ಬೆಂಗಳೂರು: ಎನ್‍ಡಿಎ ಮೈತ್ರಿಕೂಟ ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಬಹುಮತ ಸಂಪಾದಿಸುವತ್ತ ಚಿತ್ತ ಹರಿಸಿದೆ. ಇತ್ತ ಕೋವಿಂದ್ ಆಯ್ಕೆಯನ್ನ ಒಪ್ಪದ ವಿಪಕ್ಷಗಳು ಮಾತ್ರ ಪ್ರತಿಸ್ಪರ್ಧಿಯನ್ನ ಮಟ್ಟ ಹಾಕುವಲ್ಲಿ ತಲೆಕೆಡೆಸಿಕೊಂಡಿವೆ.
ಇದೀಗ ದಲಿತ ಅಭ್ಯರ್ಥಿಯನ್ನ ಎದುರಿಸಲು ಮತ್ತೋರ್ವ ಬಲಿಷ್ಠ ದಲಿತ ನಾಯಕನತ್ತ ವಿಪಕ್ಷಗಳು ಚಿತ್ತ ಹರಿಸಿವೆ. ಹೀಗಾಗಿ ಸಿಪಿಎಂ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸೂಕ್ತ ಅಭ್ಯರ್ಥಿ ಎಂದು ಹೇಳಿದೆ. ಕಾಂಗ್ರೆಸ್ ಪಕ್ಷದಿಂದ ದಲಿತ ನಾಯಕರಾದ ಸುಶೀಲ್ ಕುಮಾರ್ ಶಿಂಧೆ ಹಾಗೂ ಮೀರಾ ಕುಮಾರ್ ಹೆಸರುಗಳು ಕೇಳಿಬರುತ್ತಿವೆ.
Advertisement
ಒಟ್ನಲ್ಲಿ ರಾಷ್ಟ್ರಪತಿ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ವಿಪಕ್ಷಗಳು ಸೋನಿಯಾ ಗಾಂಧಿ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಅಭ್ಯರ್ಥಿಯನ್ನ ಅಂತಿಮಗೊಳಿಸಲಿವೆ. ಇಂದು ಸಂಜೆ ಸೋನಿಯಾ ನೇತೃತ್ವದಲ್ಲಿ 18 ಪಕ್ಷಗಳು ಮಹತ್ವದ ಸಭೆ ನಡೆಸಲಿವೆ.
Advertisement
ಈ ಮಧ್ಯೆ ವಿಪಕ್ಷಗಳ ಪ್ರಮುಖ ಅಸ್ತ್ರವಾಗಿದ್ದ ಜೆಡಿಯು ಪಕ್ಷ ಎನ್‍ಡಿಎಗೆ ಬೆಂಬಲ ಸೂಚಿಸಿದೆ.
Advertisement