ಅತ್ಯಾಚಾರ ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾ – ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಪ್ರಜ್ವಲ್ ರೇವಣ್ಣ

Public TV
1 Min Read
PRAJWAL REVANNA 2 1

ಬೆಂಗಳೂರು: ಹಾಸನದ ಮಾಜಿ ಸಂಸದ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣಗೆ (Prajwal Revanna) ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಇಂದು ಬಿಗ್‌ ಶಾಕ್‌ ಕೊಟ್ಟಿದೆ. ಅತ್ಯಾಚಾರ ಪ್ರಕರಣದದಿಂದ ತನ್ನನ್ನು ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ (Court) ವಜಾಗೊಳಿಸಿದೆ.

ಕೆ.ಆರ್‌ ನಗರ (KR Nagara) ಸಂತ್ರಸ್ತ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ, ಆದ್ದರಿಂದ ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಪ್ರಜ್ವಲ್‌ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Representatives Speical Court) ವಜಾಗೊಳಿಸಿತು. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!

ಇದೇ ವೇಳೆ ಆರೋಪಿ ಮೇಲಿರುವ ಆರೋಪಗಳನ್ನು ನ್ಯಾಯಾಧೀಶರು ಒತ್ತಿ ಹೇಳಿದ್ರು, ಆರೋಪ ಓದಿ ಹೇಳುವಾಗ ನ್ಯಾಯಾಧೀಶರ ಮುಂದೆಯೇ ಕೈ ಮುಗಿದು ಪ್ರಜ್ವಲ್‌ ರೇವಣ್ಣ ಕಣ್ಣೀರು ಹಾಕಿದರು. ಇದನ್ನೂ ಓದಿ: ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?

Prajwal Revanna 4

ಏಪ್ರಿಲ್‌ 9ರಿಂದ ವಿಚಾರಣೆ
ಇನ್ನೂ ಕೆ.ಆರ್‌ ನಗರದ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಚಾರ್ಜ್ ಫ್ರೇಮ್ (ಆರೋಪ ನಿಗದಿ) ಮಾಡಿದ ಕೋರ್ಟ್‌ ಟ್ರಯಲ್‌ ಪ್ರಾರಂಭಿಸಲು ಸಮಯ ನಿಗದಿಪಡಿಸಿತು. ಅದರಂತೆ ಏಪ್ರಿಲ್‌ 9ರಿಂದ ದೋಷಾರೋಪ ಪಟ್ಟಿಯ ಮೇಲೆ ವಿಚಾರಣೆ ಆರಂಭವಾಗಲಿದೆ. ಇದನ್ನೂ ಓದಿ: ಕೊಲೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಪತಿಗೆ ಶಾಕ್‌ – 4 ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ!

Share This Article