ನವದೆಹಲಿ: ಆರೋಗ್ಯ ಸಮಸ್ಯೆಯಿಂದ ಸಂಸತ್ ಅಧಿವೇಶನಕ್ಕೆ ಗೈರಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರಿಂದ ಅಧಿವೇಶನಕ್ಕೆ ಹಾಜರಾಗಿದ್ದು ತಡವಾಯಿತು. ಇವತ್ತು ಪ್ರಮಾಣವಚನ ಸ್ವೀಕರಿಸಿದ್ದೇನೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೈಪೋಟಿ ಇರಲಿಲ್ಲ. ಕ್ಷೇತ್ರದಲ್ಲಿ ಬಹಳ ಅಭಿವೃದ್ಧಿ ಕೆಲಸ ಮಾಡಿದ್ದರಿಂದ ನನಗೆ ಇದು ಸಾಧ್ಯವಾಯಿತು ಎಂದರು.
Advertisement
Advertisement
ರಾಜ್ಯದಲ್ಲಿ ನೀರಾವರಿ ಸಮಸ್ಯೆ ಹೆಚ್ಚಿದೆ. ದೇವೇಗೌಡರು ನಾಡಿನ ವಿಚಾರವಾಗಿ ಸಂಸತ್ ನಲ್ಲಿ ಧ್ವನಿಯಾಗುವ ನಾಯಕರಾಗಿದ್ದರು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅವರು ಸಂಸತ್‍ನಲ್ಲಿ ಇರಬೇಕೆಂಬ ಆಸೆ ನನ್ನದು. ಆದ್ದರಿಂದಲೇ ನಾನು ಅವರಿಗೆ ಮನವಿ ಮಾಡಿದ್ದೆ. ಆ ವೇಳೆಯೇ ನನ್ನ ರಾಜೀನಾಮೆಯನ್ನ ಅವರ ಮುಂದಿಟ್ಟಿದ್ದೆ. ಅವರು ಯಾವಾಗ ಬೇಕಾದರು ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಅವರ ಕ್ಷೇತ್ರದಲ್ಲಿ ನಾನು ಗೆದ್ದು ಬಂದಿರುವುದರಿಂದ ಅವರಿಗೆ ನಾನು ಈ ಸ್ಥಾನ ಬಿಟ್ಟು ಕೊಡುತ್ತಿದ್ದೇನೆ ಎಂಬ ಪ್ರಶ್ನೆ ಬರುವುದಿಲ್ಲ ಎಂದರು.
Advertisement
Advertisement
ಈಗಲೂ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಅವರು ಈ ಸ್ಥಾನದಲ್ಲಿ ಇರಬೇಕು ಎಂಬುವುದು ರಾಜ್ಯ ಜನರ ಆಶಯ. ಇಂದು ನಾನು ಪ್ರಮಾಣ ಸ್ವೀಕಾರ ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಒಂದು ಪಕ್ಷವನ್ನು ಕಟ್ಟಿ ಬೆಳೆಸಿ, ಡೆಲ್ಲಿ ಮಟ್ಟದಲ್ಲಿ ರಾಜ್ಯದ ಸಮಸ್ಯೆಗಳನ್ನು ಚರ್ಚೆ ಮಾಡುವ ಶಕ್ತಿ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ನನ್ನ ಮಾತಿಗೆ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]