳಿಕ ಗುರು ಅನುಗ್ರಹದಿಂದ ಇನ್ನೂ ಒಳ್ಳೆಯ ಸಮಯ. ಶನಿಯ ಪ್ರಭಾವ ತಪ್ಪುತ್ತದೆ, ಎಚ್ಚರಿಕೆ ಅತಿ ಮುಖ್ಯ.

ಮಿಥುನ: ಇಂದಿನ ಶ್ರಮಕ್ಕೆ ನಾಳೆ ಫಲ. ಆರೋಗ್ಯದ ಬಗ್ಗೆ ತುಂಬಾ ಎಚ್ಚರ ಅಗತ್ಯ. ಯಾರೊಡನೆಯೂ ನಿಷ್ಠುರ ಮಾತುಗಳು ಬೇಡ. ಆಲೋಚನೆ ಮೊದಲು- ಮಾತು ಆಮೇಲೆ ಆಡಿದರೆ ಒಳ್ಳೆಯದು. ಮಾರ್ಚ್ ಬಳಿಕ ವಿವಾಹ ಯೋಗ. ಅವಮಾನದಿಂದ ದೂರ ಇರುವುದು ಒಳ್ಳೆಯದು. ಧರ್ಮ ತಪ್ಪುವ ಕೆಲಸ ಮಾಡಬೇಡಿ. ತಜ್ಞರ ಬಳಿ ಸಲಹೆ ಪಡೆಯಲೇಬೇಕು.

UDP 3

ಕರ್ಕಾಟಕ: ಸಪ್ತಮ ಸ್ಥಾನಕ್ಕೆ ಶನಿ ಪ್ರವೇಶ. ಕಷ್ಟನಷ್ಟಗಳ ಸಾಧ್ಯ. ಕೋರ್ಟ್ ಕಚೇರಿ ಅಲೆದಾಟ ಸಾಧ್ಯತೆ. ಜೂನ್ ಬಳಿಕ ಶುಭಫಲ, ಆದರೆ ಜಾಗರೂಕತೆ ಅಗತ್ಯ. ಋಣಬಾಧೆ ಬರುತ್ತದೆ. ಋಣ ತೀರಿಸಿ ಜೀವನ ನಡೆಸಬೇಕು.

ಸಿಂಹ: ಪಂಚಮದಲ್ಲಿ ಶನಿ, ಪಂಚಮದಲ್ಲಿ ಗುರು. ಅನಗತ್ಯ ಕಲಹ. ಜನವರಿ 26ರ ಬಳಿಕ ಕಲಹಕ್ಕೆ ತೀರ್ಮಾನ ಸಾಧ್ಯತೆ. ಋಣ ಬಾಧೆ ಹೆಚ್ಚಳವಾಗುತ್ತದೆ. ಸ್ನೇಹಕ್ಕೆ ಒತ್ತು ಕೊಡಬೇಕು. ತಾಳ್ಮೆ ಅಗತ್ಯ. ಟೆನ್ಶನ್ ಮಾಡದೆ ಆಲೋಚಿಸಿ ನಿರ್ಧರಿಸಿ.

ಕನ್ಯಾ: ಪಂಚಮಸ್ಥಾನದಲ್ಲಿ ಶನಿ ಸ್ವಜನ ಬಂಧು ಕಲಹ ಋಣಾತ್ಮಕ ಚಿಂತನೆ ಬೇಡ. ಜನವರಿ ಬಳಿಕ ಸಂತಾನ ಪ್ರಾಪ್ತಿ, ಧನ ಪ್ರಾಪ್ತಿ ಕಾಯುವುದರಲ್ಲಿ ಸುಖವಿದೆ. ಪಂಚಮಕ್ಕೆ ಗುರು ಬರುವ ಕಾಲ ಶುಭಕಾಲ.

ತುಲಾ: ತೃತೀಯ ಸ್ಥಾನದಲ್ಲಿ ಗುರುವಿದೆ. ತೃತೀಯ ಗುರುವಿದೆ ಅನಗತ್ಯ ಭಯ. ಶನಿ ಕೂಡ ಇದೆ. ಅರ್ಧಾಷ್ಟಮ ಶನಿ ಉದ್ಯೋಗ ಪರಿವರ್ತನೆ ಸ್ಥಳ ಪರಿವರ್ತನೆ ಆಗುತ್ತದೆ. ದೈವ ದ ಮೇಲೆ ದೇವರ ಮೇಲೆ ಭಾರ ಹಾಕಿ ಮುಂದುವರಿಯಿರಿ.

udp prakash ammannayya 1

ವೃಶ್ಚಿಕ: ಅತ್ಯುತ್ತಮ ಕಾಲ. 20 ತಿಂಗಳ ಬಳಿಕ ಈ ರಾಶಿಗೆ ಮಹಾಯೋಗ ಭಾಗ್ಯೋದಯ ಕಾಲ. ಮಾರ್ಚ್ ಬಳಿಕ ಭಯ ಭಾವ ಆತ್ಮ ಧೈರ್ಯ ಇರಲಿ. ಪ್ರಧಾನಿ, ಮುಖ್ಯಮಂತ್ರಿಗಳ ಭಾಗ್ಯೋದಯ ಉತ್ಪತ್ತಿ ಕಾಲ. ಭಯ ಆವರಿಸಿದರೂ ಆತಂಕಬೇಡ. ದಿಟ್ಟತೆ ರೂಢಿಸಬೇಕು.

ಧನು: ಜನ್ಮದಲ್ಲಿ ಶನಿ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಅನಗತ್ಯ ಕಲಹ ಪ್ರಜ್ಞಾಹೀನತೆ ಕಳೆದುಕೊಳ್ಳಬೇಡಿ. ಮಾರ್ಚ್ ಬಳಿಕ ಉತ್ತಮ ಯೋಗ. ವಿರೋಧ ಆರೋಪಗಳಿಗೆ ಯಾವುದೇ ಕಿವಿಕೊಡಬಾರದು. ಕಲಹಕ್ಕೆ ಕಲಹ ಮಾಡಿದರೆ ನಿಮ್ಮ ನಾಯಕತ್ವ ದೂರವಾಗಬಹುದು.

ಮಕರ: ಇದೂವರೆಗೆ ಅನುಭವಿಸಿದ ಕಷ್ಟಗಳ ಪರಿಹಾರ. ಸಾಲ ಮಾಡುವ ಸಾಧ್ಯತೆ. ಸಮಸ್ಯೆ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಗುರು ವ್ಯಯ ಸ್ಥಾನದಲ್ಲಿ ಇರುತ್ತದೆ. ತಜ್ಞರ ಅಭಿಪ್ರಾಯ ಒಡೆದರೆ ಕ್ಷೇಮ.

ಕುಂಭ: ಬಹಳ ಒಳ್ಳೆಯ ಸಮಯವಾಗಿತ್ತು. ಈವರೆಗೆ ಇದ್ದ ಕಾಲ ಮುಂದುವರಿಯುತ್ತದೆ. ಗ್ರಹಗಳು ನೀಡುವ ಫಲಗಳನ್ನು ಉಳಿಸಿಕೊಳ್ಳಿ. ಗಳಿಸಿದ ಸಂಪತ್ತಿನಲ್ಲಿ ನಷ್ಟ ಸಾಧ್ಯತೆ. ಶುಭಾಶುಭಗಳ ಮಿಶ್ರ ಫಲ. ಗುರು ದ್ವಾದಶಕ್ಕೆ ಪ್ರವೇಶ ಮಾಡುವುದರಿಂದ ನಷ್ಟವಾಗಬಹುದು. ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ.

new year

ಮೀನ: ಸೆಂಟಿಮೆಂಟಲ್ ರಾಶಿ. ಭಾವನಾತ್ಮಕ ಕ್ಷಣಗಳು ಎದುರಾಗುತ್ತದೆ. ಅಪಾತ್ರರಿಗೆ ದಾನ ಬೇಡ. ಸಹಾಯ ಬೇಡ. ಏಕಾದಶದ ಶನಿ ಮತ್ತು ಗುರು ಉತ್ತಮ ಫಲಗಳ ಪ್ರಾಪ್ತಿ. ಇದನ್ನು ಉಪಯೋಗ ಮಾಡಬೇಕು. ಸತ್ಪಲ ಪ್ರಾಪ್ತಿಕಾಲ. ಎರಡೂವರೆ ವರ್ಷದ ಕಷ್ಟ ದೂರವಾಗುತ್ತದೆ.

ಪ್ರಕಾಶ್ ಅಮ್ಮಣ್ಣಾಯ ಅವರ ಪರಿಹಾರ ಸಿಂಪಲ್. ಭಯಬೀಳಿಸುವ ವಿಭೂತಿ ಬಳಿಯುವ ಜ್ಯೋತಿಷಿಗಳ ನಡುವೆ, ಪ್ರಕಾಶ್ ಅಮ್ಮಣ್ಣಾಯ ಸಾಮಾನ್ಯ ಪರಿಹಾರ ಸೂಚಿಸಿದ್ದಾರೆ. ಎಲ್ಲಾ ರಾಶಿಯವರು ವಿಷ್ಣು ಸಹಸ್ರನಾಮ, ಶಿವ ಪಂಚಾಕ್ಷರಿ, ದುರ್ಗೆಯ ಆರಾಧನೆ ಮಾಡಬೇಕು. ಈ ಮೂರನ್ನು ಮಾಡಿದರೆ ಜೀವನ ಸಾರ್ಥಕ. ಕಂಟಲ ಇಲ್ಲದಿದ್ದವರು ಪಠಣ ಮಾಡಿದರೆ ಪುಣ್ಯ ಹೆಚ್ಚಾಗುತ್ತಂತೆ. ವಿಷ್ಣುವಿನಿಂದ ಸಂಕರ್ಷಣಾ ಸಂಪತ್ತು. ಶಕ್ತಿ ಶಿವನಿಂದ ಪ್ರದ್ಯುಮ್ನ ಶಕ್ತಿ. ದುರ್ಗೆಯ ಆರಾಧನೆಯಿಂದ ಗೋ ಶಕ್ತಿ ಸಿಗುತ್ತದಂತೆ.

ಜ್ಯೋತಿಷ್ಯರಲ್ಲಿ ಹೋಗಿ ತಲೆ ಕೆಡಿಸಿಕೊಳ್ಳಬೇಡಿ. ಹಣ ಕಳೆದುಕೊಳ್ಳಬೇಡಿ. ನಮ್ಮೊಳಗಿನ ಸ್ವಂತ ಸಾಮಥ್ರ್ಯ ಬಳಸಬೇಕು. ಅದನ್ನು ಬಳಸಬೇಕು. ಮೂರು ತರದ ಆರಾಧನೆಯಿಂದ ಎಲ್ಲಾ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *